ಸೋಮವಾರಪೇಟೆ,ಏ.೯: ಪಟ್ಟಣದ ರೇಂಜರ್ ಬ್ಲಾಕ್‌ನಲ್ಲಿ ವ್ಯಕ್ತಿಯೋರ್ವರು ಸಾರ್ವಜನಿಕ ತಡೆಗೋಡೆಯ ಮೇಲೆಯೇ ಅಕ್ರಮವಾಗಿ ಶೌಚಾಲಯವನ್ನು ನಿರ್ಮಿಸಿರುವ ಹಿನ್ನೆಲೆ ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಪಟ್ಟಣ ಪಂಚಾಯಿತಿಯ ಅನುಮತಿಯಿಲ್ಲದೆ ತಡೆಗೋಡೆಯ ಮೇಲೆ ಶೌಚಾಲಯವನ್ನು ನಿರ್ಮಿಸಿದ್ದು, ಈ ಕುರಿತು ಪಂಚಾಯಿತಿ ವತಿಯಿಂದ ನೋಟೀಸ್ ನೀಡಿದ್ದರೂ, ತೆರವು ಗೊಳಿಸದ ಹಿನ್ನೆಲೆಯಲ್ಲಿ ಮುಖ್ಯಾಧಿಕಾರಿ ಪಿ.ನಾಚಪ್ಪ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಠಾಣಾಧಿಕಾರಿ ಶ್ರೀಧರ್ ಮುಂದಿನ ಕ್ರಮ ಕೈಗೊಂಡಿದ್ದಾರೆ.