ಸಿದ್ದಾಪುರ, ಏ. ೮: ಪ್ರತಿಷ್ಠಿತ ಕೊಡಗು ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಪಂದ್ಯಾಟದಲ್ಲಿ ಸಿದ್ದಾಪುರದ ಫ್ರೆಂಡ್ಸ್ ಕ್ರಿಕೆಟರ್ಸ್ ತಂಡವನ್ನು ಮಣಿಸಿ, ಸ್ಪೋರ್ಟ್ಸ್ ವರ್ಲ್ಡ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಕರಡಿಗೋಡುವಿನ ಕುಕ್ಕುನೂರು ಮೈದಾನದಲ್ಲಿ ನಡೆಯುತ್ತಿದ್ದ ಕೆ.ಸಿ.ಎಲ್. ಐದನೇ ಆವೃತ್ತಿಯ ಫೈನಲ್ ಪಂದ್ಯಾಟದಲ್ಲಿ ಮಡಿಕೇರಿಯ ಅನ್ಸಫ್ ಮಾಲೀಕತ್ವದ ಸ್ಪೋರ್ಟ್ಸ್ ವರ್ಲ್ಡ್ ತಂಡ ಗೆಲುವು ಸಾಧಿಸಿತು. ಫೈನಲ್ ಪಂದ್ಯಾಟದಲ್ಲಿ ಟಾಸ್ ಗೆದ್ದ ಸ್ಪೋರ್ಟ್ಸ್ ವರ್ಲ್ಡ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನಿಗದಿತ ೮ ಓವರ್‌ಗೆ ೮ ವಿಕೆಟ್ ನಷ್ಟಕ್ಕೆ ೮೫ ರನ್ ಗಳಿಸಿತು. ೮೬ ರನ್ ಗುರಿ ಬೆನ್ನಟ್ಟಿದ ಫ್ರೆಂಡ್ಸ್ ಕ್ರಿಕೆಟರ್ಸ್ ತಂಡ, ಆರಂಭದಲ್ಲೇ ಎರಡು ವಿಕೆಟ್ ಕಳೆದುಕೊಂಡು ಆಘಾತ ಎದುರಿಸಿತು. ಆರಂಭಿಕ ಆಜಾದ್ ಅಮೋಘ ಅರ್ಧ ಶತಕ ದಾಖಲಿಸಿದರು. ೮ ಓವರ್‌ನಲ್ಲಿ ೭೭ ರನ್ ಗಳಿಸಿ, ಕೊನೆಯ ಕ್ಷಣದಲ್ಲಿ ಸೋಲನ್ನು ಅನುಭವಿಸಿತು.

ಇದಕ್ಕೂ ಮೊದಲು ನಡೆದ ಕ್ವಾಲಿಫಯರ್ ಪಂದ್ಯಾಟದಲ್ಲಿ ಸ್ಪೋರ್ಟ್ಸ್ ವರ್ಲ್ಡ್ ಮಡಿಕೇರಿ ಹಾಗೂ ರಾಯಲ್ಸ್ ವೀರಾಜಪೇಟೆ ಮುಖಾಮುಖಿಯಾಗಿತ್ತು.

ಎಲಿಮಿನೇಟರ್ ಪಂದ್ಯಾಟದಲ್ಲಿ ಫ್ರೆಂಡ್ಸ್ ಕ್ರಿಕೆಟರ್ಸ್ ನೀಡಿದ ೯೪ ರನ್ ಬೃಹತ್ ಮೊತ್ತ ಬೆನ್ನಟ್ಟಿದ ಎ.ಕೆ ಫ್ರೆಂಡ್ಸ್ ಹುಂಡಿ ತಂಡ ೬೨ ರನ್ ಗಳಿಸಲಷ್ಟೆ ಶಕ್ತವಾಯಿತ್ತು.

ಕ್ಲಾಲಿಫಯರ್ ೨ ನೇ ಪಂದ್ಯಾಟದಲ್ಲಿ ಫ್ರೆಂಡ್ಸ್ ಕ್ರಿಕೆಟರ್ಸ್ ನೀಡಿದ ೬೭ ರನ್ ಗೆ ಪ್ರತ್ಯುತ್ತರವಾಗಿ ಬ್ಯಾಟ್ ಬೀಸಿದ ರಾಯಲ್ಸ್ ತಂಡ ನಿಗದಿತ ಓವರ್ ನಲ್ಲಿ ೯ ವಿಕೆಟ್ ಕಳೆದುಕೊಂಡು ೫೧ ರನ್ ಗಳಿಸಿ ಪರಾಭವಗೊಂಡಿತು.

ಫೈನಲ್ ಪಂದ್ಯದ ಪಂದ್ಯ ಪುರುಷೋತ್ತಮ ಸ್ಪೋರ್ಟ್ಸ್ ವರ್ಲ್ಡ್ ತಂಡದ ಸಂತೋಷ್, ಸರಣಿ ಶ್ರೇಷ್ಠ, ಅತೀ ಹೆಚ್ಚು ಸಿಕ್ಸರ್ ಹಾಗೂ ಹೆಚ್ಚು ರನ್ ಗಳಿಸಿದ ಆಟಗಾರ ಎ.ಕೆ. ಫ್ರೆಂಡ್ಸ್ ತಂಡದ ರಿಯಾಸ್ ಹುಂಡಿ, ಬೆಸ್ಟ್ ಬೌಲರ್ ಫ್ರೆಂಡ್ಸ್ ತಂಡದ ಹುಸೈನ್ ಸುಂಟಿಕೊಪ್ಪ, ಬೆಸ್ಟ್ ಬ್ಯಾಟ್ಸ್ಮನ್ ಫ್ರೆಂಡ್ಸ್ ತಂಡದ ಮುಸ್ತಫ ಹುಂಡಿ, ಉದಯೋನ್ಮುಖ ಆಟಗಾರ ಡಾಟ್ ಡೋಮಿನೇಟರ್ಸ್ ದುಬಾರೆ ತಂಡದ ಶ್ಯಾಮ್ ಪಾಲಿಬೆಟ್ಟ, ಶಿಸ್ತಿನ ತಂಡ ಟೀಂ ಕೊಂಬನ್ ಸಿದ್ದಾಪುರ, ಸರಣಿಯ ಭರವಸೆಯ ಆಟಗಾರ ಫ್ರೆಂಡ್ಸ್ ತಂಡದ ಆಝಾದ್ ಸುಂಟಿಕೊಪ್ಪ ಪಡೆದುಕೊಂಡರು. ಮುಖ್ಯ ತೀರ್ಪುಗಾರರಾಗಿ ದಿನೇಶ್ ಆಚಾರ್ಯ ಮಂಗಳೂರು ಹಾಗೂ ಸಹ ತೀರ್ಪುಗಾರರಾಗಿ ಹರೀಶ್ ಪಡೀಲ್ ಮತ್ತು ಪ್ರಕಾಶ್ ಡಿಸೋಜ ಜೊತೆಗೆ ಸ್ಕೋರರ್ ಆಗಿ ಅಜಿತ್ ಪಡೀಲ್, ವೀಕ್ಷಕ ವಿವರಣೆಯಲ್ಲಿ ಆಸಿಫ್ ಅಮ್ಮತ್ತಿ ಮತ್ತು ಇಕ್ಬಾಲ್ ಕಾರ್ಯನಿರ್ವಹಿಸಿದರು.

ಸಮಾರೋಪ ಸಮಾರಂಭ: ಫೈನಲ್ ಪಂದ್ಯಾಟದ ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕೆ.ಸಿ.ಎಲ್. ಪಂದ್ಯಾಟದಿAದ ಹತ್ತಾರು ಯುವ ಕ್ರೀಡಾ ಪ್ರತಿಭೆಗಳಿಗೆ ವೇದಿಕೆ ಲಭಿಸುತ್ತಿದೆ. ಸಿದ್ದಾಪುರ ವ್ಯಾಪ್ತಿಯಲ್ಲಿ ಸಾರ್ವಜನಿಕ ಮೈದಾನ ಇಲ್ಲದೇ ಕ್ರೀಡಾಪಟುಗಳು ಸಮಸ್ಯೆ ಎದುರಿಸುತ್ತಿದ್ದು, ಅಧಿಕಾರಿಗಳು, ಜನಪ್ರತಿನಿಧಿಗಳು ಸಾರ್ವಜನಿಕ ಮೈದಾನ ಒದಗಿಸಲು ಮುಂದಾಗಬೇಕು ಎಂದರು. ಪ್ರಸ್ತುತ ಡ್ರಗ್ಸ್ನಿಂದಾಗಿ ಯುವ ಜನತೆ ದಾರಿ ತಪ್ಪುತ್ತಿದ್ದು, ಡ್ರಗ್ಸ್ ಮುಕ್ತ ಕೊಡಗಿಗೆ ಕೈಜೋಡಿಸಲು ಮನವಿ ಮಾಡಿದರು.

ಮಾಜಿ ಜಿ.ಪಂ. ಸದಸ್ಯ ಎಂ.ಎಸ್. ವೆಂಕಟೇಶ್ ಮಾತನಾಡಿ, ಕೆ.ಸಿ.ಎಲ್ ಪಂದ್ಯಾಟ ಇತರೆ ಪಂದ್ಯಾವಳಿಗಿAತ ಭಿನ್ನವಾಗಿದ್ದು, ಅಚ್ಚುಕಟ್ಟಾಗಿ ಪಂದ್ಯಾವಳಿ ನಡೆದಿದೆ. ಕ್ರೀಡಾಕೂಟಕ್ಕಾಗಿ ಹಗಲಿರುಳು ಶ್ರಮಿಸಿ ಮೈದಾನ ನಿರ್ಮಿಸಿರುವುದು ಶ್ಲಾಘನೀಯ ಎಂದರು.

ಜಿ.ಪA. ಸದಸ್ಯರಾದ ಸುನಿತಾ ಮಂಜುನಾಥ್, ನೆಲ್ಯಹುದಿಕೇರಿ ಗ್ರಾ.ಪಂ ಅಧ್ಯಕ್ಷರಾದ ಸಾಬು ವರ್ಗೀಸ್, ಮೈದಾನದ ದಾನಿಗಳಾದ ಕುಕ್ಕುನೂರು ಪುರುಷೋತ್ತಮ, ದೇವಪ್ರಕಾಶ್, ಕವಿತಾ ಪ್ರಕಾಶ್, ಕಾಫಿಯಾ ರೆಸ್ಟೋರೆಂಟ್ ಮಾಲೀಕರಾದ ಶಿಯಾಬ್, ಸಲೀಂ, ಸಿದ್ದಾಪುರ ಗ್ರಾ.ಪಂ ಉಪಾಧ್ಯಕ್ಷ ಮಹೇಶ್, ದಾನಿಗಳಾದ ಜಾಫರ್, ಜಂಶಿ, ರಫೀಕ್, ಸಿನಾನ್, ಕ್ರಿಯೇಟಿವ್ ಖಲೀಲ್, ವಾಸು, ಸಫ್ವಾನ್, ಫಾಲಿಲ್, ಬಾಪು ರಫೀಕ್, ನಾ ಕನ್ನಡಿಗ ಟಾಮಿ ಥಾಮಸ್, ಬಾವ ಮಾಲ್ದಾರೆ ಇದ್ದರು.