ಪೊನ್ನಂಪೇಟೆ, ಏ. ೭: ಕಲಿಕೆಗೆ ನಿರ್ದಿಷ್ಟ ಗಡುವಿಲ್ಲ. ಮನುಷ್ಯ ಸಾಯುವವರೆಗೂ ವಿದ್ಯಾರ್ಥಿಯಾಗಿ ಕಲಿಯಬೇಕಾಗಿರುವುದು ಸಾಕಷ್ಟಿರುತ್ತದೆ. ಕಲಿಕೆಯ ದಾಹ ಮನುಷ್ಯನನ್ನು ಮತ್ತಷ್ಟು ಪ್ರಬುದ್ಧಗೊಳಿಸುತ್ತದೆ ಎಂದು ಯುವ ರಾಜಕಾರಣಿ ತೀತಿರ ಧರ್ಮಜ ಉತ್ತಪ್ಪ ಅವರು ಅಭಿಪ್ರಾಯಪಟ್ಟರು.

ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ (ಪೊನ್ನಂಪೇಟೆ ನಿಸರ್ಗ ಜೇಸಿಸ್) ಘಟಕದ ವತಿಯಿಂದ ಗೋಣಿ ಕೊಪ್ಪಲಿನ ಸಿಲ್ವರ್ ಸ್ಕೆöÊ ಹೊಟೇಲ್ ಸಭಾಂಗಣದಲ್ಲಿ ಜೇಸಿ ಸದಸ್ಯರಿಗಾಗಿ ಮತ್ತು ಆಸಕ್ತ ಸಾರ್ವಜನಿಕರಿಗಾಗಿ ಆಯೋಜಿಸಲಾಗಿದ್ದ ‘ಪರಿಣಾಮಕಾರಿ ಭಾಷಣ ಕಲೆ (ಇPS)’ ಮತ್ತು ‘ಅಧ್ಯಕ್ಷತೆ ಹಾಗೂ ಸಂಸದೀಯ ನಡಾವಳಿ (ಅಂPP)’ ಎಂಬ ವಿಷಯದ ಕುರಿತ ವಿಶೇಷ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಲಿಕೆ ಎಂಬದು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮಾತ್ರ ಎಂಬ ಜನರ ಸಾಮಾನ್ಯವಾದ ಮನೋಭಾವ ಬದಲಾಗಬೇಕು. ಮನುಷ್ಯ ತನ್ನ ಅಂತ್ಯದವರೆಗೂ ಕಲಿಯುತ್ತಲೇ ಇರಬೇಕಾಗುತ್ತದೆ. ಆದರೆ ಈ ವಾಸ್ತವಾಂಶವನ್ನು ಒಪ್ಪಿಕೊಳ್ಳಲು ಮನುಷ್ಯರ ಸಹಜ ಗುಣವಾದ ‘ಅಹಂ’ (ಇಗೋ) ಅಡ್ಡ ಬರುತ್ತದೆ ಎಂದು ಹೇಳಿದರು. ಭಾಷಣ ಎಂಬ ಕಲೆಯನ್ನು ಮೈಗೂಡಿಸಿಕೊಳ್ಳಲು ಮೊದಲು ಅದರ ಶಾಸ್ತಿçÃಯತೆಯನ್ನು ತಿಳಿದುಕೊಳ್ಳುವ ಆಸಕ್ತಿ ತೋರಬೇಕು. ಪ್ರತಿಯೊಬ್ಬರಲ್ಲೂ ಭಾಷಣ ಮಾಡುವ ಸಾಮರ್ಥ್ಯವಿದ್ದರೂ ಭಾಷಣ ಕಲೆ ಇರುವುದಿಲ್ಲ ಎಂದು ಹೇಳಿದ ವಿದ್ಯಾರ್ಥಿಗಳಿಗೆ ಮಾತ್ರ ಎಂಬ ಜನರ ಸಾಮಾನ್ಯವಾದ ಮನೋಭಾವ ಬದಲಾಗಬೇಕು. ಮನುಷ್ಯ ತನ್ನ ಅಂತ್ಯದವರೆಗೂ ಕಲಿಯುತ್ತಲೇ ಇರಬೇಕಾಗುತ್ತದೆ. ಆದರೆ ಈ ವಾಸ್ತವಾಂಶವನ್ನು ಒಪ್ಪಿಕೊಳ್ಳಲು ಮನುಷ್ಯರ ಸಹಜ ಗುಣವಾದ ‘ಅಹಂ’ (ಇಗೋ) ಅಡ್ಡ ಬರುತ್ತದೆ ಎಂದು ಹೇಳಿದರು. ಭಾಷಣ ಎಂಬ ಕಲೆಯನ್ನು ಮೈಗೂಡಿಸಿಕೊಳ್ಳಲು ಮೊದಲು ಅದರ ಶಾಸ್ತಿçÃಯತೆಯನ್ನು ತಿಳಿದುಕೊಳ್ಳುವ ಆಸಕ್ತಿ ತೋರಬೇಕು. ಪ್ರತಿಯೊಬ್ಬರಲ್ಲೂ ಭಾಷಣ ಮಾಡುವ ಸಾಮರ್ಥ್ಯವಿದ್ದರೂ ಭಾಷಣ ಕಲೆ ಇರುವುದಿಲ್ಲ ಎಂದು ಹೇಳಿದ ಕಾರ್ಯಕ್ರಮಗಳಿಗೆ ಒತ್ತು ನೀಡಲು ನಿರ್ಧರಿಸಲಾಗಿದೆ ಎಂದರು.

ಜೇಸಿಸ್‌ನ ರಾಷ್ಟಿçÃಯ ತರಬೇತು ದಾರರಾಗಿರುವ, ‘ಜೆಸಿಐ ಡಿಸೈನರ್’ ತುಮಕೂರಿನ ಡಿ.ವಿ. ಶ್ರೀಕಾಂತ್ ಅವರು ಪ್ರಧಾನ ತರಬೇತುದಾರರಾಗಿ ಪಾಲ್ಗೊಂಡು ಕಾರ್ಯಾಗಾರವನ್ನು ನಡೆಸಿಕೊಟ್ಟರು.

ವೇದಿಕೆಯಲ್ಲಿ ಘಟಕದ ನಿಕಟಪೂರ್ವ ಅಧ್ಯಕ್ಷ ಟಾಟು ಮೊಣ್ಣಪ್ಪ, ಯೋಜನಾ ನಿರ್ದೇಶಕ ಕ್ಯಾ. ಬಿ.ಎಂ. ಗಣೇಶ್ ಅವರು ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ಜೇಸಿ ಸದಸ್ಯರು ಸೇರಿದಂತೆ ವಿವಿಧ ಗ್ರಾ.ಪಂ. ಸದಸ್ಯರು, ಸಂಘ-ಸAಸ್ಥೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಘಟಕದ ಪೂರ್ವಾಧ್ಯಕ್ಷ ಬಿ.ಈ. ಕಿರಣ್ ಅವರು ಜೇಸಿವಾಣಿ ವಾಚಿಸಿದರು. ವನಿತ್‌ಕುಮಾರ್ ಸ್ವಾಗತಿಸಿದರು. ತರಬೇತುದಾರರನ್ನು ಗಣೇಶ್ ಪರಿಚಯಿಸಿದರು. ಟಾಟು ಮೊಣ್ಣಪ್ಪ ವಂದಿಸಿದರು.