ಮಡಿಕೇರಿ, ಏ. ೭: ಶೀಘ್ರದಲ್ಲೆ ನಗರಸಭೆ ಚುನಾವಣೆ ಸಂಬAಧ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದ್ದು, ಹೊಸ ಕಾಮಗಾರಿಗಳಿಗೆ ಚಾಲನೆ, ಭೂಮಿ ಪೂಜೆ ಮಾಡಲು ಸಾಧ್ಯವಾಗದಿರುವ ಕಾರಣ ಇಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಹೇಳಿದರು. ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಉದ್ಯಾನವನ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ನಗರದಾದ್ಯಂತ ಒಳಚರಂಡಿ ನಿರ್ಮಾಣದಿಂದಾಗಿ ಹಲವಷ್ಟು ರಸ್ತೆಗಳು ಹಾಳಾಗಿದ್ದು, ಅವುಗಳನ್ನೆಲ್ಲ ಸರಿಮಾಡಲಾಗಿದೆ ಎಂದರು. ಖಾಸಗಿ ಬಸ್ ನಿಲ್ದಾಣದ ಕಾಮಗಾರಿ ಸಮರ್ಪಕವಾಗಿ ಆಗದಿದ್ದರೂ, ತಮ್ಮ ಅನುಪಸ್ಥಿತಿಯಲ್ಲಿ ಆಗಿನ ಜಿಲ್ಲಾ ಉಸ್ತುವಾರಿ ಮಂತ್ರಿ ತರಾತುರಿಯಲ್ಲಿ ನಿಲ್ದಾಣವನ್ನು ಉದ್ಘಾಟಿಸಿದರು. ಇದೀಗ ಕಳಪೆ ಕಾಮಗಾರಿ ಎದ್ದು ಕಾಣುತ್ತಿರುವುದಾಗಿ ವಿಷಾದ ವ್ಯಕ್ತಪಡಿಸಿದರು. ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ಹೊಸದಾಗಿ ಉದ್ಯಾನವನವನ್ನು ನಿರ್ಮಿಸುವ ಯೋಜನೆ ರೂಪಿಸಲಾಗಿದ್ದು ರೂ.೨೦ ಲಕ್ಷ ವೆಚ್ಚದ ಕಾಮಗಾರಿಗೆ ಶಾಸಕ ಅಪ್ಪಚ್ಚು ರಂಜನ್ ಅವರು ಭೂಮಿ ಪೂಜೆ ನೆರವೇರಿಸಿದರು. ೧೫ನೇ ಹಣಕಾಸು ಆಯೋಗದಡಿ ರೂ.೨೦ ಲಕ್ಷದ ಕಾಮಗಾರಿಯ ಜವಾಬ್ದಾರಿ ಯನ್ನು ಬೆಂಗಳೂರಿನ ದಿ ನರ್ಸರಿಮೆನ್ ಕೋ ಆಪರೇಟಿವ್ ಸೊಸೈಟಿ ಅವರು ವಹಿಸಲಿದ್ದಾರೆ.

ಭೂಮಿಪೂಜೆ ನೆರವೇರಿಸುವ ಮುನ್ನ ರಂಜನ್ ಅವರು, ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ಅಲ್ಲಲ್ಲಿ ಬಿಸಾಡಲಾಗಿದ್ದ ಬೀರು ಬಾಟಲಿ, ಕಸವನ್ನು ನೋಡಿ ಅತೃಪ್ತಗೊಂಡು ಶೀಘ್ರದಲ್ಲೇ ತೆರವುಗೊಳಿಸುವಂತೆ ಸಂಬAಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಫಿಲ್ಟರ್ ಪ್ಲಾಂಟ್ ಉದ್ಘಾಟನೆ

ರೂ.೧೩.೫ ಲಕ್ಷ ವೆಚ್ಚದಲ್ಲಿ ರೋಷನಾರ ಕೆರೆಯ ಬಳಿ ನೂತನ ಫಿಲ್ಟರ್ ಮತ್ತು ಕ್ಲೋರಿನೇಷನ್ ಪ್ಲಾಂಟ್ ಅನ್ನು ಶಾಸಕ ರಂಜನ್ ಉದ್ಘಾಟಿಸಿ ದರು. ರೋಷನಾರ ಕೆರೆ ಸೇರಿದಂತೆ ಕುಂಡಾ ಮೇಸ್ತಿç ಯೋಜನೆಯ ಮೂಲಕ ಕೂಟುಹೊಳೆ ಯಿಂದಲೂ ಪಂಪ್‌ಹೌಸ್‌ಗೆ ನೀರು ಸರಬರಾಜಾಗುತ್ತಿದ್ದು, ಈ ನೀರನ್ನು ಶುದ್ಧೀಕರಣಗೊಳಿಸುವ ಸಂಬAಧ ನೂತನ ಫಿಲ್ಟರ್‌ಅನ್ನು ಅಳವಡಿಸ ಲಾಗಿದೆ. ಶುದ್ಧೀಕರಣಗೊಂಡ ನೀರು ನಗರದ ಅಶೋಕಪುರ, ಮಂಗಳಾದೇವಿ ನಗರ ಸೇರಿದಂತೆ ಇತರೆಡೆಗಳಿಗೆ ಸರಬರಾಜಾಗಲಿದೆ.

ಈ ಸಂದರ್ಭ ನಗರಸಭಾ ಆಯುಕ್ತ ರಾಮ್‌ದಾಸ್, ಬಿಜೆಪಿ ನಗರಾಧ್ಯಕ್ಷ ಮನು ಮಂಜುನಾಥ್, ಮೂಡಾ ಅಧ್ಯಕ್ಷ ರಮೇಶ್ ಹೊಳ್ಳ, ಟೌನ್ ಬ್ಯಾಂಕ್ ಮಾಜಿ ಅಧ್ಯಕ್ಷ ಜಗದೀಶ್ ಬಿ.ಕೆ., ನಗರಸಭಾ ಮಾಜಿ ಸದಸ್ಯ ಉಣ್ಣಿಕೃಷ್ಣ, ಮಾಜಿ ನಗರಸಭಾ ಅಧ್ಯಕ್ಷ ಪಿ.ಡಿ. ಪೊನ್ನಪ್ಪ, ಪ್ರಮುಖರಾದ ಟಿ.ಎಸ್. ಪ್ರಕಾಶ್, ಕೆ.ಎಸ್. ರಮೇಶ್, ಸವಿತಾ ರಾಕೇಶ್, ಸತೀಶ್ ಕುಮಾರ್, ಅಪ್ಪಣ್ಣ, ಉಮೇಶ್ ಸುಬ್ರಮಣಿ ಇತರರು ಹಾಜರಿದ್ದರು.