ವೀರಾಜಪೇಟೆ, ಏ. ೭: ಸಮೀಪದ ಆರ್ಜಿ ಗ್ರಾಮದ ಶ್ರೀ ಕಂಡಿಮಕ್ಕಿ ತ್ರಿಮೂರ್ತಿ ದೇವರ ಉತ್ಸವವು ವಿವಿಧ ಧಾರ್ಮಿಕ ಕಾರ್ಯದೊಂದಿಗೆ ಸಂಪನ್ನಗೊAಡಿತು.

ತಾ. ೩ ರಂದು ದೇವ ತಕ್ಕರಾದ ಪಡಿಯಂಡ ಕುಟುಂಬದವರು ಭಂಡಾರ ತಂದು ಪಳೆಪರೆಯಲ್ಲಿ ಇಟ್ಟು ರಾತ್ರಿ ದೇವಾಲಯಕ್ಕೆ ತರಲಾಯಿತು. ನಂತರ ಪೂಜೆ ವಿಧಿ ವಿಧಾನಗಳೊಂದಿಗೆ ಬೆಳ್ಳಟ್ಟಾ, ತ್ರಿಮೂರ್ತಿ, ಪೊನ್ನು ಮುತ್ತಪ್ಪ ಹಾಗೂ ಅಯ್ಯಪ್ಪ ದೇವರ ಕೋಲ ನಡೆಯಿತು. ತಾ. ೪ ರಂದು ಗುಳಿಗ, ಚಿಂಗಜ್ಜ, ಕಾಲಭೈರವ, ದುರ್ಗಿ, ಪೊಟ್ಟ, ಚಾಮುಂಡಿ ದೇವರ ಕೋಲ ನಡೆಯಿತು. ತಾ. ೫ ರಂದು ಬೊಲ್ತು, ಕೊರ್ತಿ (ಪಾರ್ವತಿ) ಹಾಗೂ ಕೋಲಚೌಂಡಿ ದೇವರುಗಳ ಕೋಲಗಳೊಂದಿಗೆ ಮೂರು ದಿನಗಳ ವಾರ್ಷಿಕ ಹಬ್ಬವು ಸಂಪನ್ನವಾಯಿತು.