ಗೋಣಿಕೊಪ್ಪ ವರದಿ, ಏ. ೭: ದೇವನೂರು ಗ್ರಾಮದ ಅರಮಣಮಾಡ ಕೃಷ್ಣ ಅವರಿಗೆ ಸೇರಿದ ಹಸುವನ್ನು ಹುಲಿ ಕೊಂದು ಹಾಕಿದೆ. ಮಂಗಳವಾರ ರಾತ್ರಿ ಕೊಟ್ಟಿಗೆ ಸಮೀಪ ದಾಳಿ ನಡೆಸಿದೆ. ಇದರಿಂದಾಗಿ ಹಸು ಸ್ಥಳದಲ್ಲಿಯೇ ಸಾವಿಗೀಡಾಗಿದೆ. ಸ್ಥಳಕ್ಕೆ ಸ್ಥಳೀಯ ಅರಣ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.