ಗೋಣಿಕೊಪ್ಪ ವರದಿ, ಏ. ೯: ಕೊಡವ ಕೌಟುಂಬಿಕ ಆಹ್ವಾನಿತ ತಂಡಗಳ ನಡುವಿನ ಕೊಟ್ಟಂಗಡ ಕ್ರಿಕೆಟ್ ಕಪ್‌ಗೆ ಬಾಳೆಲೆ ವಿಜಯಲಕ್ಷಿö್ಮ ಜೂನಿಯರ್ ಕಾಲೇಜು ಮೈದಾನದಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು. ಕೊಡವ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಕೀತಿಯಂಡ ಕಾರ್ಸನ್ ಕಾರ್ಯಪ್ಪ ಚಾಲನೆ ನೀಡಿದರು. ನಂತರ ಮಾತನಾಡಿ, ಯುವಕರು ಕ್ರೀಡೆಯ ಮೂಲಕ ಹೆಚ್ಚಾಗಿ ತೊಡಗಿಕೊಂಡಿರುವುದು ಕುಟುಂಬದ ಒಗ್ಗಟ್ಟಿಗೆ ಪ್ರಯೋಜನವಾಗುತ್ತಿದೆ. ಕೊಡವ ಕ್ರಿಕೆಟ್ ಜನಾಂಗವನ್ನು ಒಂದುಗೂಡಿಸುವ ಪ್ರಯತ್ನ ಮಾಡಿದೆ ಎಂದರು.

ಯುಕೊ ಸಂಘಟನೆ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಮಾತನಾಡಿ, ಕ್ರೀಡಾಕೂಟದ ಮೂಲಕ ಜನಾಂಗಕ್ಕೆ ಪ್ರಯೋಜನವಾಗುತ್ತಿದ್ದರೂ ಕೂಡ ಕೊಡವಾಮೆ ಉಳಿಸಿಕೊಳ್ಳಲು ಎಲ್ಲಾರೂ ಕೈಜೋಡಿಸಬೇಕಿದೆ. ಇರುವ ಸಂಪನ್ಮೂಲಗಳನ್ನು ಬಳಸಿಕೊಂಡು ಕೊಡವರ ಪೋಷಣೆಗೆ ಕೈಜೋಡಿಸುವ ಹಾಗೂ ಮಣ್ಣಿನ

(ಮೊದಲ ಪುಟದಿಂದ) ರಕ್ಷಣೆ ಅನಿವಾರ್ಯತೆ ಇದೆ ಎಂದರು.

ಕೊಟ್ಟಂಗಡ ಕುಟುಂಬ ಅಧ್ಯಕ್ಷ ಕೊಟ್ಟಂಗಡ ಮುದ್ದಪ್ಪ ದೀಪ ಬೆಳಗಿಸಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಬಾಳೆಲೆ ಕೊಡವ ಸಮಾಜ ಅಧ್ಯಕ್ಷ ಮಲ್ಚೀರ ಬೋಸ್ ಚಿಟ್ಯಪ್ಪ, ಬಾಳೆಲೆ ಗ್ರಾಮ ಪಂಚಾಯಿತಿ ಪೋಡಮಾಡ ಸುಕೇಶ್, ಕೊಟ್ಟಂಗಡ ಕುಟುಂಬ ಕಾರ್ಯದರ್ಶಿ ಪ್ರಕಾಶ್, ವಿಜಯಲಕ್ಷಿö್ಮ ಜೂನಿಯರ್ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ, ಪ್ರಾಂಶುಪಾಲ ಡಾ. ಜೆ. ಸೋಮಣ್ಣ ಪಾಲ್ಗೊಂಡು ಶುಭ ಕೋರಿದರು. ಕೊಟ್ಟಂಗಡ ಜರ್ನಿ ಬೋಜಮ್ಮ ಸ್ವಾಗತಿಸಿದರು. ಕೊಟ್ಟಂಗಡ ಸುಬ್ಬಯ್ಯ ನಿರೂಪಿಸಿದರು.

ಬಲ್ಯಮುಂಡೂರು ತಂಡಕ್ಕೆ ಜಯ: ಉದ್ಘಾಟನೆ ಕಾರ್ಯಕ್ರಮ ಅಂಗವಾಗಿ ಬಲ್ಯಮುಂಡೂರು ಕೊಡವ ಸ್ಟೆçöÊಕರ್ಸ್ ಹಾಗೂ ಬಾಳೆಲೆ ಕೊಡವ ವಾರಿ ಯರ್ಸ್ ತಂಡಗಳ ನಡುವೆ ನಡೆದ ಪ್ರದರ್ಶನ ಪಂದ್ಯದಲ್ಲಿ ಬಲ್ಯಮುಂಡೂರು ಕೊಡವ ಸ್ಟೆçöÊಕರ್ಸ್ ತಂಡವು ೭ ವಿಕೆಟ್‌ಗಳ ಗೆಲುವು ಪಡೆಯಿತು. ಬಾಳೆಲೆ ತಂಡವು ನಿಗದಿತ ೧೦ ಒವರ್‌ಗಳಲ್ಲಿ ೬ ವಿಕೆಟ್‌ಗಳಲ್ಲಿ ೯೨ ರನ್ ಪೇರಿಸಿತು. ಅಚ್ಚಪಂಡ ಅಯ್ಯಪ್ಪ ೪೫, ಅಳಮೇಂಗಡ ದಿಪಿನ್ ೨೬ ರನ್ ೨ ವಿಕೆಟ್ ಪಡೆದರು.

ಬಲ್ಯಮುಂಡೂರು ತಂಡವು ೯.೧ ಓವರ್‌ಗೆ ೩ ವಿಕೆಟ್ ಕಳೆದು ಕೊಂಡು ೯೩ ರನ್ ಗಳಿಸಿತು. ಬಲ್ಯಮುಂಡೂರು ಪರವಾಗಿ ಚೆಕ್ಕೇರ ಆಕಾಶ್ ೫೬, ಮಾಪಣಮಾಡ ಕವನ್ ೧೯ ರನ್ ಗಳಿಸಿದರು. ೨ ವಿಕೆಟ್, ಮಲ್ಲಮಾಡ ಸಂದೇಶ್ ೩ ವಿಕೆಟ್ ಪಡೆದರು. ಟೂರ್ನಿ ತಾಂತ್ರಿಕ ನಿರ್ದೇಶಕರಾಗಿ ಕೊಕ್ಕೇಂಗಡ ರಂಜನ್, ತಾಂತ್ರಿಕ ವರ್ಗದಲ್ಲಿ ಮಾಚಂಗಡ ದರ್ಶನ್, ಚೆಕ್ಕೇರ ನವೀನ್, ಆದೇಂಗಡ ಶಾಶ್ವತ್, ಅಳಮೇಂಗಡ ದಿಲಿಪ್, ಅಡ್ಡೇಂಗಡ ಆಕಾಶ್, ಅಳಮೇಂಗಡ ಸೋಮಯ್ಯ, ಕೊಟ್ಟಂಗಡ ಸೂರಜ್, ಅಳಮೇಂಗಡ ಮೋಹನ್, ಕೊಟ್ಟಂಗಡ ರಾಹುಲ್ ಇದ್ದಾರೆ.

ಶನಿವಾರದಿಂದ ಟೂರ್ನಿ: ಶುಕ್ರವಾರ ಟೂರ್ನಿಗೆ ಅಧಿಕೃತವಾಗಿ ಚಾಲನೆ ನೀಡಲಾಗಿದ್ದು, ಶನಿವಾರದಿಂದ ಪಂದ್ಯಗಳು ಆರಂಭಗೊಳ್ಳಲಿದೆ. ಕೊಡವ ಕುಟುಂಬಗಳ ೧೬ ಬಲಿಷ್ಠ ತಂಡಗಳಾದ ಕಾಣತಂಡ, ಮಚ್ಚಮಾಡ, ಪಂದ್ಯAಡ, ಮಾಳೇಟೀರ (ಕೆದಮುಳ್ಳೂರು), ತಂಬುಕುತ್ತೀರ, ಕೋದೇಂಗಡ, ಕೊಟ್ಟಂಗಡ, ಅಣ್ಣಳಮಾಡ (ಬಿರುನಾಣಿ), ಚೆಕ್ಕೇರ, ಕಾಡ್ಯಮಾಡ, ಕಳಕಂಡ, ಮೂಕೊಂಡ, ಮಂಡು ವಂಡ, ಕಡೇಮಾಡ, ಅಳಮೇಂಗಡ, ಕರಿನೆರವಂಡ ತಂಡಗಳು ಸ್ಪರ್ಧಿಸಲಿವೆ.