ಮಡಿಕೇರಿ, ಏ. ೮: ರಾಜ್ಯದಲ್ಲಿ ಸಾರಿಗೆ ಇಲಾಖೆಯ ನೌಕರರ ಮುಷ್ಕರದ ಬಿಸಿ ಕೊಡಗು ಜಿಲ್ಲೆಯಲ್ಲಿ ಇಂದೂ ಮುಂದುವರಿದಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಯಾವುದೇ ಬಸ್‌ಗಳು ಇಂದೂ ಕೂಡ ರಸ್ತೆಗಿಳಿದಿಲ್ಲ. ಆದರೆ ಕೊಡಗಿನೊಳಗೆ ಆಂತಿರಿಕವಾಗಿ ಖಾಸಗಿ ಬಸ್‌ಗಳ ಸೇವೆ ಹೆಚ್ಚಿರುವುದರಿಂದ ಜಿಲ್ಲೆಯೊಳಗೆ ಹೆಚ್ಚಾಗಿ ಸಮಸ್ಯೆಯಾಗದಿದ್ದರೂ ಬೆಂಗಳೂರು - ಮೈಸೂರು - ಮಂಗಳೂರಿನAತಹ ಕಡೆಗಳಿಗೆ ಜನರು ತೆರಳಲ ಸಮಸ್ಯೆಯಾಗಿದೆ. ಮಡಿಕೇರಿ ಡಿಫೋಕ್ಕೆ ಸಂಬAಧಿಸಿದAತೆ ಒಟ್ಟು ೧೬೬ ಸಿಬ್ಬಂದಿಗಳಿದ್ದು, ಯಾರೊಬ್ಬರೂ ಕರ್ತವ್ಯಕ್ಕೆ ಹಾಜರಾಗದೆ ಗೈರು ಹಾಜರಿಯಾಗಿರುವುದಾಗಿ ಘಟಕದ ವ್ಯವಸ್ಥಾಪಕಿ ಗೀತಾ ಅವರು ತಿಳಿಸಿದ್ದಾರೆ. ಸರಕಾರ ಇದೀಗ ನಿವೃತ್ತರಾಗಿರುವ ನೌಕರರನ್ನು ಕರ್ತವ್ಯಕ್ಕೆ ಕರೆಸಿ ಕೊಳ್ಳಲು ಮುಂದಾಗಿದೆ. ಇದರಂತೆ ಜಿಲ್ಲೆಯಲ್ಲಿ ಪ್ರಸ್ತುತ ಮೂವರು ಮಾತ್ರ ನಿವೃತ್ತಿ ಹೊಂದಿದ್ದು, ಇವರಾರೂ ಸಂಪರ್ಕಕ್ಕೆ ಲಭ್ಯವಾಗಿಲ್ಲ ಎಂದು ಗೀತಾ ಮಾಹಿತಿ ನೀಡಿದ್ದಾರೆ. ಅಪರಾಹ್ನ ಮಂಗಳೂರಿನಿAದ ಬೆಂಗಳೂರು ಕಡೆಗೆ ಸಾರಿಗೆ ಸಂಸ್ಥೆಯ ಒಂದು ಬಸ್ ಮಾತ್ರ ತೆರಳಿದೆ.

ಇನ್ನು ಜಿಲ್ಲೆಯಲ್ಲಿ ರಹದಾರಿ ಹೊಂದಿರುವ ಖಾಸಗಿ ಬಸ್‌ಗಳ ಪೈಕಿ ೧೧೮ ಬಸ್‌ಗಳು ತಮ್ಮ ಮಾರ್ಗದಲ್ಲಿ ಸಂಚರಿಸುತ್ತಿವೆ ಎಂದು ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ತಿಳಿಸಿದ್ದಾರೆ. ೨೯ ಕಾಂಟ್ರಾö್ಯಕ್ಟ್ ಕ್ಯಾರೇಜ್‌ಗಳಿದ್ದು ಈ ಬಸ್‌ಗಳು ಜಿಲ್ಲೆಯಿಂದ ಹೊರಭಾಗಕ್ಕೆ ಸಂಚರಿ ಸುತ್ತಿವೆ. ಆಂತರಿಕವಾಗಿ ಮ್ಯಾಕ್ಸಿಕ್ಯಾಬ್ ಸೇರಿದಂತೆ ಇತರ ಖಾಸಗಿ ವಾಹನ ಗಳು ಸಂಚರಿಸುತ್ತಿರುವುದರಿAದ ಹೆಚ್ಚು ಸಮಸ್ಯೆಯಾಗಿಲ್ಲ. ಆದರೂ ಕೊರೊನಾ ಕಾರಣದಿಂದಾಗಿ ಈ ಹಿಂದಿನAತೆಯೇ ಪ್ರಯಾಣಿಕರ ಸಂಖ್ಯೆಯೂ ವಿರಳವಾಗಿಯೇ ಮುಂದುವರಿಯು ತ್ತಿರುವುದಾಗಿ ಅವರು ಹೇಳಿದ್ದಾರೆ.

ತಮಿಳುನಾಡುವಿನಲ್ಲಿ ಶೇ. ೬೦ರಷ್ಟು ಸರಕಾರಿ ಹಾಗೂ ಶೇ. ೪೦ರಷ್ಟು ಖಾಸಗಿ ಬಸ್‌ಗಳ ಸೇವೆಗೆ ನಿಯಮ ಜಾರಿಯಲ್ಲಿದೆ. ರಾಜ್ಯದಲ್ಲೂ ಸರಕಾರ ಚಿಂತನೆ ನಡೆಸಿ ಈ ಕ್ರಮವನ್ನು ಜಾರಿಗೊಳಿಸಿದಲ್ಲಿ ಭವಿಷ್ಯದಲ್ಲಿ ಹೆಚ್ಚು ಸಮಸ್ಯೆಯಾಗದು. ಎಲ್ಲರಿಗೂ ಇದು ಅನುಕೂಲವಾಗಲಿದೆ ಎಂದು ರಮೇಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.