ಮಡಿಕೇರಿ, ಏ. ೭: ವಿಶಿಷ್ಟ ಹಾಗೂ ವಿಭಿನ್ನವಾದ ಅರೆಭಾಷಿಕ ಜನಾಂಗದ ಸಂಸ್ಕೃತಿ ಹಾಗೂ ಪದ್ಧತಿಗಳು ಗೋಡೆಯ ಮೇಲಿನ ಹಾಳೆಯಲ್ಲಿ ರಾರಾಜಿಸುತ್ತಿವೆ., ಸಂಸ್ಕೃತಿಯ ಪ್ರತೀಕವಾದ ಮದುಮಗಳಿಗೆ ಎಣ್ಣೆ ಅರಶಿಣ ಹಚ್ಚುವದು., ಸಾಂಪ್ರದಾಯಿಕ ಹುತ್ತರಿ ಕೋಲಾಟ., ಜೋಗಿ ಕುಣಿತ., ಭೂಮಿತಾಯಿಯನ್ನು ಪೂಜಿಸುವ ಕಿಡ್ಡಸಾ ಆಚರಣೆ., ತಲಕಾವೇರಿಗೆ ಸಾಂಪ್ರದಾಯಿಕವಾಗಿ ಭಂಡಾರ ಕೊಂಡೊಯ್ಯುವದು., ಕಣ್ಮರೆಯಾಗುತ್ತಿರುವ ಚನ್ನ ಮಣೆ ಆಟ., ಅಜ್ಜಿ ಪಿಳ್ಳಿಯನ್ನು ಸ್ನಾನ ಮಾಡಿಸುವ ಕಲೆ., ಸಂಸ್ಕೃತಿಯ ಹೆಗ್ಗುರುತಾಗಿರುವ ಐನ್‌ಮನೆ., ಕೃಷಿ ಪದ್ಧತಿ, ವೀರತನದ ಹೆಗ್ಗುರುತಾಗಿರುವ ಹುತಾತ್ಮ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರು.., ಎಲ್ಲವೂ ಕಲಾವಿದರ ಕುಂಚದಲ್ಲಿ ಮನಮೋಹಕವಾಗಿ ಮೂಡಿ ಬಂದಿದ್ದು, ಕಲಾಸಕ್ತರನ್ನು ಒಂದು ಕ್ಷಣ ಮೂಖವಿಸ್ಮಿತರನ್ನಾಗಿ ಮಾಡುತ್ತವೆ. ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ‘ಸಂಸ್ಕೃತಿ- ಪ್ರಕೃತಿ’ ಚಿತ್ರಕಲಾ ಶಿಬಿರದಲ್ಲಿ ಜಿಲ್ಲೆಯ ಕಲಾವಿದರೂ ಸೇರಿದಂತೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಕಲಾವಿದರು ಏಳುದಿನಗಳ ಕಾಲ ಜಿಲ್ಲೆಯಲ್ಲಿಯೇ ಆಯ್ದ ಕೆಲವರ ಮನೆಯಲ್ಲಿ ತಂಗಿ ಅರೆಭಾಷೆ ಸಂಸ್ಕೃತಿಯನ್ನು ಅರಿತು ಅವುಗಳಿಗೆ ಬಣ್ಣದ ರೂಪದಲ್ಲಿ ಜೀವ ನೀಡಿದ್ದಾರೆ. ಓಂಕಾರೇಶ್ವರ ದೇವಾಲಯದ ಬಳಿಯಿರುವ ಭಾರತೀಯ ವಿದ್ಯಾಭವನ ಕೇಂದ್ರದ ಸಭಾಂಗಣದ ಗೋಡೆಗಳಲ್ಲಿ ಇದೀಗ ಈ ಸಂಸ್ಕೃತಿಯ ಅನಾವರಣವಾಗಿದೆ. ಇನ್ನೆರಡು ದಿನಗಳ ಕಾಲ ಈ ಚಿತ್ರಗಳು ಪ್ರದರ್ಶನಗೊಳಲಿದ್ದು, ಆಸಕ್ತರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.

ಕಲೆಗಳಿಗೆ ಒತ್ತು ನೀಡುತ್ತಿರುವದು ಶ್ಲಾಘನೀಯ

ಅರೆಭಾಷೆಯಲ್ಲಿನ ಸೋಭಾನೆ, ಜಾನಪದ ಕಲೆ ಮತ್ತು ಸಂಸ್ಕೃತಿಯನ್ನು ಮತ್ತಷ್ಟು ಉಳಿಸಿ ಬೆಳೆಸುವಲ್ಲಿ ಅರೆಭಾಷೆ ಸಂಸ್ಕೃತಿ-ಪ್ರಕೃತಿ ಚಿತ್ರಕಲಾ ಶಿಬಿರ ಯಶಸ್ವಿಯಾಗಿದೆ ಎಂದು ಮಡಿಕೇರಿ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಬೆಪ್ಪುರನ ಮೇದಪ್ಪ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಒಂದು ವಾರಗಳ ಕಾಲ ವಿವಿಧೆಡೆ ಏರ್ಪಡಿಸಲಾಗಿದ್ದ ಅರೆಭಾಷೆ ಸಂಸ್ಕೃತಿ-ಪ್ರಕೃತಿ ಚಿತ್ರಕಲಾ ಶಿಬಿರದ ಸಮಾರೋಪ ಸಮಾರಂಭವು ನಗರದ ಭಾರತೀಯ ವಿದ್ಯಾಭವನದಲ್ಲಿ ನಡೆಯಿತು. À ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅರೆಭಾಷೆ ಸಂಸ್ಕೃತಿ, ಜಾನಪದ ಕಲೆಗಳಿಗೆ ಒತ್ತು ನೀಡುತ್ತಿರುವುದು ಮೆಚ್ಚುವಂತದ್ದು, ಕಲೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಕಲಾವಿದರಿಗೆ ಇನ್ನಷ್ಟು ಪ್ರೋತ್ಸಾಹ ನೀಡಬೇಕು. ಆ ನಿಟ್ಟಿನಲ್ಲಿ ಅರೆಭಾಷೆ ಸಂಸ್ಕೃತಿ, ಸಾಹಿತ್ಯ ಅಕಾಡೆಮಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು. (ಮೊದಲ ಪುಟದಿಂದ) ಕೊಡಗು ಗೌಡ ಮಹಿಳಾ ಒಕ್ಕೂಟದ ಪೂರ್ವಾಧ್ಯಕ್ಷೆ ಕೂಡಕಂಡಿ ಕಾವೇರಮ್ಮ ಸೋಮಣ್ಣ ಅವರು ಮಾತನಾಡಿ ಕೊಡಗಿನಲ್ಲಿ ಅರೆಭಾಷೆ ಸಂಸ್ಕೃತಿ, ಆಚಾರ ವಿಚಾರಗಳು ವಿಶಿಷ್ಟವಾಗಿದ್ದು, ಸಂಪ್ರದಾಯಗಳನ್ನು ಚಿತ್ರಕಲೆಗಳ ಮೂಲಕ ಹೊರತಂದಿರುವುದು ವಿಶೇಷವಾಗಿದೆ ಎಂದರು.

ರಾಮನಗರ ಜಿಲ್ಲೆಯಲ್ಲಿರುವ ಜಾನಪದ ಲೋಕದಲ್ಲಿ ಅರೆಭಾಷೆ ಸಂಸ್ಕೃತಿ, ಕಲೆಗಳ ಚಿತ್ರಗಳನ್ನು ಅಳವಡಿಸುವಂತಾಗಬೇಕು. ಜಾನಪದ ಲೋಕಕ್ಕೆ ಭೇಟಿ ನೀಡುವ ಕಲಾಭಿಮಾನಿಗಳು ಕೊಡಗಿನ ಚಿತ್ರಕಲೆಗಳನ್ನು ವೀಕ್ಷಿಸಲು ಅವಕಾಶ ಮಾಡಬೇಕು. ಆ ನಿಟ್ಟಿನಲ್ಲಿ ಜಾನಪದ ಲೋಕದ ಅಧ್ಯಕ್ಷರೊಂದಿಗೆ ಚರ್ಚಿಸುವಂತೆ ಸಲಹೆ ಮಾಡಿದರು.

ಅಕಾಡೆಮಿ ಅಧ್ಯಕ್ಷ ಲಕ್ಷಿö್ಮÃನಾರಾಯಣ ಕಜೆಗದ್ದೆ ಮಾತನಾಡಿ; ಕಳೆದ ಒಂದು ವರ್ಷದಿಂದ ಕೊರೊನಾ ವೈರಸ್ ನಡುವೆಯೂ ಅಕಾಡೆಮಿ ವತಿಯಿಂದ ಸರ್ಕಾರದ ನಿಯಮಗಳನ್ನು ಪಾಲಿಸಿಕೊಂಡು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ನಾಟಕ, ರಂಗಭೂಮಿ, ಚಿತ್ರಕಲೆ, ಸಾಹಿತ್ಯ, ಸಂಸ್ಕೃತಿ ಹೀಗೆ ವಿಶಿಷ್ಟ ಹಾಗೂ ವಿಭಿನ್ನ ಕಾರ್ಯಕ್ರಮಗಳನ್ನು ಅಕಾಡೆಮಿ ಮೂಲಕ ಹಮ್ಮಿಕೊಂಡಿರುವುದು ವಿಶೇಷವಾಗಿದೆ. ಆ ನಿಟ್ಟಿನಲ್ಲಿ ಸಾರ್ವಜನಿಕರಿಂದಲೂ ಉತ್ತಮ ಸ್ಪಂದನೆ ಇದ್ದಲ್ಲಿ ಅರೆಭಾಷೆ ಸಾಂಸ್ಕೃತಿಕ ವಿನಿಮಯಕ್ಕೆ ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಅಕಾಡೆಮಿ ಸದಸ್ಯೆ ಸ್ಮಿತಾ ಅಮೃತರಾಜ್ ಮಾತನಾಡಿ ಕಲೆಯನ್ನು ಅರ್ಥಮಾಡಿಕೊಳ್ಳಲು ಭಾಷೆ ಬೇಕಿಲ್ಲ. ಆ ನಿಟ್ಟಿನಲ್ಲಿ ಹೊಸ ಪ್ರಯೋಗವನ್ನು ಅಕಾಡೆಮಿ ವತಿಯಿಂದ ಹಮ್ಮಿಕೊಂಡಿರುವುದು ವಿಶೇಷವಾಗಿದೆ ಎಂದರು.

ಮಡಿಕೇರಿ ತಾ.ಪಂ.ಸದಸ್ಯ ಕೊಡಪಾಲು ಗಣಪತಿ ಮಾತನಾಡಿ ಅರೆಭಾಷೆ ಸಂಸ್ಕೃತಿಗೆ ಸಂಬAಧಿಸಿದAತೆ ಕಲಾವಿದರು ಬಿಡಿಸಿರುವ ಚಿತ್ರಗಳನ್ನು ಗಮನಿಸಿದಾಗ ಇಡೀ ಚಿತ್ರವೇ ಕಣ್ಣು ಮುಂದೆ ನಿಲ್ಲುತ್ತದೆ. ರವಿವರ್ಮನ ಚಿತ್ರಕಲೆಗಳನ್ನು ನೋಡಿದಂತಾಗುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತೋಟಂಬೈಲು ಪಾರ್ವತಿ ಮಾತನಾಡಿ; ಅರೆಭಾಷೆ ಸಂಸ್ಕೃತಿ-ಪ್ರಕೃತಿ ಚಿತ್ರಕಲಾ ಶಿಬಿರವು ಒಂದು ಅದ್ಭುತ ಶಿಬಿರವಾಗಿತ್ತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಲಾವಿದರಾದ ಕಾಶೀನಾಥ್ ಇತರರು ಚಿತ್ರಕಲೆ ಬಿಡಿಸುವಲ್ಲಿನ ಸಂದರ್ಭ ಕುರಿತು ಅನುಭವ ಹಂಚಿಕೊAಡರು. ಅಕಾಡೆಮಿ ಸದಸ್ಯರಾದ ಬೈತಡ್ಕ ಜಾನಕಿ ಬೆಳ್ಯಪ್ಪ, ಚೊಕ್ಕಾಡಿ ಪ್ರೇಮ ರಾಘವಯ್ಯ, , ಜಯಪ್ರಕಾಶ್ ಮೋಂಟಡ್ಕ, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಅಧ್ಯಕ್ಷ ಕುಡೆಕಲ್ಲು ಸಂತೋಷ್, ಕೊಡಗು ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ, ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಎಚ್.ಟಿ. ಅನಿಲ್, ಪ್ರಮುಖರಾದ ಕೋಡಿ ಚಂದ್ರಶೇಖರ್ ಇತರರು ಇದ್ದರು. ರಿಜಿಸ್ಟಾçರ್ ಚಿನ್ನಸ್ವಾಮಿ ಸ್ವಾಗತಿಸಿದರು. ಸದಸ್ಯ ಧನಂಜಯ ಅಗೋಳಿಕಜೆ ನಿರೂಪಿಸಿದರು. ಡಾ.ಕೆ.ಸಿ. ದಯಾನಂದ ವಂದಿಸಿದರು.