ವೀರಾಜಪೇಟೆ, ಏ. ೯: ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ ವಿಶ್ವನಾಥ್ ಸಿಂಪಿ ಅವರ ತಂಡ ಮಹಿಳೆಯ ಉದರದಲ್ಲಿದ್ದ ೭ ಕೆ ಜಿ ಗೆಡ್ಡೆಯನ್ನು ಶಸ್ತçಚಿಕಿತ್ಸೆ ನಡೆಸುವುದರ ಮೂಲಕ ಯಶಸ್ವಿಯಾಗಿದ್ದಾರೆ.

ಮೈಸೂರಿನ ಅಝರ್ ಕೌಸರ್ ಎಂಬವರು ಹೊಟ್ಟೆನೋವು ಎಂದು ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಪರೀಕ್ಷಗೆ ಒಳಪಡಿಸಿದಾಗ ಹೊಟ್ಟೆಯಲ್ಲಿ ಗೆಡ್ಡೆ ಇರುವುದು ಖಾತ್ರಿಯಾಯಿತು. ಪ್ರಸೂತಿ ತಜ್ಞೆ ರೇಣುಕಾ ಹಾಗೂ ಅರವಳಿಕೆ ತಜ್ಞ ಡಾ ಸುರೇಶ್ ಹಾಗೂ ದಾದಿಯರ ಸಹಾಯದಿಂದÀ ಯಶಸ್ವಿಯಾಗಿ ಶಸ್ತç ಚಿಕಿತ್ಸೆ ನಡೆಸಲಾಗಿದೆ. ರೋಗಿ ಆರೋಗ್ಯವಾಗಿದ್ದಾರೆ ಎಂದು ಡಾ. ವಿಶ್ವನಾಥ್ ಸಿಂಪಿ ತಿಳಿಸಿದ್ದಾರೆ.