ಸೋಮವಾರಪೇಟೆ, ಏ. ೬: ಸರ್ಕಾರಿ ಜಾಗದಲ್ಲಿ ಅನೇಕ ದಶಕಗಳಿಂದ ಮನೆ ಕಟ್ಟಿಕೊಂಡು ವಾಸವಿದ್ದವರಿಗೆ ಸರ್ಕಾರದ ಮೂಲಕ ಹಕ್ಕುಪತ್ರ ನೀಡಿ ಜಾಗವನ್ನು ಸಕ್ರಮಗೊಳಿಸಿದ್ದು, ಮುಂದಿನ ದಿನಗಳಲ್ಲಿ ಈ ಜಾಗವನ್ನು ಪರಭಾರೆ ಮಾಡಿದರೆ ಫಲಾನುಭವಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಂ. ಪಿ. ಅಪ್ಪಚ್ಚುರಂಜನ್ ಎಚ್ಚರಿಸಿದರು.
ಇಲ್ಲಿನ ಶಾಸಕರ ಕಚೇರಿ ಆವರಣದಲ್ಲಿ ತಾಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಯ ೧೪೧ ಮಂದಿ ಪಲಾನುಭವಿಗಳಿಗೆ ೯೪ಸಿ ಅಡಿಯಲ್ಲಿ ಹಕ್ಕುಪತ್ರ ವಿತರಿಸಿ ರಂಜನ್ ಮಾತನಾಡಿದರು.
ಈವರೆಗೆ ತಾವುಗಳು ಮನೆ ಕಟ್ಟಿಕೊಂಡಿದ್ದ ಜಾಗಕ್ಕೆ ಯಾವುದೇ ಆಧಾರವಿರಲಿಲ್ಲ; ಇದೀಗ ೯೪ ಸಿ. ಅಡಿಯಲ್ಲಿ ಅರ್ಜಿ ಸಲ್ಲಿಸಿದ ಮೇರೆ ಸರ್ಕಾರದಿಂದಲೇ ಜಾಗವನ್ನು ಸಕ್ರಮ ಗೊಳಿಸಿ ಹಕ್ಕುಪತ್ರ ನೀಡಲಾಗುತ್ತಿದೆ. ಈ ಜಾಗಕ್ಕೆ ಸಂಬAಧಿಸಿದAತೆ ಸರ್ಕಾರದಿಂದ ಹಲವು ನಿಯಮ ಗಳನ್ನು ಹೇರಿದ್ದು, ಇದನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ಹಕ್ಕುಪತ್ರವನ್ನು ಆಧಾರ ವಾಗಿಟ್ಟುಕೊಂಡು ಬ್ಯಾಂಕ್ಗಳಲ್ಲಿ ಮನೆ ನಿರ್ಮಾಣಕ್ಕೆ ಸಾಲ ಪಡೆಯಬಹುದು. ಇದನ್ನು ಹೊರತುಪಡಿಸಿ
ಬೇರೆಯವರಿಗೆ ಪರಭಾರೆ ಮಾಡಿದ್ದು ಕಂಡುಬAದರೆ ಅಂತಹ ಜಾಗವನ್ನು ಸರ್ಕಾರಕ್ಕೆ ವಾಪಸ್ ಪಡೆದು ಕೊಳ್ಳಲಾಗುವುದು. ಇದರೊಂದಿಗೆ ಇತರ ಸರ್ಕಾರಿ ಸವಲತ್ತುಗಳನ್ನು ಸ್ಥಗಿತಗೊಳಿಸಲು ಶಿಫಾರಸ್ಸು ಮಾಡುವು ದಾಗಿ ರಂಜನ್ ಎಚ್ಚರಿಸಿದರು.
ಈ ಸಂದರ್ಭ ತಾಲೂಕು ತಹಸೀಲ್ದಾರ್ ಆರ್. ಗೋವಿಂದ ರಾಜು, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್, ಸದಸ್ಯ ಧರ್ಮಪ್ಪ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.