ವೀರಾಜಪೇಟೆ, ಏ. ೮: ವೀರಾಜಪೇಟೆ ಕೊಡವ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಲಿಮಿಟೆಡ್ ಸಂಸ್ಥೆ ಒಂದೂವರೆ ವರ್ಷದಲ್ಲಿ ಶೇ. ೧೦೦ ರಷ್ಟು ಪ್ರಗತಿ ಸಾಧಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ನೆಲ್ಲಮಕ್ಕಡ ಉಮೇಶ್ ಮುತ್ತಣ್ಣ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಂಸ್ಥೆಯು ವೀರಾಜಪೇಟೆ, ಮಡಿಕೇರಿ, ಪೊನ್ನಂಪೇಟೆ ತಾಲೂಕಿನಲ್ಲಿ ಕಾಂiÀið ನಿರ್ವಹಿಸುತ್ತಿದ್ದು ಸಹಕಾರ ಇಲಾಖೆಯಿಂದ ನೋಂದಾಯಿ ಸಲ್ಪಟ್ಟಿದೆ. ೧೫-೧೧-೨೦೧೯ ರಿಂದ ಪೂರ್ಣಪ್ರಮಾಣದ ಸಹಕಾರಿಯಾಗಿ ಕಾರ್ಯಾರಂಭ ಗೊಂಡಿದ್ದು ಒಂದೂವರೆ ವರ್ಷ ಪೂರೈಸಿ ಪ್ರಗತಿಯತ್ತ ಮುಂದುವರೆಯುತ್ತಿದೆ. ಒಟ್ಟೂ ೧೧೦೦ ಸದಸ್ಯರನ್ನು ಹೊಂದಿದೆ. ಒಟ್ಟು ಪಾಲು ಬಂಡವಾಳ ರೂ. ೪೦.೦೦ ಲಕ್ಷವಾಗಿದೆ. ಸದಸ್ಯರ ವಿವಿಧ ಠೇವಣಿಗಳ ಮೊಬಲಗು ರೂ. ೨೭೨.೦೨ ಲಕ್ಷ ಸಂಗ್ರಹಣೆ ಆಗಿದೆ. ಇದರ ಆಧಾರದ ಮೇಲೆ ವಿತರಿಸಿದ ವಿವಿಧ ಬಗೆಯ ಸಾಲಗಳು ೧೬೮ ಲಕ್ಷಗಳಾಗಿರುತ್ತದೆ. ವಿತರಿಸಿದ ಎಲ್ಲಾ ಸಾಲಗಳು ಮಾರ್ಚ್ ೩೧ಕ್ಕೆ ಶೇ ೧೦೦ ರಷ್ಟು ವಸೂಲಾಗಿರುತ್ತದೆ. ಅಲ್ಲದೆ ಇತರ ಬ್ಯಾಂಕಿನಲ್ಲಿ ರೂ. ೧೯೩.೦೦ ಲಕ್ಷ ಹೂಡಿಕೆ ಮಾಡಲಾಗಿದೆ.
ಈ ಸಹಕಾರಿಯು ಸಂರ್ಪೂಣ ವಾಗಿ ಗಣಕೀಕರಣ ಗೊಂಡಿದ್ದು ಮುಂದಕ್ಕೆ ಈ ಸಹಕಾರಿಯಿಂದ ಗ್ರಾಹಕರಿಗೆ ಓಇಈಖಿ/ಖಖಿಉS ಸೌಲಭ್ಯ ಹಾಗೂ ಲಾಕರ್ ಸೌಲಭ್ಯ ವನ್ನು ಅಳವಡಿಸುವ ಯೋಜನೆಯನ್ನು ಹಮ್ಮಿಕೊಳ್ಳ ಲಾಗುವುದು.
ಸದಸ್ಯರುಗಳಿಗೆ ಎಲ್ಲಾ ವಿಧಗಳ ಸಾಲ ಸೌಲಭ್ಯಗಳನ್ನು ಆಧಾರ ದಾಖಲಾತಿಗಳೊಂದಿಗೆ ವಿತರಿಸಲಾಗುವುದು. ಎಲ್ಲಾ ಸದಸ್ಯರಿಗೂ ಮರಣ ನಿಧಿಯ ಸೌಲಭ್ಯವನ್ನು ಕಲ್ಪಿಸಲಾಗಿದೆ. ಮುಂದಿನ ಸಾಲಿನಿಂದ ಇದರ ಸದಸ್ಯರುಗಳಿಗೆ ಹೆಚ್ಚಿನ ಸಾಲ ಸೌಲಭ್ಯವನ್ನು ಒದಗಿಸುವ ಯೋಜನೆಯನ್ನು ಹಮ್ಮಿಗೊಳ್ಳಲಾಗಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಉಪಾಧ್ಯಕ್ಷ ಚೇಂದAಡ ವಸಂತ್ ಕುಮಾರ್, ನಿರ್ದೇಶಕರುಗಳಾದ ನೆಲ್ಲಮಕ್ಕಡ ಸಿ. ಬೆಳ್ಯಪ್ಪ, ವಾಂಚಿರ ಟಿ. ನಾಣಯ್ಯ, ವಾಟೇರಿರ ಎಸ್. ಪೂವಯ್ಯ, ಪರದಂಡ ಮುತ್ತಣ್ಣ ಸೋಮಣ್ಣ, ಚೇಂದ್ರಿಮಡ ಕೆ. ನಂಜಪ್ಪ, ನೆಲ್ಲಚಂಡ. ಎಂ. ಭೀಮಯ್ಯ, ಕಾಂಡAಡ ಎಂ. ಚರ್ಮಣ, ಕೇಳಪಂಡ ಎನ್. ವಿಶ್ವನಾಥ್ ಕೊಂಗAಡ ಎ. ನಾಣಯ್ಯ (ಟಾಟಾ), ಕಾಳೇಂಗಡ ಬಿ. ತಿಮ್ಮಯ್ಯ, ಮೇಕೇರಿರ ಪಾಲಿ ಸುಬ್ರಮಣಿ, ಪಟ್ಟಡ. ವಿ. ದಿವ್ಯ ಉಪಸ್ಥಿತರಿದ್ದರು.