ಗೋಣಿಕೊಪ್ಪ ವರದಿ, ಏ. ೧೦ : ಬಾಳೆಲೆ ವಿಜಯಲಕ್ಷಿö್ಮ ಜೂನಿಯರ್ ಕಾಲೇಜು ಮೈದಾನದಲ್ಲಿ ಕೊಡವ ಕೌಟುಂಬಿಕ ಆಹ್ವಾನಿತ ತಂಡಗಳ ಕೊಟ್ಟಂಗಡ ಕ್ರಿಕೆಟ್ ಕಪ್‌ನಲ್ಲಿ ಮೊದಲ ದಿನ ಮೂರು ತಂಡಗಳು ಗೆಲುವಿನ ಆರಂಭ ಪಡೆದುಕೊಂಡಿವೆ.
ತAಬುಕುತ್ತೀರ ಮತ್ತು ಮಂಡುವAಡ ತಂಡಗಳು ತಲಾ ಎರಡು ಗೆಲುವು, ಪಂದ್ಯAಡ ತಂಡ ಮೊದಲ ಜಯದ ಮೂಲಕ ಗೆಲುವಿನ ನಗೆ ಬೀರಿದವು.
ಫಲಿತಾಂಶ ; ಪಂದ್ಯAಡ ತಂಡವು ಮಚ್ಚಮಾಡ ತಂಡವನ್ನು ೮ ವಿಕೆಟ್‌ಗಳಿಂದ ಮಣಿಸಿತು. ಮಚ್ಚಮಾಡ ಟಾಸ್ ಸೋತು ಮೊದಲು ಬ್ಯಾಟ್ ಮಾಡಿ ನಿಗದಿತ ೮ ಓವರ್‌ಗಳಿಗೆ ೮ ವಿಕೆಟ್ ಕಳೆದುಕೊಂಡು ೪೬ ರನ್ ಗಳಿಸಿತು. ಮಾಚಯ್ಯ ೧೦ ರನ್ ಗಳಿಸಿದರು. ಪಂದ್ಯAಡ ತಂಡವು ೬ ಓವರ್‌ಗಳಲ್ಲಿ ೪೭ ರನ್ ಸಿಡಿಸಿ ಗೆಲುವು ದಾಖಲಿಸಿತು. ಪಂದ್ಯAಡ ತಮ್ಮಯ್ಯ ೪೦ ರನ್ ಬಾರಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮಚ್ಚಮಾಡ ಪೊನ್ನಣ್ಣ ೨, ಪಂದ್ಯAಡ ಅಯ್ಯಪ್ಪ ೩ ವಿಕೆಟ್ ಪಡೆದರು.
ತಂಬುಕುತ್ತೀರ ; ತಂಬುಕುತ್ತೀರ ತಂಡವು ಮೊದಲ ಪಂದ್ಯದಲ್ಲಿ ಕೋದೇಂಗಡವನ್ನು ೮ ವಿಕೆಟ್‌ಗಳಿಂದ ಸೋಲಿಸಿತು. ಕೋದೇಂಗಡ ಮೊದಲು ಬ್ಯಾಟ್ ಮಾಡಿ ೬೩ ರನ್ ಗಳಿಸಿತು. ತಂಬುಕುತ್ತೀರ ೪.೨ ಓವರ್‌ಗಳಿಗೆ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ೬೮ ರನ್ ಗಳಿಸಿ ಗೆಲುವು ಪಡೆದುಕೊಂಡಿತು. ಕೋದೇಂಗಡ ಅಪ್ಪಣ್ಣ ೧೪ ರನ್, ತಂಬುಕುತ್ತೀರ ಅರುಣ್ ೪೬ ರನ್, ತಂಬುಕುತ್ತೀರ ಸಾಗರ್ ೨ ವಿಕೆಟ್ ಪಡೆದರು.
ತಂಬುಕುತ್ತೀರ ತಂಡ ೨ ನೇ ಪಂದ್ಯದಲ್ಲಿ ಬಿರುನಾಣಿ ಅಣ್ಣಳಮಾಡ ತಂಡವನ್ನು ೮ ವಿಕೆಟ್‌ಗಳಿಂದ ಮಣಿಸಿ ೨ ನೇ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಯಿತು. ಅಣ್ಣಳಮಾಡ ನೀಡಿದ ೮೬ ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ ತಂಬುಕುತ್ತೀರ ೫.೧ ಓವರ್‌ಗಳಲ್ಲಿ ಸಾಗರ್ ಅವರ ೫೪ ರನ್‌ಗಳ ಕಾಣಿಕೆಯಿಂದ ಗೆಲುವು ದಾಖಲಿಸಿತು. ಅಣ್ಣಳಮಾಡ ಬೋಪಣ್ಣ ೨ ವಿಕೆಟ್ ಪಡೆದರು.
ಮಂಡುವAಡ ; ಮಂಡುವAಡ ತಂಡವು ತನ್ನ ಮೊದಲ ಪಂದ್ಯದಲ್ಲಿ ಕಡೇಮಾಡ ವಿರುದ್ದ ೧೩ ರನ್‌ಗಳ ಗೆಲುವು ಪಡೆಯಿತು. ಮಂಡುವAಡ ೬ ವಿಕೆಟ್‌ಗಳಿಗೆ ೫೮ ರನ್ ಪೇರಿಸಿತು. ನಂತರ ಬ್ಯಾಟ್ ಮಾಡಿದ ಕಡೇಮಾಡ ೭ ವಿಕೆಟ್ ಕಳೆದುಕೊಂಡು ೪೫ ರನ್ ಮಾತ್ರ ದಾಖಲಿಸಲು ಸಾಧ್ಯವಾಯಿತು. ಮಂಡುವAಡ ದರ್ಶನ್ ೨೨, ಹರ್ಷಿತ್ ೩ ರನ್ ನೀಡಿ ೨ ವಿಕೆಟ್ ಕಬಳಿಸಿದರು. ಕಡೇಮಾಡ ಹರ್ಷ ೧೭ ರನ್ ಗಳಿಸಿದರು.
ದ್ವಿತೀಯ ಪಂದ್ಯದಲ್ಲಿ ಮಂಡುವAಡ ತಂಡವು ಅಳಮೇಂಗಡ ವಿರುದ್ದ ೭ ವಿಕೆಟ್‌ಗಳ ಜಯ ಸಾಧಿಸಿ, ೨ ನೇ ಗೆಲುವು ಪಡೆದುಕೊಂಡಿತು. ಮಂಡುವAಡ ೬ ವಿಕೆಟ್‌ಗೆ ೭೧ ರನ್ ಗಳಿಸಿತು. ಅಳಮೇಂಗಡ ೫ ವಿಕೆಟ್ ಕಳೆದುಕೊಂಡು ೬೪ ರನ್ ಗಳಿಸಿ ಸೋಲೊಪ್ಪಿಕೊಂಡಿತು. ಮಂಡುವAಡ ರಿನ್ಸಿ ೨೦, ಅಳಮೇಂಗಡ ದಿಲೀಪ್ ೨೫, ಟಾಟಾ ೩ ವಿಕೆಟ್ ಪಡೆದು ಮಿಂಚಿದರು.
ತಾಂತ್ರಿಕ ನಿರ್ದೇಶಕರಾಗಿ ಕೊಕ್ಕೇಂಗಡ ರಂಜನ್, ತಾಂತ್ರಿಕ ವರ್ಗದಲ್ಲಿ ಮಾಚಂಗಡ ದರ್ಶನ್, ಚೆಕ್ಕೇರ ನವೀನ್, ಆದೇಂಗಡ ಶಾಶ್ವತ್, ಅಳಮೇಂಗಡ ದಿಲೀಪ್, ಅಡ್ಡೇಂಗಡ ಆಕಾಶ್, ಅಳಮೇಂಗಡ ಸೋಮಯ್ಯ, ಕೊಟ್ಟಂಗಡ ಸೂರಜ್, ಅಳಮೇಂಗಡ ಮೋಹನ್, ಕೊಟ್ಟಂಗಡ ರಾಹುಲ್ ಕಾರ್ಯನಿರ್ವಹಿಸಿದರು.