ಶನಿವಾರಸಂತೆ, ಏ. ೮: ದುಂಡಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಮಾಸಿಕ ಸಭೆಯು ಪಂಚಾಯಿತಿ ಅಧ್ಯಕ್ಷೆ ಪೂರ್ಣಿಮಾ ಕಿರಣ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಪಂಚಾಯಿತಿಗೆ ಬಂದ ಸಾರ್ವಜನಿಕ ಅರ್ಜಿಗಳನ್ನು ಹಾಗೂ ಸರಕಾರಿ ಕಾಗದ ಪತ್ರಗಳನ್ನು ಸರ್ವ ಸದಸ್ಯರುಗಳೊಂದಿಗೆ ಪರಿಶೀಲಿಸಿ ಚರ್ಚಿಸಿದರು.

ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರು ಮೃತಪಟ್ಟರೆ ಅವರ ಶವಸಂಸ್ಕಾರಕ್ಕೆ ಪಂಚಾಯಿತಿಯಿAದ ರೂ. ೨ ಸಾವಿರ ನೀಡುವಂತೆ ನಿರ್ಧರಿಸಲಾಯಿತು. ಸದಸ್ಯೆ ಎಸ್.ಪಿ. ಭಾಗ್ಯ ಅವರು ಮಾತನಾಡಿ, ಸಭಾ ಭತ್ಯೆ ಹಾಗೂ ಗೌರವಧನವನ್ನು ಹೆಚ್ಚಿಸುವಂತೆ ಮನವಿ ಮಾಡಿದರು.

ಪಂಚಾಯಿತಿ ಸದಸ್ಯ ಡಿ.ಪಿ. ಬೋಜಪ್ಪ ಮಾತನಾಡಿ, ಪಂಚಾಯಿತಿಯಲ್ಲಿ ಜಮಾಬಂದಿ ಹಾಗೂ ಗ್ರಾಮ ಸಭೆಯನ್ನು ನಡೆಸದ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿದರು.

ಈ ಹಿಂದೆ ಸಾಮಾಜಿಕ ಲೆಕ್ಕ ಪರಿಶೋಧನೆ ಸಭೆಯನ್ನು ಫೆ. ೯ ರಂದು ಕರೆಯಲಾಗಿದ್ದು, ಸಾರ್ವಜನಿಕರ ಅಸಮಾಧಾನದ ಬಗ್ಗೆ ಸಭೆಯನ್ನು ಮುಂದೂಡಲಾಗಿತ್ತು. ಆದರೆ ಇಲ್ಲಿಯವರೆಗೆ ಸಭೆ ಕರೆಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಸಭೆಯಲ್ಲಿ ಪಂಚಾಯಿತಿ ಉಪಾಧ್ಯಕ್ಷ ಎಸ್.ಸಿ. ನಿತಿನ್, ಸದಸ್ಯರುಗಳಾದ ಕೆ.ಎಸ್. ಜಾನಕಿ, ನಂದಿನಿ, ಎಸ್.ಸಿ. ಕಾಂತರಾಜ್, ಎಸ್.ಪಿ. ಭಾಗ್ಯ, ಮಹೇಶ್, ಗೋಪಿಕಾ, ಎಂ.ಡಿ. ದೇವರಾಜ್, ಸತ್ಯವತಿ, ಸಿ.ಜೆ. ಗಿರೀಶ್, ಡಿ.ಪಿ. ಬೋಜಪ್ಪ, ಭವಾನಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ಉಪಸ್ಥಿತರಿದ್ದರು.