ಶ್ರೀಮಂಗಲ, ಏ. ೧೦: ನಂ. ೩೩ನೇ ಮಾಜಿ ಸೈನಿಕರ ಸಂಘ ಟಿ. ಶೆಟ್ಟಿಗೇರಿ ಇದರ ೨೦೨೦-೨೧ನೇ ಸಾಲಿನ ವಾರ್ಷಿಕ ಮಹಾಸಭೆ ತಾ. ೧೧ ರಂದು (ಇಂದು) ಪೂರ್ವಾಹ್ನ ೧೦ ಗಂಟೆಗೆ ಸಂಘದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಕಟ್ಟೇರ ಎ. ವಿಶ್ವನಾಥ್ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಈ ಸಂದರ್ಭ ಸಂಘದ ನೂತನ ಆಡಳಿತ ಮಂಡಳಿಯನ್ನು ಚುನಾವಣೆ ಮೂಲಕ ಆಯ್ಕೆ ಮಾಡಲಾಗುವುದು ಹಾಗೂ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗುವುದೆಂದು ಟಿ.ಶೆಟ್ಟಿಗೇರಿ ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ ಉಳುವಂಗಡ ಎಸ್. ಗಣಪತಿ ತಿಳಿಸಿದ್ದಾರೆ.