ವೀರಾಜಪೇಟೆ, ಏ. ೮: ಇಲ್ಲಿಗೆ ಸಮೀಪದ ಕುಕ್ಲೂರು ಶ್ರೀಮತಿ ಸ್ವಸಹಾಯ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷೆ ಕುಟ್ಟಂಡ ನಳಿನಿ ಅವರ ಅಧ್ಯಕ್ಷತೆಯಲ್ಲಿ ಮೊಣ್ಣಂಡ ಕುಟುಂಬ ಐನ್‌ಮನೆಯಲ್ಲಿನಡೆಯಿತು.

ಸಂಘವು ಮುಂದಿನ ವರ್ಷದಲ್ಲಿ ಮಾಡಬೇಕಾದ ಕೆಲಸ ಕಾರ್ಯಗಳ ಬಗ್ಗೆ ಚರ್ಚೆ ಚರ್ಚಿಸಲಾಯಿತು. ಈ ಸಂದರ್ಭ ಬಿಜೆಪಿ ಮಹಿಳಾ ಮೋರ್ಚಾದ ಉಪಾಧ್ಯಕ್ಷೆ ಹಾಗೂ ನ್ಯಾಷನಲ್ ಕರಪ್ಷನ್ ಆಫ್ ಸೆಂಟ್ರಲ್ ಆ್ಯಂಡ್ ಹ್ಯೂಮನ್ ವೆಲ್ಫ್ಪೇರ್ ಆರ್ಗನೈಸೇಷನ್‌ನ ವೀರಾಜಪೇಟೆ ತಾಲೂಕು ಅಧ್ಯಕ್ಷೆ ಕಾಳಿಮಾಡ ದೀಪ ಕಿಶನ್ ಅವರನ್ನು ಸನ್ಮಾನಿಸಲಾಯಿತು.