ಮಡಿಕೇರಿ, ಏ. ೮: ರಾಜ್ಯ ಸರಕಾರದ ಇಲಾಖಾ ಮುಖ್ಯಸ್ಥರು, ಜಿಲ್ಲಾಡಳಿತಗಳು, ಪ್ರಾಧಿಕಾರಗಳು ಸೇರಿದಂತೆ ಸ್ಥಳೀಯ ಸಂಸ್ಥೆಗಳು ಕೋವಿಡ್-೧೯ ಸಂಬAಧಿತ ಯಾವುದೇ ಪ್ರತ್ಯೇಕ ಆದೇಶ ಹೊರಡಿಸಿದ್ದಲ್ಲಿ ತಕ್ಷಣವೇ ಹಿಂಪಡೆಯುವAತೆ ಸರಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ವಿಪತ್ತು ನಿರ್ವಹಣೆ ಕಾರ್ಯಕಾರಿ ಸಮಿತಿ ಸದಸ್ಯ ಎನ್. ಮಂಜುನಾಥ್ ಪ್ರಸಾದ್ ಸುತ್ತೋಲೆ ಹೊರಡಿಸಿದ್ದಾರೆ.ಕೊರೊನಾ ವಿಚಾರವಾಗಿ ಹೊಸ ನಿರ್ಬಂಧ ಹೇರುವ ಅಧಿಕಾರ ಕೇವಲ ಕಂದಾಯ ಇಲಾಖೆಯ ವಿಪತ್ತು ನಿರ್ವಹಣೆ ಶಾಖೆಯ ರಾಜ್ಯ ಕಾರ್ಯಕಾರಿ ಸಮಿತಿ ಅಧ್ಯಕ್ಷರಾದ ಮುಖ್ಯ ಕಾರ್ಯದರ್ಶಿಯವರ ಸಹಿಯಲ್ಲಿ ಮಾತ್ರ ಹೊರಡಿಸಬೇಕು. ಎಲ್ಲಾ ಆದೇಶಗಳನ್ನು ಮುಖ್ಯಮಂತ್ರಿಗಳ ಅನುಮೋದನೆ ಬಳಿಕ ಹೊರಡಿಸತಕ್ಕದ್ದು. ಈ ಸಂಬAಧ ಸರಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಇಲಾಖಾ ಮುಖ್ಯಸ್ಥರು, ಬಿಬಿಎಂಪಿ ಆಯುಕ್ತರು ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ಪ್ರತಿಯನ್ನು ಕಳುಹಿಸಲಾಗಿದೆ.
ಕೋವಿಡ್-೧೯ ಸೋಂಕು ತಡೆಗಟ್ಟುವ ಸಂಬAಧ ವಹಿಸಬೇಕಾದ ಕ್ರಮಗಳ ಕುರಿತು ಕಾರ್ಯವಿಧಾನ ಏಕರೂಪತೆ ಮತ್ತು ದೃಢತೆಯನ್ನು ತರಲು ಭಾರತ ಸರಕಾರ ಅನುಸರಿಸುತ್ತಿರುವ ವಿಧಾನವನ್ನೇ ರಾಜ್ಯ ಸರಕಾರವು ಪಾಲಿಸಲು ಮತ್ತು ಕಂಟೈನ್ಮೆAಟ್, ಜನರ ಮತ್ತು ವಾಹನಗಳ ಸಂಚಾರ, ಜನರ ಗುಂಪು ಕೂಡುವಿಕೆ ನಿರ್ಬಂಧ ಹೇರುವುದು ಅನುಮತಿ ನೀಡಿದ ಹಾಗೂ ನೀಡಲಾಗದ ಚಟುವಟಿಕೆಗಳು ಮತ್ತು ಸಂಬAಧಿತ ವಿಷಯಗಳ ಕುರಿತು ಯಾವುದೇ ಸೂಚನೆ ಮತ್ತು ನಿರ್ದೇಶನವನ್ನು ಸೂಚಿಸಿದವರು ಮಾತ್ರ ನೀಡಬೇಕು ಎಂದು ಸುತ್ತೋಲೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ಸಕ್ಷಮ ಅಧಿಕಾರಿ ಹೊರಡಿಸಿದ ಆದೇಶಗಳ ಆಧಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ಯಾವುದೇ ಇಲಾಖೆಗಳು ಪ್ರಮಾಣಿತ ಕಾರ್ಯ ವಿಧಾನ (ಎಸ್ಓಪಿ) ಹೊರಡಿಸಬೇಕೆಂದು ಸೂಚಿಸಲಾಗಿದೆ. ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆದೇಶದಲ್ಲಿ ಹೇಳಲಾಗಿದೆ.