ಕೂಡಿಗೆ, ಏ. ೧೦: ಕೂಡಿಗೆಯ ಸರಕಾರಿ ಕ್ರೀಡಾ ಪ್ರೌಢಶಾಲೆಗೆ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಂಟಿ ನಿರ್ದೇಶಕ ಡಾ. ಜಿತೇಂದ್ರ ಶೆಟ್ಟಿ ಮತ್ತು ಇಲಾಖೆಯ ಇಂಜಿನಿಯರ್ ಹರೀಶ್ ಕೂಡಿಗೆ ಕ್ರೀಡಾ ಶಾಲೆಯ ಆವರಣದಲ್ಲಿ ನಿರ್ಮಾಣಗೊಂಡಿರುವ ಸಿಂಥೆಟಿಕ್ ಟರ್ಫ್ ಹಾಕಿ ಮೈದಾನವನ್ನು ಪರಿಶೀಲನೆ ನಡೆಸಿದರು.ಕೃತಕ ಹಾಕಿ ಮೈದಾನದ ಸಂಪೂರ್ಣವಾದ ಮಾಹಿತಿಯನ್ನು ಇಂಜಿನಿಯರ್‌ರಿAದ ಪಡೆದು ನಂತರ ಅಗಬೇಕಾಗಿರುವ ಕೆಲಸಗಳನ್ನು ಸಂಪೂರ್ಣಗೊಳಿಸುವAತೆ ಸೂಚಿಸಿದರು. ನಂತರ ನಿರ್ಮಾಣವಾಗುತ್ತಿರುವ ಒಳ ಕ್ರೀಡಾಂಗಣಕ್ಕೆ ತೆರಳಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಕೂಡಿಗೆ ಕ್ರೀಡಾ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಕುಂತಿಬೋಪಯ್ಯ ಅಥ್ಲೆಟಿಕ್ ತರಬೇತುದಾರ ಅಂತೋಣಿ ಡಿಸೋಜ, ಹಾಕಿ ತರಬೇತುದಾರ ವೆಂಕಟೇಶ್, ಮಂಜುನಾಥ್, ಶಿಕ್ಷಕರುಗಳಾದ ದೇವಕುಮಾರ್, ಸೇರಿದಂತೆ ಸಹ ಶಿಕ್ಷಕರು ಮತ್ತು ವಸತಿಗೃಹದ ಮೇಲ್ವಿಚಾರಕರು ಹಾಜರಿದ್ದರು.