ಮಡಿಕೇರಿ, ಏ. ೯: ಕೊಡಗು ವೈಲ್ಡ್ ಮಾಸ್ರ್ಸ್ ಆಯೋಜಿತ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಮುಕ್ತ ಲೆದರ್ ಬಾಲ್ ಟಿ-೨೦ ಕ್ರೀಡಾಕೂಟ ಕ್ರಿಕೆಟ್ ಪ್ರೇಮಿಗಳನ್ನು ಆಕರ್ಷಿಸುತ್ತಿದೆ. ತಾ. ೪ ರಿಂದ ಪ್ರಾರಂಭವಾದ ಟೂರ್ನಿಯ ಕೊನೆಯ ಪಂದ್ಯ ತಾ. ೧೫ ರಂದು ನಡೆಯಲಿದೆ.
ರಾಜ್ಯದಾದ್ಯಂತ ಹಲವಾರು ಜಿಲ್ಲೆಗಳಿಂದ ಒಟ್ಟು ೨೪ ತಂಡಗಳು ಟೂರ್ನಿಯಲ್ಲಿ ಭಾಗವಹಿಸುತ್ತಿದ್ದು, ಜಿಲ್ಲೆಯ ಕ್ರೀಡಾಪಟುಗಳು ಸೇರಿದಂತೆ ಕೆಲವೊಂದು ತಂಡಗಳಲ್ಲಿ ಐ.ಪಿ.ಎಲ್, ಕೆ.ಪಿ.ಎಲ್ ಆಟಗಾರರು ಸೇರಿದಂತೆ ರಾಷ್ಟಿçÃಯ ‘ಅಂಡರ್-೧೯’ ತಂಡ ಪ್ರತಿನಿಧಿಸಿರುವ ಕ್ರೀಡಾಪಟುಗಳೂ ಭಾಗಿಯಾಗಿದ್ದಾರೆ. ಕೊಡಗಿನ ಹಲವು ತಂಡಗಳು ಸೇರಿದಂತೆ ರಾಜ್ಯದ ಇನ್ನಿತರ ಜಿಲ್ಲೆಗಳಾದ ಬೆಂಗಳೂರು, ಸುಳ್ಯ, ಪುತ್ತೂರು, ದಕ್ಷಿಣ ಕನ್ನಡ, ಹುಣಸೂರು, ಮೈಸೂರು, ಕೆ.ಆರ್ ನಗರಗಳಿಂದಲೂ ತಂಡಗಳು ಭಾಗವಹಿಸಿ ಟೂರ್ನಿಯ ಅಂದ ಹೆಚ್ಚಿಸಿದೆ.
(ಮೊದಲ ಪುಟದಿಂದ) ಪ್ರತಿ ದಿನವು ೨ ಪಂದ್ಯಾಟಗಳು ನಡೆಯುತ್ತಿದ್ದು ಅಂಪೈರ್ಗಳಾಗಿ ಮಡಿಕೇರಿಯ ಮದನ್ ಯಾಲದಾಳು ಹಾಗೂ ಹಾಸನದ ಕೃಷ್ಣ ಕುಮಾರ್ ಕಾರ್ಯನಿರ್ವಹಿಸುತ್ತಿದ್ದಾರೆ.
ಐ.ಪಿ.ಎಲ್ನಲ್ಲಿ ಬೆಂಗಳೂರು, ಮುಂಬೈ ತಂಡ ಪ್ರತಿನಿಧಿಸಿದ ಗೌರವ್ ಧಿಮಾನ್, ಕೆ.ಪಿ.ಎಲ್ ಆಟಗಾರರಾದ ಕೊಡಗಿನ ಸಿ.ಎ ಕಾರ್ತಿಕ್, ಲೋಚನ್ ಅಪ್ಪಣ್ಣ, ಸಿ.ಆರ್ ಅಯ್ಯಪ್ಪ ಸೇರಿದಂತೆ ಆನಂದ್ ದೊಡ್ಡಮನಿ, ಅನುರಾಗ್, ಶಶೀಂದ್ರ, ಮಹಮ್ಮದ್ ತಾವೂ , ರಂಜಿ ಪ್ರತಿನಿಧಿಗಳಾದ ಸ್ಟಾಲಿನ್, ಕ್ರಾಂತಿ ಕುಮಾರ್ ಹಾಗೂ ಇತರ ಪ್ರತಿಷ್ಠತ ಆಟಗಾರರು ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ.
ಟೂರ್ನಿಯ ೨೪ ತಂಡಗಳನ್ನು ೪ ರೆಜಿಮೆಂಟ್ಗಳಾಗಿ ವಿಂಗಡಿಸಲಾಗಿದೆ. ಪ್ರತಿ ರೆಜಿಮೆಂಟ್ನಲ್ಲಿ ೬ ತಂಡಗಳಿದ್ದು, ತಮ್ಮ ರೆಜಿಮೆಂಟ್ನಲ್ಲಿ ಗೆದ್ದ ತಂಡ ಸೆಮಿಫೈನಲ್ ತಲುಪಲಿದೆ. ರೆಜಿಮೆಂಟ್ ೧ ರಿಂದ ‘ಮ್ಯಾಕ್ಸ್ವೆಲ್ ಕೊಡಗು’ ತಂಡ ಹಾಗೂ ರೆಜಿಮೆಂಟ್ ೨ ರಿಂದ ‘ಮೂನ್ ಸ್ಟಾರ್’ ತಂಡ ಸೆಮಿಫೈನಲ್ ಪ್ರವೇಶಿಸಿವೆ. ರೆಜಿಮೆಂಟ್ ೩ ಮತ್ತು ೪ ರಿಂದ ಇನ್ನೆರಡು ತಂಡಗಳು ಸೆಮಿಫೈನಲ್ ತಲುಪಲಿವೆ. ಪ್ರತಿ ಪಂದ್ಯದ ‘ಲೈವ್ ಸ್ಕೋರ್’ “hಣಣಠಿs://ಛಿಡಿiಛಿheಡಿoes.iಟಿ/ಣouಡಿಟಿಚಿmeಟಿಣ/೨೪೭೨೮೩/WIಐಆ-ಒಂSಖಿಇಖS-ಏAಖಓAಖಿAಏA-ಔPಇಓ-ಖಿಔUಖಓAಒಇಓಖಿ” ಲಿಂಕ್ ಮೂಲಕ ದೊರೆಯುತ್ತದೆ.
ವಿಜೇತರಿಗೆ ರೂ.೧ ಲಕ್ಷ ನಗದು
ಪಂದ್ಯಾಟವು ‘ನಾಕೌಟ್’ ಮಾದರಿಯಲ್ಲಿ ನಡೆಯುತ್ತಿದ್ದು, ತಾ.೧೫ ರಂದು ನಡೆಯಲಿರುವ ಫೈನಲ್ ಪಂದ್ಯಾಟದ ವಿಜೇತರಿಗೆ ಆಕರ್ಷಕ ಟ್ರೋಫಿ ಹಾಗೂ ರೂ.೧ ಲಕ್ಷ ನಗದು ಬಹುಮಾನ ನೀಡಿ ಗೌರವಿಸಲಾಗುವುದು. ದ್ವಿತೀಯ ಪ್ರಶಸ್ತಿ ಪಡೆದ ತಂಡಕ್ಕೆ ರೂ.೬೦ ಸಾವಿರ ನಗದು ನೀಡಲಾಗುತ್ತದೆ. ಇದಲ್ಲದೆ ಫೈನಲ್ ಪ್ರವೇಶಿಸುವ ಎರಡೂ ತಂಡಗಳ ಆಟಗಾರರಿಗೆ ಬೆಳ್ಳಿಯ ಪದಕವನ್ನು ಕೂಡ ನೀಡಲಾಗುವುದಾಗಿ ವೈಲ್ಡ್ ಮಾಸ್ರ್ಸ್ ಪ್ರಮುಖ ರವಿಕಿರಣ್ ಅವರು ಮಾಹಿತಿ ನೀಡಿದ್ದಾರೆ. ಟೂರ್ನಿ ಶ್ರೇಷ್ಠರಿಗೆ ಎಲೆಕ್ಟಿçಕ್ ಬೈಸಿಕಲ್ ನೀಡುವುದಾಗಿಯು ಅವರು ಮಾಹಿತಿ ನೀಡಿದ್ದಾರೆ.
ಇಂದು ಆಕರ್ಷಕ ಟ್ರೋಫಿ ಅನಾವರಣ
ಫೈನಲ್ ಪಂದ್ಯಾಟ ವಿಜೇತರಿಗೆ ಕೊಡಮಾಡುವ ಆಕರ್ಷಕ ಟ್ರೋಫಿ ಇಂದು ಜಿಲ್ಲಾ ಕ್ರೀಡಾಂಗಣದಲ್ಲಿ ಅನಾವರಣಗೊಳ್ಳಲಿದೆ. ವಿಭಿನ್ನ ರೀತಿಯ ಟ್ರೋಫಿಯನ್ನು ಮರದಿಂದ ಮಾಡಲಾಗಿದ್ದು, ಕನಿಷ್ಟ ೬ ಮಂದಿಯ ಸಹಕಾರ ಬೇಕಾಗುರುವುದಾಗಿ ರವಿಕಿರಣ್ ತಿಳಿಸಿದ್ದಾರೆ. ಟೂರ್ನಿ ಆಯೋಜಕರಾದ ವೈಲ್ಡ್ ಮಾಸ್ರ್ಸ್ ಸಂಘಟನೆಯಲ್ಲಿ ರವಿಕಿರಣ್, ಪಂಚಮ್, ಪ್ರಿನ್ಸ್, ಕುಶಾಲಪ್ಪ, ಕೆ.ಟಿ ಪ್ರಶಾಂತ್, ರಿಶಿತ್ ಮಾದಯ್ಯ, ಸುಜಿತ್ ಶೆಟ್ಟಿ ಹಾಗೂ ಇತರರು ಕಾರ್ಯನಿರ್ವಹಿಸುತ್ತಿದ್ದಾರೆ.