ಗೋಣಿಕೊಪ್ಪ ವರದಿ, ಏ. ೮: ಕರ್ನಾಟಕ ಕಿಸಾನ್ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣಸ್ವಾಮಿ ಅಧ್ಯಕ್ಷತೆಯಲ್ಲಿ ಗೋಣಿಕೊಪ್ಪದಲ್ಲಿ ಆಯೋಜಿಸಿದ್ದ ಕಿಸಾನ್ ಸಂಘದ ಸಭೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಕಿಸಾನ್ ಸಂಘದ ಸದಸ್ಯತ್ವ ಅಭಿಯಾನ ಆರಂಭಿಸಲು ನಿರ್ಧರಿಸಲಾಯಿತು.
ಸಂಘವನ್ನು ಸದಸ್ಯತ್ವದಿಂದ ಬಲ ಪಡಿಸಿಕೊಂಡು ಮುಂದುವರಿಯಲು ಗ್ರಾಮವಾರು ಸಂಘಟನೆ ನಡೆಸಲು, ಅಭಿಯಾನದ ಉಸ್ತುವಾರಿಯನ್ನು ಮುಕ್ಕಾಟೀರ ಪ್ರವೀಣ್ ಭೀಮಯ್ಯ ಅವರಿಗೆ ನೀಡಲಾಯಿತು.
ಆರ್‌ಎಸ್‌ಎಸ್ ಜಿಲ್ಲಾ ಸಹ ಸಂಚಾಲಕ ಮನು ಕಾವೇರಪ್ಪ, ತಾಲೂಕು ಸಂಘ ಚಾಲಕ ಗಾಂಡAಗಡ ಸುದ, ಪ್ರಮುಖ ರಾದ ಕೊಲ್ಲಿರ ಧರ್ಮಜ, ಕುಲ್ಲಚಂಡ ಬೋಪಣ್ಣ, ನಾಮೇರ ವಾಸು, ನಾಮೇರ ರಾಮು ನಂಜಪ್ಪ, ಕೊಟ್ಟಂಗಡ ಅಯ್ಯಪ್ಪ, ಚಿಮ್ಮಂಗಡ ಗಣಪತಿ, ಪೆಮ್ಮಂಡ ಭರತ್, ಮುಕ್ಕಾಟೀರ ಪ್ರವೀಣ್ ಉಪಸ್ಥಿತರಿದ್ದರು.