ನಾಪೋಕ್ಲು, ಏ. ೮: ಕೊಡಗು ಜಿಲ್ಲೆಯಲ್ಲಿಯೇ ಪ್ರಖ್ಯಾತಿಯನ್ನು ಪಡೆದಿರುವ ಶ್ರೀ ಪೊನ್ನು ಮುತ್ತಪ್ಪ ದೇವರ ವಾರ್ಷಿಕ ಉತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು, ತಾ. ೩ ರಂದು ಗಣಪತಿ ಹೋಮದೊಂದಿಗೆ ಹಬ್ಬಕ್ಕೆ ಚಾಲನೆ ನೀಡಲಾಯಿತು. ತಾ. ೪ ರಂದು ಸಂಜೆ ಮುತ್ತಪ್ಪ ದೇವರ ಬೊಳ್ಳಾಟ ನಂತರ ಪವಿತ್ರ ಕಾವೇರಿ ನದಿಯಲ್ಲಿ ಕಲಶ ಸ್ನಾನ ಮಾಡಿ ನಗರದಲ್ಲಿ ಮೆರವಣಿಗೆ ಮೂಲಕ ದೇವಾಲಯಕ್ಕೆ ಬರಲಾಯಿತು. ದೇವಳದಲ್ಲಿ ಮುತ್ತಪ್ಪ ದೇವರ ಕೋಲವು ಕಲಶವನ್ನು ಬರಮಾಡಿಕೊಂಡು ದೇವಾಲಯ ಪ್ರದÀಕ್ಷಿಣೆ ಹಾಕಿ ನಂತರ ನೆರೆದಿದ್ದ ಭಕ್ತಾದಿಗಳಿಗೆ ಅನ್ನದಾನ ಕಾರ್ಯಕ್ರಮ ನಡೆಯಿತು.
ರಾತ್ರಿ ಕುಟ್ಟಿಚಾತ ಬೊಳ್ಳಾಟ, ನಂತರ ಗುಳಿಗ ದೇವರ ಕೋಲ ನಡೆದು ನಂತರ ಕುಟ್ಟಿಚಾತ ದೇವರ ಕೋಲ ನಡೆಯಿತು. ತಾ. ೫ ರ ಬೆಳಿಗ್ಗೆ ಕಾಲ ೬ ಗಂಟೆಗೆ ಶ್ರೀ ಪೊನ್ನು ಮುತ್ತಪ್ಪ ಮತ್ತು ತಿರೋಪನೆ ದೇವರ ಕೋಲ ನಡೆದು ಹಬ್ಬವು ಸಂಪನ್ನಗೊAಡಿತ್ತು.