ಮಡಿಕೇರಿ, ಏ. ೭: ಆರನೇ ವೇತನ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಸಾರಿಗೆ ಇಲಾಖೆ ನೌಕರರ ಕೂಟ ಕರೆ ನೀಡಿದ್ದ ಸರ್ಕಾರಿ ಬಸ್ ನೌಕರರ ಮುಷ್ಕರಕ್ಕೆ ಜಿಲ್ಲೆಯಲ್ಲಿಯೂ ಬೆಂಬಲ ವ್ಯಕ್ತವಾಯಿತು. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಬೆಳಗ್ಗಿನಿಂದಲೇ ಸರ್ಕಾರಿ ಬಸ್‌ಗಳ ಓಡಾಟವಿರಲಿಲ್ಲ.. ಬಸ್‌ಗಳಿಲ್ಲದೇ ಸರ್ಕಾರಿ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ಮುಷ್ಕರದ ಕುರಿತು ಮೊದಲೇ ಪ್ರಚಾರವಾಗಿದ್ದ ಕಾರಣ ಪ್ರಯಾಣಿಕರೂ ಕೂಡ ಸರ್ಕಾರಿ ಬಸ್ ನಿಲ್ದಾಣದಲ್ಲಿ ಹೆಚ್ಚಾಗಿ ಕಂಡುಬರಲಿಲ್ಲ.ಖಾಸಗಿ ವಾಹನಗಳ ಓಡಾಟ ಸರ್ಕಾರಿ ಬಸ್ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಸರ್ಕಾರ ಪರ್ಯಾಯ ವ್ಯವಸ್ಥೆಯಾಗಿ ಖಾಸಗಿ ಬಸ್, ವ್ಯಾನ್‌ಗಳಿಗೆ ಮುಕ್ತವಾಗಿ ಓಡಾಟ ನಡೆಸಲು ಅವಕಾಶ ನೀಡಿದ್ದರಿಂದ ಮಡಿಕೇರಿ ಸರ್ಕಾರಿ ಬಸ್ ನಿಲ್ದಾಣದಲ್ಲಿ ಕೆಲ ಖಾಸಗಿ ಬಸ್‌ಗಳು ಆರೇಳು ಟೆಂಪೊ ಟ್ರಾವೆಲರ್‌ಗಳು ಬಸ್ ನಿಲ್ದಾಣಕ್ಕೆ ಬರುತ್ತಿದ್ದ ಕುಶಾಲನಗರ ಸುಳ್ಯ ಮೈಸೂರು ಕಡೆಗಳಿಗೆ ತೆರಳಬೇಕಿದ್ದ ಪ್ರಯಾಣಿಕರನ್ನು ಕೊಂಡೊಯ್ಯು ತ್ತಿದ್ದುದು ಕಂಡು ಬಂತು. ಮಡಿಕೇರಿ ಡಿಪೋ ವ್ಯಾಪ್ತಿಯ ಸುಮಾರು ನೂರಕ್ಕೂ ಅಧಿಕ ಬಸ್‌ಗಳು ಸಂಚಾರ ಸ್ಥಗಿತ ಗೊಳಿಸಿದ್ದವು. ಸರ್ಕಾರಿ ಬಸ್‌ಗಳ ಮುಷ್ಕರದ ಹಿನ್ನೆಲೆಯಲ್ಲಿ ಟೆಂಪೋ ಟ್ರಾವಲರ್‌ಗಳನ್ನು ಓಡಿಸಲಾಗುತ್ತಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಪ್ರಯಾಣಿಕರಿಲ್ಲದೆ ನಷ್ಟದ ನಡುವೆಯೆ ಸೇವೆ ನೀಡುತ್ತಿದ್ದೇವೆ ಎಂದು ಕೆಲ ಖಾಸಗಿ ವಾಹನಗಳ ಚಾಲಕರುಗಳು ಅಭಿಪ್ರಾಯ ಹಂಚಿಕೊAಡರು.ಸರ್ಕಾರಿ ಬಸ್ ಮುಷ್ಕರದ ಹಿನ್ನೆಲೆಯಲ್ಲಿ ಪ್ರಯಾಣಿಕರಿಲ್ಲದೆ ಸರ್ಕಾರಿ ಬಸ್ ನಿಲ್ದಾಣದಲ್ಲಿನ ಅಂಗಡಿ ಮುಂಗಟ್ಟುಗಳಲ್ಲಿ

(ಮೊದಲ ಪುಟದಿಂದ) ವ್ಯಾಪಾರವಿಲ್ಲದೆ ವ್ಯಾಪಾರಿಗಳು ಪರಿತಪಿಸುವಂತಾಗಿತ್ತು. ಬಸ್ ನಿಲ್ದಾಣ ಮುಂಭಾಗದ ಆಟೋ ನಿಲ್ದಾಣದಲ್ಲೂ ಆಟೋ ಚಾಲಕರುಗಳು ಪ್ರಯಾಣಿ ಕರಿಲ್ಲದೇ ಪರದಾಡುವಂತಾಗಿತ್ತು. ಮುಷ್ಕರದ ನಡುವೆಯೂ ಬಸ್ ನಿಲ್ದಾಣಕ್ಕೆ ಬಂದಿದ್ದ ಹಲವು ಪ್ರಯಾಣಿಕರು ತಾವು ತೆರಳಬೇಕಿದ್ದ ಸ್ಥಳಕ್ಕೆ ನಿಗದಿತ ದರಕ್ಕಿಂತ ಹೆಚ್ಚಿನ ದರ ತೆತ್ತು ಖಾಸಗಿ ವಾಹನಗಳಲ್ಲಿ ಸಂಚರಿಸಬೇಕಾಯಿತು. ಮುಷ್ಕರದ ಹಿನ್ನೆಲೆಯಲ್ಲಿ ನಗರದ ಸರ್ಕಾರಿ ಬಸ್ ನಿಲ್ದಾಣ ಹಾಗೂ ಡಿಪೋ ಬಳಿಯಲ್ಲಿ ಪೊಲೀಸ್ ಭದ್ರತೆ ನಿಯೋಜಿಸಲಾಗಿತ್ತು.

ಕುಶಾಲನಗರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಕುಶಾಲನಗರ ಬಸ್ ನಿಲ್ದಾಣದ ಮೂಲಕ ಬುಧವಾರ ಯಾವುದೇ ಸರಕಾರಿ ಬಸ್‌ಗಳು ಸಂಚರಿಸಿಲ್ಲ.

ಕುಶಾಲನಗರ ಸರಕಾರಿ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್‌ಗಳು, ಮ್ಯಾಕ್ಸಿ ಕ್ಯಾಬ್‌ಗಳ ಮೂಲಕ ಪ್ರಯಾಣಿಕರನ್ನು ಮಡಿಕೇರಿ ಮತ್ತು ಮೈಸೂರು ಕಡೆಗೆ ಒಯ್ಯುತ್ತಿದ್ದ ದೃಶ್ಯ ಕಂಡು ಬಂತು. ಸಾರಿಗೆ ಬಸ್ ಬಂದ್ ಮಾಹಿತಿ ಮೊದಲೇ ತಿಳಿದ ಕಾರಣ ಪ್ರಯಾಣಿಕರ ಕೊರತೆ ಇತ್ತು. ಮಧ್ಯಾಹ್ನ ವೇಳೆಗೆ ಒಟ್ಟು ಮೂರು ಬಸ್‌ಗಳು ಮೈಸೂರು ಕಡೆಗೆ ತೆರಳಿದರೆ, ಮಡಿಕೇರಿ ಕಡೆಗೆ ಕೆಲವೇ ಸಂಖ್ಯೆಯ ಪ್ರಯಾಣಿಕರು ಸಾಗಿದರೆ ಹಲವಾರು ಖಾಸಗಿ ವಾಹನಗಳ ಏಜೆಂಟರು ಮಾತ್ರ ಪ್ರಯಾಣಿಕರನ್ನು ಕೂಗಿ ಕರೆಯುತ್ತಿದ್ದ ದೃಶ್ಯ ಕಂಡುಬAದಿತ್ತು. ಕುಶಾಲನಗರ ಸರಕಾರಿ ಬಸ್ ನಿಲ್ದಾಣ ಮೂಲಕ ದಿನವೊಂದಕ್ಕೆ ೪೫೦ ಬಸ್‌ಗಳು ತೆರಳುತ್ತಿದ್ದವು ಎಂದು ನಿಲ್ದಾಣದ ಸಂಚಾರಿ ಅಧಿಕಾರಿ ಶ್ಯಾಮ್ ಶೆಟ್ಟಿ ತಿಳಿಸಿದ್ದು, ಬೆಳಿಗ್ಗೆ ೨ ಐರಾವತ ಬಸ್‌ಗಳು ಕುಶಾಲನಗರ ನಿಲ್ದಾಣದ ಮೂಲಕ ಮಡಿಕೇರಿ ಯಿಂದ ಬೆಂಗಳೂರು ಕಡೆಗೆ ಹಿಂತಿರುಗಿರುವುದಾಗಿ ಮಾಹಿತಿ ನೀಡಿದ್ದಾರೆ. ಗ್ರಾಮೀಣ ಭಾಗದ ಜನತೆ ಎಂದಿನAತೆ ಖಾಸಗಿ ಬಸ್‌ನಲ್ಲಿ ಓಡಾಡುವ ಕಾರಣ ಅವರಿಗೆ ಅಷ್ಟಾಗಿ ಸಮಸ್ಯೆ ಕಂಡುಬAದಿಲ್ಲ. ದಿನನಿತ್ಯದ ಓಡಾಟ ನಡೆಸುತ್ತಿದ್ದ ನೌಕರರಿಗೆ ಸಾರಿಗೆ ಬಸ್ ನೌಕರರ ಮುಷ್ಕರದ ಬಿಸಿ ತಟ್ಟಿದಂತಿತ್ತು.

ವೀರಾಜಪೇಟೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾದ ಹಿನ್ನೆಲೆ ವೀರಾಜಪೇಟೆ ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಬಿಕೋ ಎನ್ನಿಸುತಿತ್ತು. ಪ್ರಯಾಣಿಕರು ಇತರ ಸ್ಥಳಕ್ಕೆ ತೆರಳಲು ಸಾಧ್ಯವಾಗದೆ ಹಿಂತಿರುಗುತಿದ್ದುದು ಕಂಡುಬAತು.

ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಪರದಾಡು ವಂತಾಗಿತ್ತು. ಸಂತೆ ದಿನವಾದ ಇಂದು ಸಾರಿಗೆ ಬಸ್ ಇಲ್ಲದೆ ವ್ಯಾಪಾರಿಗಳು ಖಾಸಗಿ ವಾಹನಗಳ ಮೊರೆಹೋದರು.

ಸೋಮವಾರಪೇಟೆ: ೬ನೇ ವೇತನ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಇಂದಿನಿAದ ರಾಜ್ಯಾದ್ಯಂತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟ ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರದಿಂದ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಪೂರ್ಣ ಸ್ಥಗಿತಗೊಂಡ ಪರಿಣಾಮ ಸಾರ್ವಜನಿಕ ಪ್ರಯಾಣಿ ಕರಿಗೆ ಅನಾನು ಕೂಲವಾಯಿತು.

ಸರ್ಕಾರಿ ಬಸ್‌ಗಳಲ್ಲಿ ದಿನನಿತ್ಯ ಪ್ರಯಾಣಿಸಲು ಬಸ್ ಪಾಸ್ ಮಾಡಿಕೊಂಡಿದ್ದ ಉದ್ಯೋಗಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಅನ್ಯ ಮಾರ್ಗವಿಲ್ಲದೇ ಖಾಸಗಿ ಬಸ್‌ಗಳು, ಖಾಸಗಿ ವಾಹನಗಳ ಮೊರೆ ಹೋಗಬೇಕಾಯಿತು.

ಗ್ರಾಮೀಣ ಭಾಗದಿಂದ ಪಟ್ಟಣಕ್ಕೆ ಆಗಮಿಸುತ್ತಿದ್ದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಬಸ್ ಸ್ಥಗಿತದಿಂದಾಗಿ ತೊಂದರೆಯಾಯಿತು. ಇದರೊಂದಿಗೆ ಸೋಮವಾರಪೇಟೆಯಿಂದ ಮಾದಾಪುರ, ಮಡಿಕೇರಿಗೆ ದಿನನಿತ್ಯ ತೆರಳುವ ಖಾಸಗಿ ಸಂಸ್ಥೆ ಹಾಗೂ ಸರ್ಕಾರಿ ಇಲಾಖಾ ನೌಕರರಿಗೂ ಸಮಸ್ಯೆಯಾಯಿತು.

ಸೋಮವಾರಪೇಟೆಯಿಂದ ಕುಶಾಲನಗರ ಮಾರ್ಗವಾಗಿ ಮೈಸೂರಿಗೆ ಹತ್ತಕ್ಕೂ ಅಧಿಕ ಬಸ್‌ಗಳ ಸಂಚಾರವಿತ್ತು. ಇದೀಗ ಸರ್ಕಾರಿ ಬಸ್ ಸ್ಥಗಿತದಿಂದಾಗಿ ಮೈಸೂರಿಗೆ ತೆರಳುವ ಪ್ರಯಾಣಿಕರಿಗೆ ತೊಂದರೆಯಾಗಿದ್ದು, ಬೆಳಿಗ್ಗೆ ಕೆಲ ಖಾಸಗಿ ಟೂರಿಸ್ಟ್ ಬಸ್‌ಗಳು ಸೋಮವಾರಪೇಟೆ-ಮೈಸೂರು ಮಾರ್ಗದಲ್ಲಿ ಸಂಚರಿಸಿದವು.

ಶಾಲಾ ಕಾಲೇಜಿಗೆ ಆಗಮಿಸಲು ಬಸ್ ಪಾಸ್ ಮಾಡಿಸಿಕೊಂಡಿದ್ದ ತೋಳೂರುಶೆಟ್ಟಳ್ಳಿ, ಕೂತಿ, ಶಾಂತಳ್ಳಿ, ಗೌಡಳ್ಳಿ, ಶನಿವಾರಸಂತೆ, ಐಗೂರು, ಮಡಿಕೇರಿ, ಬಾಣಾವರ, ಕುಂದಳ್ಳಿ, ಬೀದಳ್ಳಿ ವ್ಯಾಪ್ತಿಯ ವಿದ್ಯಾರ್ಥಿಗಳು ಸರ್ಕಾರಿ ಬಸ್ ಇಲ್ಲದ್ದರಿಂದ ಖಾಸಗಿ ವಾಹನಗಳಲ್ಲಿ ಶಾಲಾ ಕಾಲೇಜಿಗೆ ಆಗಮಿಸಿ, ಸಂಜೆ ವಾಪಸ್ ಆಗಬೇಕಾಯಿತು.

ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಸ್ಥಗಿತದಿಂದಾಗಿ ಇಲ್ಲಿನ ಸರ್ಕಾರಿ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ಸಂಜೆ ಹಾಗೂ ಬೆಳಿಗ್ಗೆ ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರಿಂದ ಗಿಜಿಗುಡುತ್ತಿದ್ದ ನಿಲ್ದಾಣ ಇಂದು ಮೌನವಾಗಿತ್ತು. ಒಂದೆರಡು ಬಸ್‌ಗಳು ನಿಲ್ದಾಣದಲ್ಲಿ ನಿಂತಿದ್ದನ್ನು ಹೊರತುಪಡಿಸಿದರೆ ಇತರ ಬಸ್‌ಗಳು ನಿಲ್ದಾಣಕ್ಕೂ ಆಗಮಿಸಲಿಲ್ಲ.

ಅತೀ ಹೆಚ್ಚು ಖಾಸಗಿ ಬಸ್‌ಗಳು ಸಂಚರಿಸುವ ಮಡಿಕೇರಿ, ಶನಿವಾರಸಂತೆ, ಕುಶಾಲನಗರ, ಬಾಣಾವರ ಮಾರ್ಗದಲ್ಲಿ ಎಂದಿನAತೆ ಬಸ್‌ಗಳು ಸಂಚರಿಸಿದವು. ಸರ್ಕಾರಿ ಬಸ್‌ಗಳು ಇಲ್ಲದ್ದರಿಂದ ಖಾಸಗಿ ಬಸ್‌ಗಳಲ್ಲಿ ಹೆಚ್ಚಿನ ಪ್ರಯಾಣಿಕರು ಕಂಡುಬAದರು.

ನಾಪೋಕ್ಲು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಮುಷ್ಕರದಿಂದ ನಾಪೋಕ್ಲುವಿನಲ್ಲಿ ಹೆಚ್ಚಿನ ಸಮಸ್ಯೆ ಕಂಡು ಬರಲಿಲ್ಲ. ಈ ಭಾಗದಲ್ಲಿ ಸಾರಿಗೆ ಸಂಸ್ಥೆ ಬಸ್‌ಗಳ ಓಡಾಟ ವಿರಳವಾಗಿರುವದರಿಂದ ಹಾಗೂ ಪದವಿ ತರಗತಿಗಳ ಪರೀಕ್ಷೆಯನ್ನು ಮುಂದೂಡಿದ ಕಾರಣ ಸಾರ್ವಜನಿಕರು, ಕಾಲೇಜು ವಿದ್ಯಾರ್ಥಿ ಗಳು ತಮ್ಮ ಓಡಾಟಕ್ಕೆ ಖಾಸಗಿ ಬಸ್‌ಗಳನ್ನು ಬಳಸಿಕೊಂಡರು.

ಬೆಳಿಗ್ಗೆ ನಾಪೋಕ್ಲು-ವೀರಾಜಪೇಟೆ ಮತ್ತು ನಾಪೋಕ್ಲು-ಮೂರ್ನಾಡು-ಮಡಿಕೇರಿಗೆ ಸಾರಿಗೆ ಸಂಸ್ಥೆ ಬಸ್‌ನಲ್ಲಿ ತೆರಳುವ ವಿದ್ಯಾರ್ಥಿಗಳು ಬಸ್ ಪಾಸ್ ಪಡೆದಿದ್ದು, ಬಸ್ ಮಷ್ಕರದ ಹಿನ್ನೆಲೆಯಲ್ಲಿ ಖಾಸಗಿ ಬಸ್‌ಗಳಲ್ಲಿ ಹಣ ಕೊಟ್ಟು ಪ್ರಯಾಣಿಸು ವಂತಾಯಿತು.

ಮುಳ್ಳೂರು: ಸರ್ಕಾರಿ ಬಸ್ ಸಂಚಾರ ಇಲ್ಲದ ಕಾರಣ ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಕಡೆಯಿಂದ ಹೊರ ಜಿಲ್ಲೆಗಳಿಗೆ ತೆರಳುವ ಪ್ರಯಾಣಿಕರು ಪರದಾಡು ವಂತಾಯಿತು. ಶನಿವಾರಸಂತೆ ಮತ್ತು ಕೊಡ್ಲಿಪೇಟೆಯಿಂದ ಪ್ರತಿದಿನ ಹಾಸನ, ಮಂಗಳೂರು, ಮೈಸೂರು, ಬೆಂಗಳೂರು ಮುಂತಾದ ಹೊರ ಜಿಲ್ಲೆಗೆ ನೂರಾರು ಪ್ರಯಾಣಿಕರು ಸರಕಾರಿ ಬಸ್‌ಗಳಲ್ಲಿ ಪ್ರಯಾಣಿಸುತ್ತಾರೆ. ಗಳು ತಮ್ಮ ಓಡಾಟಕ್ಕೆ ಖಾಸಗಿ ಬಸ್‌ಗಳನ್ನು ಬಳಸಿಕೊಂಡರು.

ಬೆಳಿಗ್ಗೆ ನಾಪೋಕ್ಲು-ವೀರಾಜಪೇಟೆ ಮತ್ತು ನಾಪೋಕ್ಲು-ಮೂರ್ನಾಡು-ಮಡಿಕೇರಿಗೆ ಸಾರಿಗೆ ಸಂಸ್ಥೆ ಬಸ್‌ನಲ್ಲಿ ತೆರಳುವ ವಿದ್ಯಾರ್ಥಿಗಳು ಬಸ್ ಪಾಸ್ ಪಡೆದಿದ್ದು, ಬಸ್ ಮಷ್ಕರದ ಹಿನ್ನೆಲೆಯಲ್ಲಿ ಖಾಸಗಿ ಬಸ್‌ಗಳಲ್ಲಿ ಹಣ ಕೊಟ್ಟು ಪ್ರಯಾಣಿಸು ವಂತಾಯಿತು.

ಮುಳ್ಳೂರು: ಸರ್ಕಾರಿ ಬಸ್ ಸಂಚಾರ ಇಲ್ಲದ ಕಾರಣ ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಕಡೆಯಿಂದ ಹೊರ ಜಿಲ್ಲೆಗಳಿಗೆ ತೆರಳುವ ಪ್ರಯಾಣಿಕರು ಪರದಾಡು ವಂತಾಯಿತು. ಶನಿವಾರಸಂತೆ ಮತ್ತು ಕೊಡ್ಲಿಪೇಟೆಯಿಂದ ಪ್ರತಿದಿನ ಹಾಸನ, ಮಂಗಳೂರು, ಮೈಸೂರು, ಬೆಂಗಳೂರು ಮುಂತಾದ ಹೊರ ಜಿಲ್ಲೆಗೆ ನೂರಾರು ಪ್ರಯಾಣಿಕರು ಸರಕಾರಿ ಬಸ್‌ಗಳಲ್ಲಿ ಪ್ರಯಾಣಿಸುತ್ತಾರೆ. ಯಾವುದೇ ಸರ್ಕಾರಿ ಬಸ್‌ಗಳು ರಸ್ತೆಗೆ ಇಳಿಯಲಿಲ್ಲ. ಕೆ.ಎಸ್.ಆರ್.ಟಿ.ಸಿ. ಮುಷ್ಕರದ ಹಿನ್ನೆಲೆಯಲ್ಲಿ ಖಾಸಗಿ ಟೆಂಪೊ, ಬಸ್‌ಗಳು ಗೋಣಿಕೊಪ್ಪ ನಿಲ್ದಾಣದಲ್ಲಿ ಸಾಲುಗಟ್ಟಿ ನಿಂತಿದ್ದವು.

ಮೈಸೂರಿನತ್ತ ತೆರಳುವ ಪ್ರಯಾಣಿಕರು ಈ ಬಸ್‌ಗಳಲ್ಲಿ ಪ್ರಯಾಣ ಬೆಳೆಸಿದರು. ಮುಷ್ಕರದ ಹಿಂದಿನ ದಿನವೇ ಖಾಸಗಿ ಬಸ್‌ಗಳು ನಗರದಲ್ಲಿ ಹೆಚ್ಚಾಗಿ ಕಂಡು ಬಂದವು. ನಗರದಿಂದ ಗ್ರಾಮೀಣ ಭಾಗಕ್ಕೆ ತೆರಳುವ ಕೆ.ಎಸ್.ಆರ್.ಟಿ.ಸಿ. ಬಸ್‌ಗಳು ಇಲ್ಲದಿರುವುದರಿಂದ ಸ್ವಲ್ಪ ಮಟ್ಟಿಗೆ ಏರುಪೇರಾಯಿತು. ಖಾಸಗಿ ಬಸ್‌ಗಳು ಸಂಚಾರ ನಡೆಸಿದ್ದರಿಂದ ಸಮಸ್ಯೆ ಅಷ್ಟಾಗಿ ಕಂಡು ಬರಲಿಲ್ಲ.

ಕರಿಕೆ: ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಕರ್ನಾಟಕ ಸಾರಿಗೆ ಬಸ್‌ಗಳ ಸಂಚಾರ ಸ್ಥಗಿತಗೊಂಡ ಪರಿಣಾಮ ಪ್ರಯಾಣಿಕರು, ಕೂಲಿ ಕಾರ್ಮಿಕರು ಪರದಾಡುವಂತಾಗಿತ್ತು. ಕೇರಳದ ಪಾಣತ್ತೂರು ಹಾಗೂ ಕರಿಕೆಯಿಂದ ದಿನನಿತ್ಯ ಐವತ್ತಕ್ಕೂ ಅಧಿಕ ಕಾರ್ಮಿಕರು ಭಾಗಮಂಡಲ ಕಡೆಗೆ ಸಾರಿಗೆ ಸಂಸ್ಥೆ ಬಸ್‌ನಲ್ಲಿ ಬೆಳಿಗ್ಗೆ ತೆರಳಿ ಸಂಜೆ ವಾಪಸಾಗುತ್ತಿದ್ದು, ತಾ. ೬ ರಂದು ಸಂಜೆಯಿAದಲೇ ಬಸ್ ಸ್ಥಗಿತವಾದ ಕಾರಣ ಪ್ರಯಾಣಿಕರು ಖಾಸಗಿ ವಾಹನಗಳಲ್ಲಿ ದುಬಾರಿ ಬಾಡಿಗೆ ನೀಡಿ ತಮ್ಮ ಊರಿಗೆ ಮರಳಿದ್ದು, ಇದೀಗ ಕೆಲಸಕ್ಕೆ ತೆರಳಲು ಸಾಧ್ಯವಾಗದೆ ಮನೆಯಲ್ಲೆ ಉಳಿಯುವಂತಾಗಿದೆ.

ಕೂಡಿಗೆ: ಸಾರಿಗೆ ಬಸ್ ಮುಷ್ಕರದ ಹಿನ್ನೆಲೆ ಕೂಡಿಗೆ ವ್ಯಾಪ್ತಿಯ ವಿವಿಧ ವಿದ್ಯಾಸಂಸ್ಥೆ, ಕಾಲೇಜುಗಳ ವಿದ್ಯಾರ್ಥಿಗಳು ತೊಂದರೆ ಅನುಭವಿಸಬೇಕಾಯಿತು. ವಿವಿಧ ಇಲಾಖೆಯ ನೌಕರರು ತಮ್ಮ ಸ್ವಂತ ವಾಹನಗಳಲ್ಲಿ ಬಂದು ಕರ್ತವ್ಯ ನಿರ್ವಹಿಸಿದರು. ಒಂದು ವಿದ್ಯಾಸಂಸ್ಥೆ ಯಲ್ಲಿ ವ್ಯಾಸಂಗ ಮಾಡುವ ೩೦೩ ವಿದ್ಯಾರ್ಥಿಗಳಲ್ಲಿ ೨೧೭ ವಿದ್ಯಾರ್ಥಿ ಗಳು ಮಾತ್ರ ಹಾಜರಾಗಿದ್ದರು. ಕೂಡು ಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈಗಾರಿಕಾ ಪ್ರದೇಶಕ್ಕೆ ಕೆಲಸಕ್ಕೆ ಬರುವ ಅನೇಕ ಕಾರ್ಮಿಕರು ಖಾಸಗಿ ವಾಹನ ಮತ್ತು ಇತರ ಮ್ಯಾಕ್ಸಿ ಕ್ಯಾಬ್‌ಗಳ ಸಹಾಯ ದಿಂದ ಕೆಲಸಕ್ಕೆ ಹಾಜರಾದುದು ಕಂಡುಬAತು.

ಸುAಟಿಕೊಪ್ಪ: ಸಾರಿಗೆ ನಿಗಮಗಳ ನೌಕರರನ್ನು ಸರಕಾರಿ ನೌಕರರನ್ನಾಗಿ ಪರಿಗಣಿಸಬೇಕು, ವೇತನ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿ ಸಾರಿಗೆ ನಿಗಮಗಳ ನೌಕರರು ಮುಷ್ಕರ ಆರಂಭಿಸಿದ ಪರಿಣಾಮ ಪ್ರಯಾಣಿಕರು ಸಂಕಷ್ಟ ಪಡುವಂತಾಯಿತು.

ಸುಂಟಿಕೊಪ್ಪ ಹೋಬಳಿಯ ನಾಕೂರು, ಕಾನ್‌ಬೈಲು, ಕೊಡಗರಹಳ್ಳಿ, ಕಂಬಿಬಾಣೆ, ಹೊಸಕೋಟೆ, ಮಾದಾಪುರ, ಗರಗಂದೂರು, ಹರದೂರು, ಬೆಟ್ಟಗೇರಿ, ಏಳನೇ ಮೈಲು, ಭಾಗದಿಂದ ಶಾಲಾ-ಕಾಲೇಜು ಮಕ್ಕಳು, ಸರಕಾರಿ ಹುದ್ದೆಗೆ ತೆರಳುವವರು ಕೂಲಿ ಕಾರ್ಮಿಕರು ಸುಂಟಿಕೊಪ್ಪದಿAದ ಮಡಿಕೇರಿ ಕಡೆಗೆ ಮಾಮೂಲಿನಂತೆ ತೆರಳುವವರು ಬಸ್‌ಗಳು ಸಂಚರಿಸದ ಕಾರಣ ಪರದಾಡುವಂತಾಯಿತು. ಕಾಲೇಜು ವಿದ್ಯಾರ್ಥಿಗಳು ಖಾಸಗಿ ವಾಹನಗಳನ್ನು ನಿಲ್ಲಿಸುವಂತೆ ಅಂಗಲಾಚುವುದು ಕಂಡುಬAತು. ಪ್ರಥಮ ಪಿಯುಸಿ ಮಕ್ಕಳಿಗೆ ಪರೀಕ್ಷೆ ನಡೆಯುತ್ತಿದ್ದು, ಬಸ್‌ಗಾಗಿ ಕಾದು ಬಸ್ ಇಲ್ಲದೆ ಬಾಡಿಗೆ ವಾಹನ ಮಾಡಿ ಕಾಲೇಜಿಗೆ ತೆರಳಿದರು. ದೂರದ ಊರಿಗೆ ತೆರಳುವ ಕಾರ್ಮಿಕರು ಬಸ್ ಬಾರದ ಕಾರಣ ಶಾಪ ಹಾಕುತ್ತಾ ಮನೆಗೆ ತೆರಳಿದರು.