ಪೊನ್ನAಪೇಟೆ, ಏ. ೧೦: ಪೊನ್ನಂಪೇಟೆ ತಾಲೂಕಿನಲ್ಲಿ ಕಳೆದ ಹಲವು ಸಮಯಗಳಿಂದ ಆರಂಭಗೊAಡಿರುವ ಹುಲಿ ಸೇರಿದಂತೆ ವನ್ಯಜೀವಿಗಳ ಹಾವಳಿ ನಿರಂತರವಾಗಿ ಮುಂದುವರೆಯುತ್ತಿದೆ. ಈ ಕುರಿತು ಎಷ್ಟೇ ಜನಾಕ್ರೋಶ ವ್ಯಕ್ತಗೊಂಡರೂ ಅರಣ್ಯ ಇಲಾಖೆ ಮತ್ತು ಸರಕಾರ ಯಾವುದೇ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ ಎಂದು ಆಪಾದಿಸಿರುವ ಕೊಡಗು ಜಿ.ಪಂ. ಹಿರಿಯ ಸದಸ್ಯ ಬಿ.ಎನ್. ಪ್ರಥ್ಯು, ಜನರನ್ನು ತೀವ್ರವಾಗಿ ಕಾಡುತ್ತಿರುವ ವನ್ಯಜೀವಿಗಳ ನಿರಂತರ ಹಾವಳಿಯ ವಿರುದ್ಧ ಸರಕಾರದ ವಿಶೇಷ ಗಮನ ಸೆಳೆಯಲು ಜಿಲ್ಲಾ ಮಟ್ಟದಲ್ಲಿ ಬೃಹತ್ ಪ್ರತಿಭಟನೆ ಆಯೋಜಿಸುವ ಕುರಿತು ಗಂಭೀರ ಚಿಂತನೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗನ್ನು ಸಂಪೂರ್ಣವಾಗಿ ಅರಣ್ಯೀಕರಣ ಮಾಡುವ ಹುನ್ನಾರದಿಂದಾಗಿ ಅರಣ್ಯ ಇಲಾಖೆ ಜಿಲ್ಲೆಯ ಜನರ ಹಿತವನ್ನೇ ಮರೆತಿದೆ. ಸರಕಾರದ ಗಮನಕ್ಕೂ ಬಾರದಂತೆ ನಡೆಯುತ್ತಿರುವ ಈ ಹುನ್ನಾರದ ಹಿಂದೆ ಇಲಾಖೆಯ

ಕೆಲವು ಉನ್ನತಾಧಿಕಾರಿಗಳ ನೇರ ಕೈವಾಡವಿದೆ. 'ಕೊಡಗಿನ ಜನರು ಸತ್ತರೂ ಪರವಾಗಿಲ್ಲ, ಇಲ್ಲಿ ಅರಣ್ಯ ಮತ್ತು ವನ್ಯಜೀವಿಗಳು ಮಾತ್ರ ಉಳಿಯಬೇಕು' ಎಂಬ ತತ್ವದಡಿ ಕಾರ್ಯನಿರ್ವಹಿಸುತ್ತಿರುವ ಅರಣ್ಯ ಇಲಾಖೆ ಕೊಡಗಿನ ಮುಗ್ಧ ಜನರ ತಾಳ್ಮೆಯನ್ನು ನಿರಂತರವಾಗಿ ಪರೀಕ್ಷಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಳೆಲೆ ಸಮೀಪದ ದೇವನೂರಿನಲ್ಲಿ ಇದೇ ಗುರುವಾರದಂದು ಕೂಡ ಸ್ವಾತಿ ಕುಟ್ಟಯ್ಯ ಎಂಬುವವರ ಕೊಟ್ಟಿಗೆಗೆ ದಾಳಿ ಮಾಡಿರುವ ಹುಲಿ ಅವರ ಹಸುವೊಂದನ್ನು ಕೊಂದುಹಾಕಿದೆ. ಇದುವರೆಗೂ ಇವರ ಒಟ್ಟು ೫ ಜಾನುವಾರು ಗಳನ್ನು ಹುಲಿ ಬಲಿ ಪಡೆದುಕೊಂಡಿದೆ. ಇದಕ್ಕೆ ಯಾರು ಹೊಣೆ ಎಂದು ಖಾರವಾಗಿ ಪ್ರಶ್ನಿಸಿರುವ ಬಿ.ಎನ್. ಪ್ರಥ್ಯು ಅವರು, ಬಾಳೆಲೆ ವ್ಯಾಪ್ತಿಯಲ್ಲಿ ಹುಲಿ, ಚಿರತೆ, ಕಾಡಾನೆ, ಕರಡಿಗಳ ಹಾವಳಿ ಮಿತಿ ಮೀರುತ್ತಿದ್ದರೂ ಜನ ವಿರೋಧಿ ಧೋರಣೆಯ ಅರಣ್ಯ ಇಲಾಖೆ ಮಾತ್ರ ಇದನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದಿದ್ದಾರೆ. ಅರಣ್ಯ ಇಲಾಖೆಯ ಬೇಜವಾಬ್ದಾರಿ ವರ್ತನೆಯ ಬಗ್ಗೆ ಜನತೆ ತೀವ್ರವಾಗಿ ಬೇಸತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸುವ ಹಂತ ತಲುಪಿದೆ. ಆದ್ದರಿಂದ ಈ ಬಗ್ಗೆ ಜಿಲ್ಲೆಯಲ್ಲಿ ಪಕ್ಷಾತೀತ ಮತ್ತು ಜಾತ್ಯತೀತವಾಗಿ ಜನರನ್ನು ಮತ್ತು ಜನಪ್ರತಿನಿಧಿಗಳನ್ನು ಸಂಘಟಿಸಿ ಬೃಹತ್ ಪ್ರತಿಭಟನೆಯ ಮೂಲಕ ಸರಕಾರದ ಗಮನ ಸೆಳೆಯುವುದು ಅನಿವಾರ್ಯವಾಗಿದೆ. ಈ ಕುರಿತು ಗಂಭೀರ ಚಿಂತನೆ ನಡೆಯುತ್ತಿದ್ದು, ಕೋವಿಡ್ ಭೀತಿಯ ಪರಿಸ್ಥಿತಿಯನ್ನು ನೋಡಿ ನಿರ್ಧಾರ ಪ್ರಕಟಿಸ ಲಾಗುವುದು. ಅಲ್ಲದೆ ಕಾನೂನು ಹೋರಾಟ ಮುಂದುವರಿಸುವ

ಕುರಿತು ಕೂಡ ತಜ್ಞರೊಂದಿಗೆ ಚರ್ಚಿಸಲಾಗುತ್ತಿದೆ ಎಂದು ಬಿ.ಎನ್. ಪ್ರಥ್ಯು ಮಾಹಿತಿ ನೀಡಿದರು.