ರಾತ್ರಿ ಓಡಾಟಕ್ಕೆ ಪಾಸ್ ಇಲ್ಲ - ಕಮಲ್ ಪಂತ್

ಬೆAಗಳೂರು, ಏ. ೧೦: ಕೊರೊನಾ ನೈಟ್ ಕರ್ಫ್ಯೂ ಸಮಯದಲ್ಲಿ ರಾತ್ರಿ ಓಡಾಟಕ್ಕೆ ಯಾವುದೇ ಪಾಸ್ ನೀಡುವುದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆಯುಕ್ತರು, ತಾ. ೨೦ ರವರೆಗೂ ನೈಟ್ ಕರ್ಪ್ಯೂ ಜಾರಿ ಇರುವುದರಿಂದ ರಾತ್ರಿ ೧೦ ನಂತರ ಯಾರೂ ಕೂಡ ಹೊರಗಡೆ ಓಡಾಡುವಂತಿಲ್ಲ. ತುರ್ತು ಅಗತ್ಯ ಸೇವೆಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು

ಕೋಡಿಹಳ್ಳಿ ಚಂದ್ರಶೇಖರ್ ಪೊಲೀಸರ ವಶಕ್ಕೆ

ಬೆಳಗಾವಿ, ಏ. ೧೦: ಸಾರಿಗೆ ನೌಕರರ ಮುಷ್ಕರಕ್ಕೆ ಸಂಬAಧಿಸಿದAತೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಬೆಳಗಾವಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಳಗಾವಿಯ ಸುವರ್ಣಸೌಧ ಬಳಿಯ ಸುವರ್ಣ ಗಾರ್ಡನ್‌ನಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಸಭೆಗೆ ನಿರ್ಧರಿಸಿದ್ದರು. ಆದರೆ ಸಭೆಗೂ ಮುನ್ನವೇ ಖಾಸಗಿ ಹೊಟೇಲ್‌ನಲ್ಲಿದ್ದ ಕೋಡಿಹಳ್ಳಿ ಚಂದ್ರಶೇಖರನ್ನು ಪೊಲೀಸರು ವಶಕ್ಕೆ ಪಡೆದಿದ್ದು ಬೆಳಗಾವಿಯ ಹಿರೇಬಾಗೇವಾಡಿ ಠಾಣೆಗೆ ಕರೆದೊಯ್ದರು. ತಮ್ಮನ್ನು ವಶಕ್ಕೆ ಪಡೆದಿರುವ ಸಂಬAಧ ಪ್ರತಿಕ್ರಿಯಿಸಿದ ಕೋಡಿಹಳ್ಳಿ ಚಂದ್ರಶೇಖರ್ ತಮ್ಮ ಹೋರಾಟವನ್ನು ಸರ್ಕಾರ ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಬಿಹಾರ ಪೊಲೀಸ್ ನಿರೀಕ್ಷಕರನ್ನು ಹೊಡೆದು ಹತ್ಯೆ!

ಕಿಶನ್ ಗಂಜ್, ಏ. ೧೦: ಬಿಹಾರದ ಪೊಲೀಸ್ ನಿರೀಕ್ಷಕರನ್ನು ಪಶ್ಚಿಮ ಬಂಗಾಳದ ಗುಂಪೊAದು ಹೊಡೆದು ಹತ್ಯೆ ಮಾಡಿರುವ ಘಟ£ ವರದಿಯಾಗಿದೆ. ಕಿಶನ್ ಗಂಜ್‌ನ ಪೊಲೀಸ್ ಠಾಣೆಯ ಎಸ್‌ಹೆಚ್‌ಒ ಅಶ್ವಿನಿ ಕುಮಾರ್ ಮೃತ ಪೊಲೀಸ್ ಅಧಿಕಾರಿಯಾಗಿದ್ದಾರೆ. ಸಾದರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ದಾಖಲಾಗಿದ್ದ ದ್ವಿಚಕ್ರ ವಾಹನ ಕಳವು ಪ್ರಕರಣದ ಆರೋಪಿಯನ್ನು ಬಂಧಿಸಲು ಬಿಹಾರದ ಕಿಶನ್ ಗಂಜ್‌ನ ಗಡಿ ಪ್ರದೇಶದಲ್ಲಿರುವ ಪಶ್ಚಿಮ ಬಂಗಾಳದ ಪಂತಪಾರ ಗ್ರಾಮಕ್ಕೆ ತೆರಳಿದ್ದಾಗÀ ಅಲ್ಲಿನ ಸ್ಥಳೀಯರು ಪೊಲೀಸರನ್ನು ಸುತ್ತುವರೆದು ದಾಳಿ ನಡೆಸಿದ್ದಾರೆ. ಗುಂಪು ಹಲ್ಲೆಯಿಂದ ತಪ್ಪಿಸಿಕೊಳ್ಳಲು ಪೊಲೀಸ್ ಅಧಿಕಾರಿ ಯತ್ನಿಸಿದರಾದರೂ ಸಾಧ್ಯವಾಗದೇ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.