ಸಿದ್ದಾಪುರ, ಏ. ೮: ಚೆನ್ನಂಗಿ ಗ್ರಾಮದ ಬಸವನಹಳ್ಳಿ ಹಾಡಿಯಲ್ಲಿ ಆದಿವಾಸಿ ಕುಟುಂಬಗಳಿಗೆ ನಿರ್ಮಿಸಿದ ಮನೆಗಳು ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಹಾಡಿ ನಿವಾಸಿಗಳು ದೂರು ನೀಡಿದ ಹಿನ್ನೆಲೆ ಐ.ಟಿ.ಡಿ.ಪಿ. ಇಲಾಖಾಧಿಕಾರಿಗಳು ಹಾಗೂ ಗುತ್ತಿಗೆದಾರ ಹಾಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಚೆನ್ನಯ್ಯನಕೋಟೆ ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಬಸವನಹಳ್ಳಿ ಹಾಡಿಯಲ್ಲಿ ಗುತ್ತಿಗೆದಾರ ಮನೆ ನಿರ್ಮಾಣ ಮಾಡಿದ್ದರು. ಆದರೆ ಈ ಮನೆಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು, ವಾಸಿಸಲು ಯೋಗ್ಯವಿಲ್ಲ ಹಾಗೂ ಕಾಡಾನೆಗಳು ಮನೆಗಳಿಗೆ ನುಗ್ಗಿ ದಾಂಧಲೆ ನಡೆಸುತ್ತಿದೆ ಎಂದು ಬಸವನಹಳ್ಳಿ ನಿವಾಸಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಗುತ್ತಿಗೆದಾರ ಹಾಗೂ ಐ.ಟಿ.ಡಿ.ಪಿ. ಇಲಾಖಾಧಿಕಾರಿಗಳ ವಿರುದ್ಧ ಪುಕಾರು ಒಳಪಡುವ ಬಸವನಹಳ್ಳಿ ಹಾಡಿಯಲ್ಲಿ ಗುತ್ತಿಗೆದಾರ ಮನೆ ನಿರ್ಮಾಣ ಮಾಡಿದ್ದರು. ಆದರೆ ಈ ಮನೆಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು, ವಾಸಿಸಲು ಯೋಗ್ಯವಿಲ್ಲ ಹಾಗೂ ಕಾಡಾನೆಗಳು ಮನೆಗಳಿಗೆ ನುಗ್ಗಿ ದಾಂಧಲೆ ನಡೆಸುತ್ತಿದೆ ಎಂದು ಬಸವನಹಳ್ಳಿ ನಿವಾಸಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಗುತ್ತಿಗೆದಾರ ಹಾಗೂ ಐ.ಟಿ.ಡಿ.ಪಿ. ಇಲಾಖಾಧಿಕಾರಿಗಳ ವಿರುದ್ಧ ಪುಕಾರು ನೀಡಿದ್ದರು. ಈ ಹಿನ್ನೆಲೆ ವೀರಾಜಪೇಟೆ ತಾಲೂಕು ಐ.ಟಿ.ಡಿ.ಪಿ. ಇಲಾಖಾಧಿಕಾರಿ ಗುರುಶಾಂತಪ್ಪ ಗುತ್ತಿಗೆದಾರನನ್ನು ಹಾಡಿಗೆ ಕರೆತಂದರು.

ಈ ಸಂದರ್ಭ ಹಾಡಿಯ ನಿವಾಸಿಗಳು ಗುತ್ತಿಗೆದಾರನ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಪ್ರಸಂಗವು ನಡೆಯಿತು. ಹಾಡಿಯ ನಿವಾಸಿಗಳು ತಮ್ಮ ಮನೆಗಳು ಕಳಪೆ ಗುಣಮಟ್ಟದಿಂದ ಕೂಡಿರುವ ಹಿನ್ನೆಲೆ ಅದನ್ನು ದುರಸ್ತಿಪಡಿಸಿ ಕೊಡುವುದು ಬೇಡ ನಮಗೆ ಹೊಸ ಮನೆ ನಿರ್ಮಾಣ ಮಾಡಿ ಕೊಡಬೇಕೆಂದು ಅಧಿಕಾರಿಗಳನ್ನು ಒತ್ತಾಯಿಸಿದರು. ಅಲ್ಲದೇ ಜಿಲ್ಲಾಧಿಕಾರಿಗಳಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.

ಈ ಸಂದರ್ಭ ಆದಿವಾಸಿ ಹೋರಾಟಗಾರ್ತಿ ಜೆ.ಕೆ. ಮುತ್ತಮ್ಮ, ಹಾಡಿ ನಿವಾಸಿಗಳಾದ ಮಹೇಶ, ಗಣೇಶ ಇನ್ನಿತರರು ಹಾಜರಿದ್ದರು.