ಮಡಿಕೇರಿ, ಏ. ೧೦: ತಾ.೧೩ ರಂದು ಕಾರುಗುಂದ ಗ್ರಾಮದ ಶ್ರೀ ಪಟ್ಟಿ ಶಾಸ್ತಾವು ಅಂಬಲದಲ್ಲಿ ವರ್ಷಾವಧಿ ತೆರೆ ಹಬ್ಬ ಕಾರುಗುಂದ ಗ್ರಾಮದ ಶ್ರೀ ಪಟ್ಟಿ ಶಾಸ್ತಾವು ಅಂಬಲದಲ್ಲಿ ವರ್ಷಾವಧಿ ತೆರೆ ಹಬ್ಬವನ್ನು ಏ.೧೩ ರಂದು ಅಪರಾಹ್ನ ೩.೩೦ ಗಂಟೆಗೆ ನಡೆಸಲಾಗುವುದು.
ಗ್ರಾಮಸ್ಥರು / ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ / ಆಶೀರ್ವಾದ ಪಡೆದು ಕೊಳ್ಳಬೇಕೆಂದು ತಕ್ಕ ಮುಖ್ಯಸ್ಥರು ಮತ್ತು ಆಡಳಿತ ಮಂಡಳಿಯವರು ಕೋರಿದ್ದಾರೆ.
ಸರಕಾರದ ನಿಯಮದಂತೆ ಪ್ರತಿಯೊಬ್ಬರೂ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದು ಕೊಳ್ಳಬೇಕಾಗಿ ಸಮಿತಿ ತಿಳಿಸಿದೆ.