ಮಡಿಕೇರಿ, ಏ. ೬: ಕೃಷಿ ಉತ್ಪನ್ನಗಳಿಗೆ ಸಂಬAಧಿಸಿದAತೆ ರೈತರು - ಬೆಳೆಗಾರರಿಗೆ ಪ್ರಯೋಜನ ಕಾರಿಯಾಗುವಂತೆ ವಹಿವಾಟು ನಡೆಸುತ್ತಿರುವ ಪುತ್ತೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಕ್ಯಾಂಪ್ಕೊ (ಸೆಂಟ್ರಲ್ ಅರ್ಕನೆಟ್ ಆ್ಯಂಡ್ ಕೋಕೋ ಮಾರ್ಕೆಟಿಂಗ್ ಆ್ಯಂಡ್ ಪ್ರೊಸೆಸಿಂಗ್ ಯುನಿಟ್) ಸಹಕಾರಿ ಸಂಸ್ಥೆಯು ಇದೀಗ ತನ್ನ ವಿಭಾಗವೊಂದನ್ನು ಕೊಡಗು ಜಿಲ್ಲೆಯಲ್ಲಿ ಪ್ರಾರಂಭಿಸಲು ಮುಂದಾಗಿದೆ. ಜಿಲ್ಲೆಯಲ್ಲಿ ಪ್ರಮುಖವಾಗಿ ಕರಿಮೆಣಸುಬೆಳೆಗೆ ಸಂಬAಧಿಸಿದAತೆ ಗೋಣಿಕೊಪ್ಪಲುವಿನಲ್ಲಿ ಕ್ಯಾಂಪ್ಕೊ ಮಡಿಕೇರಿ, ಏ. ೬: ಕೃಷಿ ಉತ್ಪನ್ನಗಳಿಗೆ ಸಂಬAಧಿಸಿದAತೆ ರೈತರು - ಬೆಳೆಗಾರರಿಗೆ ಪ್ರಯೋಜನ ಕಾರಿಯಾಗುವಂತೆ ವಹಿವಾಟು ನಡೆಸುತ್ತಿರುವ ಪುತ್ತೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಕ್ಯಾಂಪ್ಕೊ (ಸೆಂಟ್ರಲ್ ಅರ್ಕನೆಟ್ ಆ್ಯಂಡ್ ಕೋಕೋ ಮಾರ್ಕೆಟಿಂಗ್ ಆ್ಯಂಡ್ ಪ್ರೊಸೆಸಿಂಗ್ ಯುನಿಟ್) ಸಹಕಾರಿ ಸಂಸ್ಥೆಯು ಇದೀಗ ತನ್ನ ವಿಭಾಗವೊಂದನ್ನು ಕೊಡಗು ಜಿಲ್ಲೆಯಲ್ಲಿ ಪ್ರಾರಂಭಿಸಲು ಮುಂದಾಗಿದೆ. ಜಿಲ್ಲೆಯಲ್ಲಿ ಪ್ರಮುಖವಾಗಿ ಕರಿಮೆಣಸು
ಬೆಳೆಗೆ ಸಂಬAಧಿಸಿದAತೆ ಗೋಣಿಕೊಪ್ಪಲುವಿನಲ್ಲಿ ಕ್ಯಾಂಪ್ಕೊಕರಿಮೆಣಸು ಖರೀದಿ ಕೇಂದ್ರವನ್ನು ತೆರೆಯಲಾಗುತ್ತಿದ್ದು, ಇದು ತಾ. ೧೩ ರಂದು ಉದ್ಘಾಟನೆಗೊಳ್ಳಲಿದೆ.
ಈ ಸಂಸ್ಥೆಯು ದೇಶದ ದೊಡ್ಡ ಕೃಷಿ ಉತ್ಪನ್ನಗಳ ವಹಿವಾಟಿನ ಸಹಕಾರಿ ಸಂಸ್ಥೆಯಾಗಿದ್ದು, ದೇಶದ ಹಲವೆಡೆ ಸುಮಾರು ೪೦ಕ್ಕೂ ಅಧಿಕ ಶಾಖೆಗಳನ್ನು ಹೊಂದಿದೆ. ೧೯೭೩ರಲ್ಲಿ ವಾರಣಾಸಿ ಸುಬ್ರಾಯಭಟ್ಟರು ಈ ಸಂಸ್ಥೆ ಪ್ರಾರಂಭಿಸಿದರು. ಕರ್ನಾಟಕ ಹಾಗೂ ಕೇರಳ ರಾಜ್ಯದ ಸುಮಾರು ೧.೨೫ ಲಕ್ಷ ಸದಸ್ಯರು ಕ್ಯಾಂಪ್ಕೊ ಸದಸ್ಯತ್ವ ಹೊಂದಿದ್ದಾರೆ.
ಈ ಹಿಂದೆ ಅಡಿಕೆ ಬೆಲೆ ತೀವ್ರ ಕುಸಿತಗೊಂಡ ಸಂದರ್ಭ ಹಾಗೂ ಕೋಕೋ ಬೆಳೆ ನಷ್ಟಕ್ಕೊಳಗಾಗಿದ್ದ ಸಂದರ್ಭದಲ್ಲಿ ಈ ಬೆಳೆಗಾರರಿಗೆ ಬೆಂಬಲವಾಗಿ ನಿಲ್ಲಲು ಈ ಸಂಸ್ಥೆ ಮುಂದಾಗಿ ಹಂತ ಹಂತವಾಗಿ ಪ್ರಗತಿ ಸಾಧಿಸಿದೆ. ಚಾಕೊಲೇಟ್ ಕಾರ್ಖಾನೆ ಯನ್ನೂ ಈ ಸಂಸ್ಥೆ ಹೊಂದಿದ್ದು, ೫೦೦ ರಿಂದ ೧ ಸಾವಿರ ಉದ್ಯೋಗಸ್ಥರು ಇದ್ದಾರೆ. ಅಡಿಕೆ - ಕೋಕೋ ಬೆಳೆಗೆ ಧಕ್ಕೆಯಾದಾಗ ಬೆಳೆಗಾರರಿಗೆ ಸ್ಪಂದಿಸಿದAತೆ ರಬ್ಬರ್ ಹಾಗೂ ಕರಿಮೆಣಸು ಬೆಳೆಗಾರರಿಗೂ ಸಮಸ್ಯೆಯಾಗುತ್ತಿರುವ ಹಿನ್ನೆಲೆಯಲ್ಲಿ ಇದೀಗ ಕೆಲ ವರ್ಷದಿಂದ ಈ ಬೆಳೆಗೂ, ರೈತರಿಗೆ ಪ್ರೋತ್ಸಾಹ ನೀಡಲು ಸಂಸ್ಥೆ ಮುಂದಾಗಿದೆ. ಇದರಂತೆ ಪ್ರಮುಖ ಕೇಂದ್ರವಾದ ಗೋಣಿಕೊಪ್ಪ ದಲ್ಲಿ ವಿಭಾಗ ಪ್ರಾರಂಭಿಸಲಾಗುತ್ತಿದೆ. ಪುತ್ತೂರಿನ ಕಾವು ಎಂಬಲ್ಲಿ ಅಡಿಕೆ - ಕಾಳುಮೆಣಸು, ಕೋಕೋ ಹಾಗೂ ರಬ್ಬರ್ ಸಂಸ್ಕರಣಾ ಘಟಕವೊಂದು ರೂ. ೩೦ ಕೋಟಿ ವೆಚ್ಚದಲ್ಲಿ ಪ್ರಾರಂಭವಾಗುತ್ತಿದ್ದು, ಇದು ಮೇ ತಿಂಗಳಿನಲ್ಲಿ ಉದ್ಘಾಟನೆಯಾಗಲಿದೆ ಎಂದು ಸಂಸ್ಥೆ ಅಧ್ಯಕ್ಷ ಕಿಶೋರ್‌ಕುಮಾರ್ ಕೂಡಗಿ ‘ಶಕ್ತಿ’ಗೆ ತಿಳಿಸಿದರು.
ಇದು ಸಹಕಾರಿ ಸಂಸ್ಥೆಯಾಗಿದ್ದು, ಸಂಸ್ಥೆಯ ಕಾರ್ಯಚಟುವಟಿಕೆಯಿಂದ ರೈತರಿಗೆ ಸ್ಪರ್ಧಾತ್ಮಕ ಬೆಲೆ ಸಿಗುತ್ತದೆ. ಮಾರುಕಟ್ಟೆಯನ್ನು ಸ್ಥಿರತೆಯಲ್ಲಿಡಲು ಸಂಸ್ಥೆ ಪ್ರಯತ್ನಿಸುತ್ತದೆ. ಎಲ್ಲಾ ವ್ಯವಹಾರಗಳು ಬ್ಯಾಂಕ್ ಮೂಲಕ ಅಧಿಕೃತ ಬಿಲ್‌ನ ಸಹಿತ ನಡೆಯುತ್ತದೆ. ಬೆಲೆ ಕುಸಿತದ ಸಂದರ್ಭ ರೈತರನ್ನು ಸಂಕಷ್ಟದಿAದ ಪಾರು ಮಾಡುವದು ಸಂಸ್ಥೆಯ ಚಿಂತನೆಯಾಗಿದ್ದು, ಇದರಲ್ಲಿ ಯಶಸ್ಸು ಕಂಡಿದೆ. ಉತ್ಪನ್ನದ ನೇರ ಖರೀದಿಯನ್ನು ಮಾಡಲಾಗುವದು ಎಂದು ಅವರು ವಿವರಿಸಿದರು.
ಆರ್‌ಟಿಸಿ ಸಹಿತವಾಗಿ ನಿಗದಿತ ವಂತಿಗೆಯAತೆ ರೈತ ಸದಸ್ಯರನ್ನು ನೋಂದಾಯಿಸಿಕೊಳ್ಳಲಾಗುವದು ಮುಂದಿನ ದಿನದಲ್ಲಿ ಕೇರಳದ ವಯನಾಡು, ಕೊಟ್ಟಾಯಂ ಹಾಗೂ ಸಕಲೇಶಪುರದಲ್ಲಿಯೂ ಕೇಂದ್ರ ಪ್ರಾರಂಭಿಸುವ ಚಿಂತನೆ ನಡೆದಿದೆ. ಈ ಹಿಂದೆ ಈ ಸಂಸ್ಥೆಗೆ ಕರ್ನಾಟಕ ಹಾಗೂ ಕೇರಳ ಸರಕಾರದ ಷೇರು ಹಣ ಇತ್ತು. ಆದರೆ ಇದೀಗ ಇದನ್ನು ಹಿಂತಿರುಗಿಸಲಾಗಿದೆ. ಕ್ಯಾಂಪ್ಕೊ ಸಂಸ್ಥೆಯೇ ಪ್ರತ್ಯೇಕ ಸಹಕಾರಿ ಸಂಸ್ಥೆಯಾಗಿ ಕಾರ್ಯಚಟುವಟಿಕೆ ನಡೆಸುತ್ತಿದ್ದು, ಈ ಬಾರಿ ೨೦ ಸಾವಿರ ಕೋಟಿಯಷ್ಟು ವಹಿವಾಟು ನಡೆಸಿದೆ ಎಂದು ಕಿಶೋರ್ ಕೂಡಗಿ ತಿಳಿಸಿದರು.
ಇದೀಗ ಪ್ರಥಮ ಬಾರಿಗೆ ಕೊಡಗಿನ ಗೋಣಿಕೊಪ್ಪದಲ್ಲಿ ಕೇಂದ್ರ ಪ್ರಾರಂಭಿಸಲಾಗುತ್ತಿದ್ದು, ಬೆಳೆಗಾರರು ಪ್ರಯೋಜನ ಪಡೆಯಬಹುದು ಎಂದು ಅವರು ಹೇಳಿದರು. ತಾ. ೧೩ ರಂದು ಕೇಂದ್ರವನ್ನು ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಲಿದ್ದು, ಡಾ|| ಕಲ್ಲಡ್ಕ ಪ್ರಭಾಕರ್ ಭಟ್, ಮಾಜಿ ಎಂಎಲ್‌ಸಿ ಅರುಣ್ ಮಾಚಯ್ಯ ಅವರು ಪಾಲ್ಗೊಳ್ಳಲಿದ್ದಾರೆ.