ಸೋಮವಾರಪೇಟೆ,ಏ.೯: ಸೋಮವಾರಪೇಟೆಯಲ್ಲಿ ಇನ್ನೂ ನಿರ್ಮಾಣದ ಹಂತದಲ್ಲಿರುವ ಸಿಂಥೆಟಿಕ್ ಹಾಕಿ ಟರ್ಫ್ ಮೈದಾನ ಕಾಮಗಾರಿಗೆ ಫೆಡರೇಷನ್ ಆಫ್ ಇಂಟರ್‌ನ್ಯಾಷನಲ್ ಹಾಕಿ ಸಂಸ್ಥೆಯಿAದ ಗುಣಮಟ್ಟದ ಖಾತ್ರಿ ಹಾಗೂ ಉತ್ತಮ ಗುಣಮಟ್ಟದ ಯೋಗ್ಯತಾ ಪತ್ರ ನೀಡಿರುವ ಬಗ್ಗೆ ವರದಿ ಮೂಲಕ ಬೆಳಕು ಚೆಲ್ಲಿದ ಹಿನ್ನೆಲೆ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಂಟಿ ನಿರ್ದೇಶಕರು ಸೇರಿದಂತೆ ಇಲಾಖೆಯ ಇತರ ಅಧಿಕಾರಿಗಳು ಮೈದಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬೆಂಗಳೂರಿನಿAದ ಆಗಮಿಸಿದ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಪುರುಷೋತ್ತಮ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಂಟಿ ನಿರ್ದೇಶಕ ಡಾ. ಜಿತೇಂದ್ರ ಶೆಟ್ಟಿ ಅವರುಗಳು ಸಿಂಥೆಟಿಕ್ ಟರ್ಫ್ ಕಾಮಗಾರಿ ವಿಳಂಬ ಹಾಗೂ ಅವೈಜ್ಞಾನಿಕ ಕಾಮಗಾರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರಲ್ಲದೇ, ಗುಣಮಟ್ಟದ ಕಾಮಗಾರಿ ನಿರ್ವಹಿಸುವಂತೆ ಸಂಬAಧಿಸಿದ ಕಂಪೆನಿಯ ಅಭಿಯಂತರರಿಗೆ ಖಡಕ್ ಸೂಚನೆ ನೀಡಿದರು.

ಮಳೆಗಾಲ ಪ್ರಾರಂಭವಾಗುವುದರೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ಕಳಪೆ ಕಾಮಗಾರಿ ನಿರ್ವಹಿಸಿದರೆ ಗುತ್ತಿಗೆದಾರರ ವಿರುದ್ಧ ಸರ್ಕಾರಕ್ಕೆ

(ಮೊದಲ ಪುಟದಿಂದ) ದೂರು ಸಲ್ಲಿಸಿ, ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಶಿಫಾರಸ್ಸು ಮಾಡಲಾಗುವುದು ಎಂದು ಕಂಪೆನಿಯ ಇಂಜಿನಿಯರ್ ಪ್ರಕಾಶ್ ಅವರನ್ನು ಎಚ್ಚರಿಸಿ ತರಾಟೆಗೆ ತೆಗೆದುಕೊಂಡರು.

ಕ್ರೀಡಾಂಗಣದ ಕಾಮಗಾರಿ ಮುಗಿಯದೆ ಟರ್ಫ್ ಅಳವಡಿಸಿರುವುದರಿಂದ ಸಮಸ್ಯೆ ಎದುರಾಗಿದೆ. ಕಾಮಗಾರಿ ಮುಗಿಯದೆ ಅಂತಾರಾಷ್ಟಿçÃಯ ಹಾಕಿ ಫೆಡರೇಷನ್(ಎಫ್‌ಐಹೆಚ್) ಕಾಮಗಾರಿ ಮುಗಿದಿದೆ ಎಂದು ಗುಣಮಟ್ಟ ಖಾತ್ರಿ ಸರ್ಟಿಫಿಕೆಟ್ ನೀಡಿರುವುದು ಅನುಮಾನಕ್ಕೆ ದಾರಿ ಮಾಡಿದೆ ಎಂದು ಸಿಂಥೆಟಿಕ್ ಟರ್ಫ್ ಉಸ್ತುವಾರಿ ಸಮಿತಿ ಅಧ್ಯಕ್ಷ ಎಂ.ಬಿ.ಅಭಿಮನ್ಯುಕುಮಾರ್ ಹೇಳಿದರು.

ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಬಿಲ್ ತಡೆ ಹಿಡಿಯಲಾಗಿದೆ. ಸಿಂಥೆಟಿಕ್ ಟರ್ಫ್ ಕಾಮಗಾರಿಯಲ್ಲಿ ನಡೆದಿರುವ ಎಲ್ಲಾ ನ್ಯೂನತೆಗಳನ್ನು ಸರಿಪಡಿಸಲಾಗುವುದು. ಟರ್ಫ್ನ ಹೆಚ್ಚುವರಿ ಕಾಮಗಾರಿಗಳಿಗೆ ಹಣ ಬಿಡುಗಡೆಗೊಳಿಸಲು ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಿ ಕ್ರಮ ವಹಿಸಲಾಗುವುದು ಎಂದು ಯುವ ಜಿತೇಂದ್ರ ಶೆಟ್ಟಿ ಭರವಸೆ ನೀಡಿದರು.

ಬೋರ್‌ವೆಲ್‌ಗೆ ಕೂಡಲೆ ೬೦ ಹೆಚ್.ಪಿ. ಮೋಟಾರ್ ಪಂಪ್ ಅಳವಡಿಸಬೇಕು. ಟರ್ಫ್ ಮೇಲೆ ಪ್ಲಾಸಿಕ್ ಹೊದಿಕೆಯನ್ನು ಹಾಕಿ ಟರ್ಫ್ ಹಾಳಾಗದಂತೆ ಎಚ್ಚರ ವಹಿಸಬೇಕು. ವಿದ್ಯುತ್ ಸಂಪರ್ಕ ಪಡೆಯಲು ಕ್ರಮವಹಿಸಬೇಕು. ವಾರಕೊಮ್ಮೆ ಟರ್ಫ್ ಸ್ವಚ್ಛಗೊಳಿಸಬೇಕು. ಮೇ. ೧೫ ಒಳಗೆ ನೀರು ಸಂಗ್ರಹಣ ಟ್ಯಾಂಕ್‌ನ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಪ್ರಾಧಿಕಾರದ ಉಪಾಧ್ಯಕ್ಷ ಪುರುಷೋತ್ತಮ್ ಅವರು, ಇಂಜಿನಿಯರ್‌ಗೆ ಸೂಚಿಸಿದರು.

ಅಂದಾಜುಪಟ್ಟಿಯAತೆ ಸಿಂಥೆಟಿಕ್ ಟರ್ಫ್ ಕಾಮಗಾರಿ ನಡೆದಿಲ್ಲ. ಅಂದಾಜು ಪಟ್ಟಿ ಸಮರ್ಪಕವಾಗಿಲ್ಲ. ಮೈದಾನದ ಎರಡು ಕಡೆಯಲ್ಲೂ ತಡೆಗೋಡೆ ನಿರ್ಮಿಸದಿದ್ದರೆ, ಮಳೆಗಾಲದಲ್ಲಿ ಬರೆ ಕುಸಿದು, ಟರ್ಫ್ ಮೈದಾನದಲ್ಲಿ ಕೆಸರು ಸಂಗ್ರಹವಾಗುತ್ತದೆ ಎಂದು ಸಿಂಥೆಟಿಕ್ ಟರ್ಫ್ ಉಸ್ತುವಾರಿ ಸಮಿತಿ ಕಾರ್ಯದರ್ಶಿ ಎಸ್.ಮಹೇಶ್ ಹೇಳಿದರು. ತಡೆಗೋಡೆ ನಿರ್ಮಾಣಕ್ಕೆ ಹೆಚ್ಚುವರಿ ೬೫ ಲಕ್ಷ ರೂ.ಗಳನ್ನು ಬಿಡುಗಡೆಗೊಳಿಸಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದು ಪುರುಷೋತ್ತಮ್ ಭರವಸೆ ನೀಡಿದರು.

ಹಾಕಿ ಸಿಂಥೆಟಿಕ್ ಟರ್ಫ್ ಬಗ್ಗೆ ಕೊಡಗಿನ ಜನರಿಗೆ ಹೆಚ್ಚು ತಿಳಿದಿದೆ. ಕ್ರೀಡಾಪಟುಗಳು ಹಾಗೂ ಕ್ರೀಡಾಪ್ರೇಮಿಗಳ ಸಲಹೆ ಪಡೆದುಕೊಂಡು ಟರ್ಫ್ ಕೆಲಸ ಮಾಡಬೇಕು. ಗುಣಮಟ್ಟದ ಕಾಮಗಾರಿ ನಡೆಯದಿದ್ದರೆ ಕ್ರಮ ಅನಿವಾರ್ಯವಾಗುತ್ತದೆ ಎಂದು ಅಧಿಕಾರಿಗಳನ್ನು ಎಚ್ಚರಿಸಿದರು. ಮೇ ಅಂತ್ಯದ ಒಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಇಂಜಿನಿಯರ್ ಭರವಸೆ ನೀಡಿದರು.

ಈ ಸಂದರ್ಭ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕ ಗುರುಸ್ವಾಮಿ, ಎಇಇ ಹರೀಶ್, ಉಸ್ತುವಾರಿ ಸಮಿತಿಯ ಬಿ.ಎಂ.ಸುರೇಶ್, ಲಕ್ಷಿö್ಮÃಕಾಂತ್, ಎಸ್.ಬಿ.ಯಶವಂತ್, ಅಭಿಷೇಕ್, ಕಿಬ್ಬೆಟ್ಟ ಮಧು, ಯತೀಶ್, ಹಾಕಿ ಕೋಚ್ ವೆಂಕಟೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.