ಮಡಿಕೇರಿ ಏ.೭ : ಕೋವಿಡ್ ಸೋಂಕು ವ್ಯಾಪಿಸುತ್ತಿರುವ ಕಾರಣ ನೀಡಿ ಕೊಡಗು ಜಿಲ್ಲೆಯ ಪ್ರವಾಸಿತಾಣಗಳಿಗೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಿ ರುವುದರಿಂದ ಪ್ರವಾಸೋದ್ಯಮವನ್ನೇ ನಂಬಿಕೊAಡಿರುವವರ ಬದುಕು ಅತಂತ್ರವಾಗಿದೆ. ಆದ್ದರಿಂದ ಜಿಲ್ಲಾಡಳಿತ ತಕ್ಷಣ ಪ್ರವಾಸಿತಾಣಗಳ ಮೇಲಿನ ನಿರ್ಬಂಧವನ್ನು ತೆರವು ಗೊಳಿಸಬೇಕೆಂದು ಹೋಂಸ್ಟೇ ಮಾಲೀಕರು ಮತ್ತು ನೌಕರರ ಸಂಘ ಒತ್ತಾಯಿಸಿದೆ.

ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಸಂಘದ ಪ್ರಮುಖರು ಜಿಲ್ಲಾಡಳಿತದ ಕ್ರಮದಿಂದ ಅನೇಕರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ ಎಂದರು.

ಸಂಘದ ಅಧ್ಯಕ್ಷ ಕೋಚನ ಎಂ.ಚೇತನ್ ಮಾತನಾಡಿ ಕಳೆದ ವರ್ಷ ಕೋವಿಡ್ ಸೋಂಕು ವ್ಯಾಪಕವಾಗಿ ಹಬ್ಬಿದ ಕಾರಣ ಲಾಕ್‌ಡೌನ್ ಜಾರಿಯಾಗಿ ಕೊಡಗಿನ ಪ್ರವಾಸೋದ್ಯಮವು ನಷ್ಟವನ್ನು ಅನುಭವಿಸಿತು. ಆದರೆ ಪ್ರಸ್ತುತ ವರ್ಷ ಪರಿಸ್ಥಿತಿ ಕೊಂಚ ಸುಧಾರಿಸಿ ಪ್ರವಾಸಿಗರು ಆಗಮಿಸುವುದರೊಂದಿಗೆ ಆರ್ಥಿಕ ಚೇತರಿಕೆ ಕಾಣುವ ಹಂತದಲ್ಲೇ ಮತ್ತೆ ನಿರ್ಬಂಧ ಹೇರಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹೊಟೇಲ್, ರೆÀಸಾರ್ಟ್, ಲಾಡ್ಜ್, ಹೋಂಸ್ಟೇ, ಆಟೋರಿಕ್ಷಾ, ಟ್ಯಾಕ್ಸಿ ಮಾಲೀಕರು, ಸಿಬ್ಬಂದಿಗಳು ಸೇರಿದಂತೆ ವ್ಯಾಪಾರಿಗಳು ಹಾಗೂ ಬೆಳೆಗಾರರು ಕೂಡ ಜಿಲ್ಲಾಡಳಿತದ ನಿರ್ಧಾರದಿಂದ ಬೇಸರಗೊಂಡಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಸಾವಿರಾರು ಕುಟುಂಬಗಳು ಆದಾಯವಿಲ್ಲದೆ ಬೀದಿಗೆ ಬೀಳುವ ಆತಂಕವಿದೆ ಎಂದು ಚೇತನ್ ಗಮನ ಸೆಳೆದರು.

ಪ್ರವಾಸೋದ್ಯಮ ಖಾತೆ ಸಚಿವರು ಈ ಬಗ್ಗೆ ಗಮನ ಹರಿಸಿ ನಿರ್ಬಂಧಗಳನ್ನು ಸಡಿಲಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಬೇಕೆಂದು ಒತ್ತಾಯಿಸಿದರು.

ಉಪಾಧ್ಯಕ್ಷ ಎಂ.ಎನ್.ಸುಭಾನ್, ಕಾರ್ಯದರ್ಶಿ ಪಿ. ರಿಜ್ವಾನ್, ಸದಸ್ಯರಾದ ಜಗದೀಶ್ ರೈ, ಎಸ್. ಮೋಹನ್, ರಿಯಾಜ್, ಎಂ.ಎ. ಅಶ್ರಫ್, ಯಾಕುಬ್, ಬಬಿತ ರದಿಶ್, ಕವನ್ ಕೊತ್ತೊಳಿ, ಎಂ.ಹೆಚ್. ರಿಜ್ವಾನ್, ಸಿರಾಜ್, ಲೋಕೇಶ್, ಶಾಕೀರ್, ಪುಟ್ಟೆಗೌಡ, ರಹಿಷ್, ತಾಜ್, ರಿಜ್ವಾನ್ ಮತ್ತಿತರರು ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು