ಮಡಿಕೇರಿ, ಏ ೮: ಅವಧಿ ಮುಕ್ತಾಯಗೊಂಡಿರುವ ಮಡಿಕೇರಿ ನಗರಸಭೆಗೆ ಸಾರ್ವತ್ರಿಕ ಚುನಾವಣೆಯನ್ನು ನಡೆಸಲು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅಧಿಸೂಚನೆ ಹೊರಡಿಸಿದ್ದಾರೆ.ತಾ. ೧೫ ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ತಾ. ೧೬ ರಂದು ನಾಮಪತ್ರ ಪರಿಶೀಲನೆ, ತಾ. ೧೯ ರಂದು ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕೊನೆ ದಿನವಾಗಿದೆ. ತಾ. ೨೭ ರಂದು ಮತದಾನ ಅವಶ್ಯವಿದ್ದರೆ, ಬೆಳಗ್ಗೆ ೭ ಗಂಟೆಯಿAದ ಸಂಜೆ ೫ ಗಂಟೆಯವರೆಗೆ ಮತದಾನ ನಡೆಯಲಿದೆ. ಏಪ್ರಿಲ್, ೨೯ ರಂದು ಮರು ಮತದಾನ ಇದ್ದಲ್ಲಿ ಬೆಳಗ್ಗೆ ೭ ಗಂಟೆಯಿAದ ಸಂಜೆ ೫ ಗಂಟೆಯವರೆಗೆ ಮರು ಮತದಾನ ನಡೆಯಲಿದೆ. ತಾ. ೩೦ ರಂದು ಬೆಳಗ್ಗೆ ೮ ಗಂಟೆಯಿAದ ಮತ ಎಣಿಕೆ ನಡೆಯಲಿದೆ.ಮಡಿಕೇರಿ ನಗರಸಭೆಯ ೨೩ ವಾರ್ಡ್ಗಳಿಗೆ ಚುನಾವಣೆ ನಡೆಯಲಿದೆ. ಮಡಿಕೇರಿ ನಗರಸಭೆ ಚುನಾವಣೆಗೆ ೧೩,೦೧೧ ಪುರುಷ ಮತದಾರರು, ೧೩,೬೦೬ ಮಹಿಳಾ ಮತದಾರರು, ಇತರೆ ೨ ಮತದಾರರಿದ್ದು ಒಟ್ಟು ೨೬,೬೧೯ ಮತದಾರರು ಇದ್ದಾರೆ. ೨೩ ಮೂಲ ಮತಗಟ್ಟೆಗಳು, ೩ ಆಕ್ಸಿಲರಿ ಮತಗಟ್ಟೆಗಳು ಒಟ್ಟು ೨೬ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಉಮೇದುವಾರಿಕೆ ಸಲ್ಲಿಸುವವರು ಪ್ರಪತ್ರ-೨ರಲ್ಲಿ ನಾಮಪತ್ರ ಸಲ್ಲಿಸಬೇಕು. ರೂ. ೨೦ ರ ಛಾಪಾ ಕಾಗದಲ್ಲಿ ಘೋಷಣಾ ಪತ್ರವನ್ನು ಸಲ್ಲಿಸಬೇಕು. ಅಭ್ಯರ್ಥಿಯು ಘೋಷಣಾ ಪತ್ರದ ಎಲ್ಲಾ ಪುಟಗಳಿಗೆ ಸಹಿ ಮಾಡಿರಬೇಕು. ಅಫಿಡವೀಟ್‌ನ ಎಲ್ಲಾ ಕಾಲಂಗಳನ್ನು ಭರ್ತಿ ಮಾಡಿರಬೇಕು. ನೋಟರಿ ಪಬ್ಲಿಕ್‌ರಿಂದ ದೃಢೀಕರಿಸಿರಬೇಕು.
(ಮೊದಲ ಪುಟದಿಂದ) ಘೋಷಣಾ ಪತ್ರಗಳನ್ನು ಮೂರು (೩) ಪ್ರತಿಗಳಲ್ಲಿ ಸಲ್ಲಿಸಬೇಕು. (೨ ಮೂಲ ಪ್ರತಿ ಮತ್ತು ೧ ಜೆರಾಕ್ಸ್). ಸ್ಪರ್ಧಿಸುವ ಅಭ್ಯರ್ಥಿ ಆ ನಗರ ಸ್ಥಳೀಯ ಸಂಸ್ಥೆಯ ಮತದಾರರಾಗಿರಬೇಕು. ಮೀಸಲು ಸ್ಥಾನಕ್ಕೆ ಸ್ಪರ್ಧಿಸುವ ಅಭ್ಯರ್ಥಿಗಳು ಅಧಿಕೃತ ಮೂಲ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.
ನಗರ ಸ್ಥಳೀಯ ಸಂಸ್ಥೆಯ ಚುನಾವಣೆಗೆ ತಯಾರಿಸಿದ ಮತದಾರರ ಪಟ್ಟಿಯಲ್ಲಿ ಅಭ್ಯರ್ಥಿ ಮತ್ತು ಸೂಚಕರ ಹೆಸರು ಇರುವ ಬಗ್ಗೆ ಮತದಾರರ ಪಟ್ಟಿಯ ದೃಢೀಕೃತ ಪ್ರತಿಯನ್ನು ಸಲ್ಲಿಸಬೇಕು. ಸ್ಪರ್ಧಿಸುವ ಅಭ್ಯರ್ಥಿಯ ಕನಿಷ್ಟ ೨೧ ವರ್ಷ ವಯಸ್ಸಿನವರಾಗಿರಬೇಕು. ಒಬ್ಬ ಅಭ್ಯರ್ಥಿ ೪ ನಾಮಪತ್ರಗಳನ್ನು ಮಾತ್ರ ಸಲ್ಲಿಸಬಹುದಾಗಿದೆ.
ಮಾನ್ಯತೆ ಪಡೆದ ಪಕ್ಷವಾಗಿದ್ದಲ್ಲಿ ಒಬ್ಬರು ಸೂಚಕರು ಮತ್ತು ಪಕ್ಷೇತರವಾಗಿದ್ದಲ್ಲಿ ೫ ಜನ ಸೂಚಕರ ಸಹಿ ಮಾಡಿರಬೇಕು ಮಾನ್ಯತೆ ಪಡೆದ ಪಕ್ಷಗಳ ಅಭ್ಯರ್ಥಿಗಳಾಗಿದ್ದಲ್ಲಿ ಎ ಮತ್ತು ಬಿ ನಮೂನೆಗಳನ್ನು ಮತ್ತು ಮಾನ್ಯತೆ ಪಡೆಯದ ಪಕ್ಷಗಳ ಅಭ್ಯರ್ಥಿಗಳಾಗಿದ್ದಲ್ಲಿ ನಮೂನೆ-ಸಿ ಮತ್ತು ಡಿ ಗಳನ್ನು ಸಲ್ಲಿಸಬೇಕು.
ಸಾಮಾನ್ಯ ಅಭ್ಯರ್ಥಿಯಾಗಿದ್ದಲ್ಲಿ ೨೦೦೦, ಹಿಂದುಳಿದ ವರ್ಗ/ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ/ ಮಹಿಳೆ ಆಗಿದ್ದಲ್ಲಿ ರೂ. ೧೦೦೦ ಠೇವಣಿ ಇಡಬೇಕಾಗಿದೆ. ಚುನಾವಣೆ ನಡೆಯುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆಯು ತಾ. ೮ ರಿಂದ ೩೦ ರವರೆಗೆ ಜಾರಿಯಲ್ಲಿ ಇರುತ್ತದೆ. ನಗರಸಭೆಗೆ ಸಂಬAಧಿಸಿದAತೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ವೆಚ್ಚದ ಮಿತಿಯನ್ನು ರೂ. ೨ ಲಕ್ಷಕ್ಕೆ ನಿಗದಿಪಡಿಸಿದೆ.
ಅಭ್ಯರ್ಥಿಗಳ ಚುನಾವಣಾ ವೆಚ್ಚದ ವಿವರಗಳನ್ನು ಪಡೆಯಲು ಮತ್ತು ಪರಿಶೀಲಿಸಲು ಚುನಾವಣಾ ವೆಚ್ಚದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ತಿಳಿಸಿದ್ದಾರೆ.