ಗೋಣಿಕೊಪ್ಪಲು, ಏ. ೭: ತನ್ನ ಪತ್ನಿಯ ಮೇಲೆ ದ್ವೇಷ ಸಾಧಿಸಿ ಪತ್ನಿಯೊಂದಿಗೆ ಇತರ ಬಂಧುಗಳ ಮೇಲೆ ಪೆಟ್ರೋಲ್ ಸುರಿದು ಹಲವು ಜೀವಗಳನ್ನು ಬಲಿ ತೆಗೆದುಕೊಂಡಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದ ಪಾಚೆ (೬೫) ಎಂಬ ಮಹಿಳೆ ಬುಧವಾರ ಮುಂಜಾನೆ ೩.೩೫ರ ವೇಳೆ ಮೈಸೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಮೃತಪಟ್ಟ ಮಹಿಳೆ ಪಾಚೆ, ಮೃತ ಆರೋಪಿ ಬೋಜನ ಪತ್ನಿಯ ಸಂಬAಧಿ. ತೋಲನ ಪತ್ನಿ ಭಾಗ್ಯಳ ಅಜ್ಜಿಯಾಗಿದ್ದಾರೆ. ಮೂಲತಃ ಕೆದಮುಳ್ಳೂರು ಸಮೀಪದ ಬ್ಯಾರಿಕಾಡು ಪೈಸಾರಿಯಲ್ಲಿ ವಾಸವಿದ್ದ ಇವರು ಘಟನಾ ದಿನದಂದು ಮುಗುಟಗೇರಿ ಸಮೀಪದ ಲೈನ್‌ಮನೆಯಲ್ಲಿ ವಾಸವಿರುವ ಬಂಧುಗಳಾದ ಮಂಜುವಿನ ಮನೆಗೆ ಸಂಬAಧಿಕರಾಗಿ ಆಗಮಿಸಿದ್ದರು. ಈಕೆಯ ಅಂತ್ಯಸAಸ್ಕಾರ ಹುಣಸೂರಿನಲ್ಲಿ ನೆರವೇರಿಸಲಾಯಿತು.

ಪೆಟ್ರೋಲ್ ಸುರಿದು ಅಮಾಯಕರ ದಹನ ಪ್ರಕರಣಕ್ಕೆ ಸಂಬAಧಿಸಿದAತೆ ಈಗಾಗಲೇ ಮೂರು ಮಕ್ಕಳು ಸೇರಿದಂತೆ ಒಟ್ಟು ೮ ಮಂದಿ ಮೃತಪಟ್ಟಿದ್ದಾರೆ. ಘಟನೆಯ ನಂತರ ಆರೋಪಿ ಬೋಜ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದನು.