ಗೋಣಿಕೊಪ್ಪಲು, ಏ. ೬: ತನ್ನ ಪತ್ನಿ ಅನೇಕ ಬಾರಿ ಕರೆದರೂ ಮನೆಗೆ ಬರಲಿಲ್ಲ ಎಂಬ ಏಕೈಕ ಕಾರಣದಿಂದ ತನ್ನ ತಾಳ್ಮೆಯನ್ನು ಕಳೆದುಕೊಂಡು ಪತ್ನಿ ಸೇರಿದಂತೆ ಅಮಾಯಕ ಬಂಧುಗಳ ಸಾವಿಗೆ ಕಾರಣನಾಗಿ ತಲೆ ಮರೆಸಿಕೊಂಡಿದ್ದ ಕೊಲೆ ಆರೋಪಿ ಬೋಜ (೪೮) ವಿಷ ಸೇವಿಸಿ ತಾನೂ ಕೂಡ ಆತ್ಮಹತ್ಯೆಗೆ ಶರಣಾಗುವಮೂಲಕ ಇಡೀ ಪ್ರಕರಣಕ್ಕೆ ತೆರೆ ಕಂಡಿದೆ.ಮುದ್ದಿಯಡ ನರೇಶ್ ಅವರ ಕಾಫಿ ತೋಟದ ಲೈನ್ ಮನೆಯ ಅನತಿ ದೂರದಲ್ಲಿ ಈತನ ಮೃತ ದೇಹ ಪತ್ತೆಯಾಗಿದ್ದು ದೇಹವು ಕೊಳೆತು ದುರ್ನಾತ ಬೀರುತ್ತಿತ್ತು. ತೋಟದ ಕಾರ್ಮಿಕ ಕುಳಿಯ ಎಂಬಾತ ಮಂಗಳವಾರ ಮುಂಜಾನೆ ೭.೩೦ರ ಸುಮಾರಿಗೆ ಹಸುವನ್ನು ಮೇಯಿಸಲು ತೆರಳಿದ ಸಂದರ್ಭ ಕಾಫಿ ತೋಟದಿಂದ ದುರ್ನಾತ ಬರುತ್ತಿರುವುದನ್ನು ಗಮನಿಸಿ ಹತ್ತಿರ ತೆರಳಿ ನೋಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಡಿವೈಎಸ್ಪಿ ಜಯಕುಮಾರ್ ಹಾಗೂ ತಂಡ ಸ್ಥಳಕ್ಕೆ ತೆರಳಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇಡೀ ಜಿಲ್ಲೆಯನ್ನು ಬೆಚ್ಚಿ ಬೀಳಿಸಿದ್ದ ಪೊನ್ನಂಪೇಟೆ ಸಮೀಪದ ಮುಗುಟಗೇರಿಯಲ್ಲಿ ಪೆಟ್ರೋಲ್ ಸುರಿದು ಅಮಾಯಕ ಜೀವಗಳನ್ನು ಬಲಿ ತೆಗೆದುಕೊಂಡಿದ್ದ ಪ್ರಕರಣದಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದ ಆರೋಪಿ ಬೋಜನ ಪತ್ನಿಯ ಸಂಬAಧಿ ತೋಲನ ಪತ್ನಿ ಭಾಗ್ಯ (೨೬) ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮುಂಜಾನೆ ೩ ಗಂಟೆಯ ವೇಳೆ ಮೃತ ಪಟ್ಟಿದ್ದಾಳೆ. ಈ ಘಟನೆಯಿಂದಾಗಿ ಇದೀಗ ಸಾವಿನ ಸಂಖ್ಯೆ ೭ಕ್ಕೆ ಏರಿದೆ. ಭಾಗ್ಯಳ ಅಂತ್ಯ ಸಂಸ್ಕಾರವು ಹುಣಸೂರಿನಲ್ಲಿ ನಡೆಯಿತು. ಬೋಜನ ಅಂತ್ಯಕ್ರಿಯೆಯನ್ನು ಗೋಣಿಕೊಪ್ಪಲುವಿನ ಹಿಂದೂ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು.
ಘಟನಾ ಸ್ಥಳಕ್ಕೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರಾ ಖುದ್ದು ಭೇಟಿ ನೀಡಿ ಮಾಹಿತಿ ಪಡೆದರು. ನಂತರ ಮಾಧ್ಯಮದೊಂದಿಗೆ ಮಾತನಾಡಿ, ಆರೋಪಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ. ಪ್ರಕರಣಕ್ಕೆ ಸಂಬAಧಿಸಿದAತೆ ಕೊಡಗು ಜಿಲ್ಲಾ ಪೊಲೀಸರು. ೮ ತಂಡಗಳಲ್ಲಿ ಹಗಲು ರಾತ್ರಿ
(ಮೊದಲ ಪುಟದಿಂದ) ಎನ್ನದೆ ಕರ್ತವ್ಯ ನಿರ್ವಹಿಸಿದ್ದರು. ಇವರ ಕಾರ್ಯವನ್ನು ಶ್ಲಾಘಿಸುವುದಾಗಿ ತಿಳಿಸಿದರು.
ಆರೋಪಿ ಬೋಜನ ಕಿರುಕುಳದಿಂದ ನೊಂದಿದ್ದ ಆತನ ಪತ್ನಿ ಬೇಬಿ ಹಲವು ದಿನಗಳಿಂದ ತನ್ನ ತಮ್ಮ ಮಂಜು ವಾಸಮಾಡುವ ಮುಗುಟಗೇರಿಯ ಲೈನ್ ಮನೆಯಲ್ಲಿ ಆಶ್ರಯ ಪಡೆದಿದ್ದಳು. ಇತ್ತ ಪತಿ ಬೋಜ ಬೇಬಿಗೆ ಫೋನ್ ಮಾಡಿ ಮನೆಗೆ ಬರುವಂತೆ ಒತ್ತಾಯಿಸುತ್ತಿದ್ದ ಗಂಡನ ಭಯದಿಂದ ಬೇಬಿ ತನ್ನ ತಮ್ಮನ ಮನೆಯಲ್ಲಿಯೇ ವಾಸವಿದ್ದಳು. ತಾ. ೩ ರಂದು ಮಂಜುವಿನ ಮನೆಗೆ ಬಂಧುಗಳು ಆಗಮಿಸಿದ್ದರು. ಈ ವೇಳೆ ಬೋಜನು ತನ್ನ ಪತ್ನಿಗೆ ಪದೇ ಪದೇ ಫೋನ್ ಮಾಡಿ ಮನೆಗೆ ಬರುವಂತೆ ಒತ್ತಾಯಿಸುತ್ತಿದ್ದ. ಆದರೆ ಬೇಬಿ ಮನೆಗೆ ಹೋಗುವ ಮನಸ್ಸು ಮಾಡಲಿಲ್ಲ.
ಇದರಿಂದ ತಾಳ್ಮೆ ಕಳೆದುಕೊಂಡ ಬೋಜ ಆಕ್ರೋಶಗೊಂಡು ತನ್ನ ಪತ್ನಿಯನ್ನು ಕೊಲ್ಲುವ ನಿರ್ಧಾರಕ್ಕೆ ಬಂದಿದ್ದಾನೆ. ಮಂಜು ವಾಸವಿದ್ದ ಲೈನ್ ಮನೆಗೆ ತೆರಳಿ ನಿದ್ರೆಯಲ್ಲಿದ್ದ ಪತ್ನಿ ಬೇಬಿ ಹಾಗೂ ಬಂಧುಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ಇದರಿಂದ ಮೂವರು ಮಕ್ಕಳು ಸೇರಿದಂತೆ ಆರು ಮಂದಿ ಮೃತಪಟ್ಟಿದ್ದರು. ೪ ಮಂದಿ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಇದರಲ್ಲಿ ತೋಲನ ಪತ್ನಿ ಭಾಗ್ಯ ಮಂಗಳವಾರ ಮುಂಜಾನೆ ಮೃತಪಟ್ಟಿದ್ದಾಳೆ. ಉಳಿದವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಆತ್ಮಹತ್ಯೆಗೆ ಶರಣಾದ ಬೋಜ: ಪ್ರಕರಣಕ್ಕೆ ಸಂಬAಧಿಸಿದAತೆ ಪ್ರಮುಖ ಆರೋಪಿಯಾಗಿದ್ದ ಬೋಜ ತಾ. ೩ರ ಮಧ್ಯರಾತ್ರಿ ತನ್ನ ಕುಟುಂಬ ಸದಸ್ಯರ ಪ್ರಾಣವನ್ನು ತೆಗೆದು ತಾನೂ ಕೂಡ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಾರ ಕೈಗೊಂಡಿದ್ದ ಅದರಂತೆಯೇ ರಾತ್ರಿ ತನ್ನ ಮನೆಯ ಸಮೀಪದ ಕಾಫಿ ತೋಟದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆದರೆ ಪೊಲೀಸರು ಆರೋಪಿಯು ತಲೆ ಮರೆಸಿಕೊಂಡಿರುವ ಹಿನ್ನೆಲೆಯಲ್ಲಿ ಎಂಟು ತಂಡಗಳಾಗಿ ಆರೋಪಿ ಬೋಜನನ್ನು ಸೆರೆ ಹಿಡಿಯಲು ಪ್ರಯತ್ನ ನಡೆಸಿದ್ದರು. ಶ್ವಾನದಳ, ಬೆರಳಚ್ಚು ತಜ್ಞರು ಆರೋಪಿಯ ಸುಳಿವಿಗಾಗಿ ಪ್ರಯತ್ನ ನಡೆಸಿದ್ದರು. ಘಟನೆ ನಡೆದ ಸ್ಥಳದ ಸುತ್ತಮುತ್ತಲಿನ ಕಾಫಿ ತೋಟದಲ್ಲಿ ಬೋಜ ಅಡಗಿರುವ ಸಂಶಯ ವ್ಯಕ್ತಪಡಿಸಿ ಶೋಧ ಕಾರ್ಯ ನಡೆಸಿದ್ದರು. ಆದರೆ ಪ್ರಯೋಜನವಾಗಿರಲಿಲ್ಲ. ಮೈಸೂರಿನ ಐಜಿಪಿ ಹಾಗೂ ಕೊಡಗು ಜಿಲ್ಲಾ ಎಸ್ಪಿ ಖುದ್ದಾಗಿ ಆಗಮಿಸಿ ಆರೋಪಿಯನ್ನು ವಶಕ್ಕೆ ಪಡೆಯಲು ಸೂಚನೆ ನೀಡಿದ್ದರು.
೮ ತಂಡದಲ್ಲಿ ಕಾರ್ಯಾಚರಣೆ: ಜಿಲ್ಲೆಯನ್ನು ಬೆಚ್ಚಿ ಬೀಳಿಸಿದ್ದ ಘಟನೆಯಲ್ಲಿ ಆರೋಪಿಯನ್ನು ಸೆರೆ ಹಿಡಿಯಲು ವೀರಾಜಪೇಟೆ ಡಿವೈಎಸ್ಪಿ ಜಯಕುಮಾರ್ ಮುಂದಾಳತ್ವದಲ್ಲಿ ೮ ತಂಡಗಳನ್ನು ರಚಿಸಿ ಆರೋಪಿಯ ಸೆರೆಗಾಗಿ ಊಟಿ, ಮಾನಂದವಾಡಿ, ಹುಣಸೂರು, ಕಬಿನಿ. ಬಾವಲಿ, ತೋರ, ಸೇರಿದಂತೆ ದೇವರ ಕಾಡುಗಳಲ್ಲಿ ಈತನ ಹುಡುಕಾಟ ನಡೆಸಿದ್ದರು.
ಆದರೆ ಎಲ್ಲಿಯೂ ಆರೋಪಿ ಬೋಜನ ಸುಳಿವು ಲಭ್ಯವಿರಲಿಲ್ಲ. ಮಂಗಳವಾರ ಮುಂಜಾನೆ ಬೋಜನ ಮೃತ ದೇಹ ಲಭ್ಯವಾಗಿದೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆಯೇ ತಂಡದ ಸಿಬ್ಬಂದಿಗಳು ಕಾರ್ಯಾಚರಣೆ ನಿಲ್ಲಿಸಿ ಘಟನಾ ಸ್ಥಳಕ್ಕೆ ಆಗಮಿಸಿದ್ದರು. ತಂಡದಲ್ಲಿ ಗೋಣಿಕೊಪ್ಪ ವೃತ್ತ ನಿರೀಕ್ಷಕ ಜಯರಾಮ್, ಶ್ರೀಮಂಗಲ ವೃತ್ತ ನಿರೀಕ್ಷಕ ಪರಶಿವಮೂರ್ತಿ, ವೀರಾಜಪೇಟೆ ವೃತ್ತ ನಿರೀಕ್ಷಕ ಶ್ರೀಧರ್, ಗೋಣಿಕೊಪ್ಪ ಠಾಣಾಧಿಕಾರಿ ಸುಬ್ಬಯ್ಯ, ಪೊನ್ನಂಪೇಟೆ ಠಾಣಾಧಿಕಾರಿ ಕುಮಾರ್, ವೀರಾಜಪೇಟೆ ಠಾಣಾಧಿಕಾರಿ ಸಿದ್ದಲಿಂಗ ಬಾನಸೆ, ಶ್ರೀಮಂಗಲ ಠಾಣಾಧಿಕಾರಿ ರವಿಶಂಕರ್, ಕ್ರೆöÊಮ್ ಬ್ರಾಂಚ್‌ನ ಬೋಜಪ್ಪ, ಸಿಬ್ಬಂದಿಗಳಾದ ಮನು, ಹರೀಶ್, ಪ್ರಮೋದ್,ಮಜೀದ್, ಮಂಜು, ಸ್ವಾಮಿ, ದೇವರಾಜ್, ಕೃಷ್ಣ ಸುರೇಂದ್ರ, ಕೃಷ್ಣಮೂರ್ತಿ, ವಿಶ್ವನಾಥ್, ಧನಂಜಯ್, ಜಾಫ್ರಿ, ರಂಜಿತ್, ವಿನಾಯಕ, ಬಶೀರ್, ಗೋಪಿ ಸೇರಿದಂತೆ ಇನ್ನಿತರ ಪೊಲೀಸ್ ಸಿಬ್ಬಂದಿಗಳು ಕಾರ್ಯಾಚರಣೆ ತಂಡದಲ್ಲಿದ್ದರು.
ಘಟನೆಯಲ್ಲಿ ಗಾಯಗೊಂಡು ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಐಟಿಡಿಪಿ ಅಧಿಕಾರಿ ಶಿವಕುಮಾರ್ ಭೇಟಿ ಮಾಡಿದರು. ಅಲ್ಲಿಯ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆಗೆ ಸಂಬAಧಿಸಿದAತೆ ಹಣವನ್ನು ಇಲಾಖೆ ವತಿಯಿಂದ ನೀಡಲು ಅವಕಾಶವಿದೆ. ಗುಣಮಟ್ಟದ ಚಿಕಿತ್ಸೆ ನೀಡುವಂತೆ ತಿಳಿಸಲಾಗಿದೆ ಎಂದು ‘ಶಕ್ತಿ’ಗೆ ಮಾಹಿತಿ ನೀಡಿದರು.