ಚೆಟ್ಟಳ್ಳಿ, ಏ. ೭: ಅಭ್ಯತ್‌ಮಂಗಲದ ಶ್ರೀ ಬಸವೇಶ್ವರ ಮತ್ತು ಶ್ರೀ ಅಯ್ಯಪ್ಪ ಸೇವಾ ಸಮಿತಿ ವತಿಯಿಂದ ನೂತನವಾಗಿ ನಿರ್ಮಿಸಿದ ಸಭಾಂಗಣವನ್ನು ಹಿರಿಯರಾದ ಕೆದಂಬಾಡಿ ಯಶೋಧರ ಮೊಣ್ಣಪ್ಪ ಅವರು ಉದ್ಘಾಟಿಸಿದರು.

ನಂತರ ದೇವಾಲಯ ಸಮಿತಿಯ ವಾರ್ಷಿಕ ಮಹಾಸಭೆ ಕೆದಂಬಾಡಿ ಪ್ರಸನ್ನ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕೊಳಂಬೆ ಶಿವಪ್ಪನವರು ಸ್ವಾಗತಿಸಿ ೬೦ ವರ್ಷಗಳಿಂದ ದೇವಾಲಯವನ್ನು ನಡೆಸಿಕೊಂಡು ಬರುತ್ತಿರುವ ಬಗ್ಗೆ ತಿಳಿಸಿದರು. ಕಾರ್ಯದರ್ಶಿ ದಂಬೆಕೋಡಿ ಪೂವಯ್ಯ ಲೆಕ್ಕಪತ್ರ ಮಂಡಿಸಿದರು. ಇಂದ್ರಕುಮಾರ್, ಮಡ್ತಲ ರಾಮಚಂದ್ರ, ದಂಬೆಕೋಡಿ ಹರೀಶ್, ಕೊಳಂಬೆ ವಿನು, ದೋಲ್ಪಾಡಿ ಅಜಿತ್ ದೇವಾಲಯ ಅಭಿವೃದ್ಧಿಯ ಬಗ್ಗೆ ಸಲಹೆ ನೀಡಿದರು. ಅಧ್ಯಕ್ಷರು ಮಾತನಾಡಿ ದೇವಾಲಯದ ಅಭಿವೃದ್ಧಿಗೆ ಎಲ್ಲರು ಸಹಕರಿಸಬೇಕೆಂದರು. ಸಭೆಯಲ್ಲಿ ಉಪಾಧ್ಯಕ್ಷ ವಿ.ಬಿ. ರಾಜು, ತಕ್ಕಮುಖ್ಯಸ್ಥರು, ಊರಿನವರು ಹಾಜರಿದ್ದರು.

ಕುಸುಮಾವತಿ ಪ್ರಾರ್ಥನೆ ಸಲ್ಲಿಸಿ ತಕ್ಕರಾದ ರಾಮಚಂದ್ರ ವಂದಿಸಿದರು.