ಸೋಮವಾರಪೇಟೆ, ಏ. ೯: ಇವರಿಗೆ ಮಾತು ಬಾರದಿದ್ದರೂ ಎಲೆಕ್ಟಿçಕಲ್ ಕೆಲಸದಲ್ಲಿ ಎತ್ತಿದ ಕೈ. ಸೋಮವಾರಪೇಟೆ ವ್ಯಾಪ್ತಿಯಲ್ಲಿ ಯಾವುದೇ ಸಭೆ ಸಮಾರಂಭ, ಗಣಪತಿ ಉತ್ಸವಗಳಿದ್ದರೂ ಇವರದೇ ಬೆಳಕಿನ ವ್ಯವಸ್ಥೆ. ಅತ್ಯಂತ ಕಡಿಮೆ ಹಣಕ್ಕೆ ಉತ್ತಮವಾದ ಲೈಟಿಂಗ್ಸ್ ಅಳವಡಿಸುತ್ತಿದ್ದ ಅಶೋಕ್ ಅವರಿಗೆ ಇದೀಗ ವಿಧಿ, ಇನ್ನೊಬ್ಬರ ಎದುರು ಹಣಕ್ಕಾಗಿ ಕೈಯೊಡ್ಡುವಂತೆ ಮಾಡಿದೆ!

ಎಲೆಕ್ಟಿçಕಲ್ ಕೆಲಸ ಮಾಡುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಕೆಳಬಿದ್ದು ಕಾಲು ಮುರಿತಕ್ಕೊಳಗಾಗಿದೆ. ನಂತರ ಆಸ್ಪತ್ರೆಗೆ ತೆರಳಿ ಶಸ್ತç ಚಿಕಿತ್ಸೆ ಮಾಡಿಸಿಕೊಂಡ ಅಶೋಕ್ ಅವರು, ಕೆಲ ತಿಂಗಳ ತರುವಾಯ ಮತ್ತೆ ಬಿದ್ದು, ಅದೇ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಕಾಲಿನ ಒಳಗಡೆ ಹಾಕಿದ್ದ ರಾಡ್ ಮತ್ತೆ ಕಿತ್ತುಬಂದಿದ್ದು, ಮಗದೊಮ್ಮೆ ಶಸ್ತç ಚಿಕಿತ್ಸೆ ಮಾಡಿಸಿಕೊಳ್ಳಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ.

ಎಲೆಕ್ಟಿçಕಲ್ ಕೆಲಸ ಮಾಡುತ್ತಿದ್ದ ಸಂದರ್ಭ ಜೊತೆಗಿದ್ದ ಪತ್ನಿ ಮತ್ತು ಮಕ್ಕಳು ಇದೀಗ ಅಶೋಕ್ ಅವರನ್ನು ತೊರೆದು ಬೇರೆಡೆ ನೆಲೆಸಿದ್ದಾರೆ. ಬಸವೇಶ್ವರ ರಸ್ತೆಯ ಮನೆಯಲ್ಲಿ ಒಂಟಿಯಾಗಿಯೇ ದಿನ ಕಳೆಯುತ್ತಿರುವ ಇವರು, ಇದೀಗ ಕೆಲಸ ಇದ್ದರೂ ಅದನ್ನು ನಿರ್ವಹಿಸಲು ಶಕ್ತರಾಗಿಲ್ಲ.

ಶಸ್ತç ಚಿಕಿತ್ಸೆಗಾಗಿ ಎದುರು ನೋಡುತ್ತಿರುವ ಕಾಲನ್ನು ಎಳೆದುಕೊಂಡೇ ಪಟ್ಟಣದಲ್ಲಿ ಓಡಾಡುತ್ತಿರುವ ಇವರು, ಅವರಿವರಲ್ಲಿ ಹಣಕ್ಕೆ ಕೈಯೊಡ್ಡುವ ಪರಿಸ್ಥಿತಿಗೆ ಬಂದು ತಲುಪಿದ್ದಾರೆ. ದಿನನಿತ್ಯ ಊಟೋಪಚಾರದೊಂದಿಗೆ ಔಷಧಿಯನ್ನೂ ಸೇವಿಸಬೇಕಿದೆ. ಅಕ್ಕಪಕ್ಕದ ಮನೆಯವರು ಊಟದ ವ್ಯವಸ್ಥೆ ಮಾಡುತ್ತಿದ್ದು, ಔಷಧಿ ಹಾಗೂ ಕಾಲಿನ ಶಸ್ತç ಚಿಕಿತ್ಸೆಗಾಗಿ ಅವರಿವರಲ್ಲಿ ಬೇಡಲೇ ಬೇಕಾದ ಸ್ಥಿತಿಗೆ ಅಶೋಕ್ ತಲುಪಿದ್ದಾರೆ.

ಕಾಲಿನ ಶಸ್ತç ಚಿಕಿತ್ಸೆ ಮತ್ತು ಔಷಧೋಪಚಾರಕ್ಕೆ ೨ ಲಕ್ಷದಷ್ಟು ಹಣ ಖರ್ಚಾಗುವ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ. ತನ್ನೆಲ್ಲಾ ಕಷ್ಟಗಳನ್ನು ಮತ್ತೊಬ್ಬರೊಂದಿಗೆ ಹೇಳಿಕೊಂಡು ಧನಸಹಾಯ ಬೇಡುವ ಎಂದರೆ ಅಶೋಕ್ ಅವರಿಗೆ ಮಾತು ಬರುತ್ತಿಲ್ಲ. ಅವರ ಕೈ ಸನ್ನೆಯ ಭಾಷೆ ಇತರರಿಗೆ ಅರ್ಥವೂ ಆಗುವುದಿಲ್ಲ. ಹುಟ್ಟುತ್ತಲೇ ಮಾತು ಕಳೆದುಕೊಂಡಿರುವ ಅಶೋಕ್ ಅವರು ಇದೀಗ ಕಾಲನ್ನು ಮುರಿದುಕೊಂಡಿದ್ದು, ತನ್ನ ಸಂಕಷ್ಟವನ್ನು ಇತರರಿಗೆ ಮನವರಿಕೆ ಮಾಡಿಕೊಡುವುದಕ್ಕೂ ಆಗದ ಸ್ಥಿತಿಗೆ ತಲುಪಿದ್ದಾರೆ.

ಒಟ್ಟಾರೆ ಶ್ರಿಶಂಕು ಸ್ಥಿತಿಯಲ್ಲಿ ಒದ್ದಾಡುತ್ತಿರುವ ಇವರಿಗೆ ದಾನಿಗಳು ತಮ್ಮ ಕೈಲಾದ ಸಹಾಯ ನೀಡಿದರೆ ಶಸ್ತç ಚಿಕಿತ್ಸೆಗೆ ಒಳಗಾಗಿ, ಇರುವಷ್ಟು ದಿನ ಎಲೆಕ್ಟಿçಕ್ ಕೆಲಸ ಮಾಡಿಕೊಂಡು ಜೀವನ ಸಾಗಿಸಲು ಅನುಕೂಲ ಆಗಬಹುದು.

ಇವರಿಗೆ ಸಹಾಯ ಮಾಡಲು ಇಚ್ಚಿಸುವವರು ಸೋಮವಾರಪೇಟೆಯ ಕಾರ್ಪೋರೇಷನ್ (ಯೂನಿಯನ್ ಬ್ಯಾಂಕ್) ಬ್ಯಾಂಕ್‌ನ ಉಳಿತಾಯ ಖಾತೆ ಅಶೋಕ್‌ಕುಮಾರ್ ಎ.ಎಸ್., ಖಾತೆ ಸಂಖ್ಯೆ ೫೨೦೧೦೧೦೩೪೮೧೨೪೯೭ ಗೆ ಹಣ ಸಂದಾಯ ಮಾಡಬಹುದಾಗಿದೆ. ಆ ಮೂಲಕ ಮಾತು ಬಾರದ ಮೂಕ ಜೀವಿಯ ಬದುಕಿಗೆ ನೆರವು ಒದಗಿಸಬಹುದಾಗಿದೆ.