ಮಡಿಕೇರಿ, ೭. ೬: ತಲತಲಾಂತರ ದಿಂದ ಆಚರಣೆಯಲ್ಲಿ ಬಂದ, ಪ್ರಾಚೀನ ಬುಡಕಟ್ಟು ಜನಾಂಗವಾದ ಕೊಡವರ ಆಚಾರ ವಿಚಾರ, ಸಂಸ್ಕೃತಿ ನಡಾವಳಿಗಳನ್ನು ಪಟ್ಟೋಲೆ ಪಳಮೆ ಎಂಬ ಪುಸ್ತಕರೂಪದಲ್ಲಿ ದಾಖಲಿಸಿ, ಕೊಡವರ ಇತಿಹಾಸದ ದಾಖಲಿತ ಮೂಲಕ್ಕೂ ನಾಂದಿಯಾಗಿರುವ ಜಾನಪದ ಬ್ರಹ್ಮ ನಡಿಕೇರಿಯಂಡ ಚಿಣ್ಣಪ್ಪ ಅವರನ್ನು ಆಡಳಿತ ವ್ಯವಸ್ಥೆ ಮರೆತಿರುವುದು ವಿಷಾದನೀಯ ಎಂದು ಕೊಡವಾಮೆರ ಕೊಂಡಾಟ ಸಂಘಟನೆಯ ಅಧ್ಯಕ್ಷ ಚಾಮೆರ ದಿನೇಶ್‌ಬೆಳ್ಯಪ್ಪ ಹೇಳಿದರು.

ಮೈಸೂರಿನ ಜಯಲಕ್ಷಿö್ಮಪುರಂ ನಲ್ಲಿರುವ ಕೊಡಗು ಸಹಕಾರ ಸಂಘದಲ್ಲಿ ಕೊಡವಾಮೆರ ಕೊಂಡಾಟ ಸಂಘಟನೆಯ ವತಿಯಿಂದ ನಡೆದ ದಿ. ನಡಿಕೇರಿಯಂಡ ಚಿಣ್ಣಪ್ಪ ಅವರ ೧೪೬ನೇ ಹುಟ್ಟು ಹಬ್ಬದ ಸರಳ ಸಮಾರಂಭದಲ್ಲಿ ಪ್ರಾಸ್ತಾವಿಕ ಮಡಿಕೇರಿ, ೭. ೬: ತಲತಲಾಂತರ ದಿಂದ ಆಚರಣೆಯಲ್ಲಿ ಬಂದ, ಪ್ರಾಚೀನ ಬುಡಕಟ್ಟು ಜನಾಂಗವಾದ ಕೊಡವರ ಆಚಾರ ವಿಚಾರ, ಸಂಸ್ಕೃತಿ ನಡಾವಳಿಗಳನ್ನು ಪಟ್ಟೋಲೆ ಪಳಮೆ ಎಂಬ ಪುಸ್ತಕರೂಪದಲ್ಲಿ ದಾಖಲಿಸಿ, ಕೊಡವರ ಇತಿಹಾಸದ ದಾಖಲಿತ ಮೂಲಕ್ಕೂ ನಾಂದಿಯಾಗಿರುವ ಜಾನಪದ ಬ್ರಹ್ಮ ನಡಿಕೇರಿಯಂಡ ಚಿಣ್ಣಪ್ಪ ಅವರನ್ನು ಆಡಳಿತ ವ್ಯವಸ್ಥೆ ಮರೆತಿರುವುದು ವಿಷಾದನೀಯ ಎಂದು ಕೊಡವಾಮೆರ ಕೊಂಡಾಟ ಸಂಘಟನೆಯ ಅಧ್ಯಕ್ಷ ಚಾಮೆರ ದಿನೇಶ್‌ಬೆಳ್ಯಪ್ಪ ಹೇಳಿದರು.

ಮೈಸೂರಿನ ಜಯಲಕ್ಷಿö್ಮಪುರಂ ನಲ್ಲಿರುವ ಕೊಡಗು ಸಹಕಾರ ಸಂಘದಲ್ಲಿ ಕೊಡವಾಮೆರ ಕೊಂಡಾಟ ಸಂಘಟನೆಯ ವತಿಯಿಂದ ನಡೆದ ದಿ. ನಡಿಕೇರಿಯಂಡ ಚಿಣ್ಣಪ್ಪ ಅವರ ೧೪೬ನೇ ಹುಟ್ಟು ಹಬ್ಬದ ಸರಳ ಸಮಾರಂಭದಲ್ಲಿ ಪ್ರಾಸ್ತಾವಿಕ ಅತಿಥಿಗಳಾಗಿ ನಡಿಕೇರಿಯಂಡ ಚಿಣ್ಣಪ್ಪ ಅವರ ಮರಿಮೊಮ್ಮಗ ಚಂಬಾAಡ ರವಿ ಸೋಮಣ್ಣ, ಅವರು ಚಿಣ್ಣಪ್ಪ ಅವರ ಪರಿಚಯ ಮಾಡಿದರು. ದೀನಬಂಧು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕಟ್ಟೆರ ಕಾರ್ಯಪ್ಪ, ಕಾರ್ಯದರ್ಶಿ ಪಟ್ಟಡ ಜಯಕುಮಾರ್, ಕೊಡಗು ಸಹಕಾರ ಸಂಘದ ಕಾರ್ಯದರ್ಶಿ ಲವಲಿ ಅಪ್ಪಯ್ಯ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಮೊದಲಿಗೆ ಗುರುಕಾರೋಣರನ್ನು ನೆನೆಯಲಾಯಿತು. ಕೊಡವಾಮೆರ ಕೊಂಡಾಟ ಸಂಘಟನೆಯ ಆಡಳಿತ ಮಂಡಳಿ ನಿರ್ದೇಶಕ ಚಿರಿಯಪಂಡ ವಿಶುಕಾಳಪ್ಪ ಅವರು ಪ್ರಾರ್ಥಿಸುವ ಮೂಲಕ ಪ್ರಾರಂಭವಾದ ಕಾರ್ಯಕ್ರಮದಲ್ಲಿ ನಡಿಕೇರಿಯಂಡ ಚಿಣ್ಣಪ್ಪ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಮರ್ಪಣೆ ಮಾಡಲಾಯಿತು. ಕೊಡವಾಮೆರ ಕೊಂಡಾಟದ ಆಡಳಿತ ಮಂಡಳಿ ಸದಸ್ಯೆ ಕುಲ್ಲಚಂಡ ವಿನುತಕೇಸರಿ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.