ಮಡಿಕೇರಿ, ಏ. ೮: ಜಿಲ್ಲೆಯಲ್ಲಿ ೧೯ ಹೊಸ ಕೋವಿಡ್-೧೯ ಪ್ರಕರಣ ದೃಢಪಟ್ಟಿದೆ. ೧೮ ಪ್ರಕರಣಗಳು ಆರ್‌ಟಿಪಿಸಿಆರ್ ಮತ್ತು ೧ ಪ್ರಕರಣ ರ‍್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ದೃಢಪಟ್ಟಿದೆ.

ಮಡಿಕೇರಿ ತಾಲೂಕಿನಲ್ಲಿ ೬, ಸೋಮವಾರಪೇಟೆ ತಾಲೂಕಿನಲ್ಲಿ ೭ ವೀರಾಜಪೇಟೆ ತಾಲೂಕಿನಲ್ಲಿ ೬ ಹೊಸ ಕೋವಿಡ್-೧೯ ಪ್ರಕರಣಗಳು ಕಂಡುಬAದಿದೆ

ಜಿಲ್ಲೆಯಲ್ಲಿನ ಒಟ್ಟು ಕೋವಿಡ್-೧೯ ಪ್ರಕರಣಗಳ ಸಂಖ್ಯೆ ೬೫೦೮ ಆಗಿದ್ದು, ೬೩೦೨ ಮಂದಿ ಗುಣಮುಖರಾಗಿದ್ದಾರೆ. ೧೨೩ ಸಕ್ರಿಯ ಪ್ರಕರಣಗಳಿದ್ದು, ೮೩ ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ ೯೪ ಆಗಿದೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ತಿಳಿಸಿದ್ದಾರೆ.