ಮಡಿಕೇರಿ, ಏ. ೬: ಲಯನ್ಸ್ ವೃತ್ತಿ ತರಬೇತಿ ಕೇಂದ್ರ ಟ್ರಸ್ಟ್ನ ವಾರ್ಷಿಕ ಮಹಾಸಭೆ ನಗರದ ಲಯನ್ಸ್ನ ಸಭಾಂಗಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಟ್ರಸ್ಟ್ನ ಅಧ್ಯಕ್ಷ ಅಂಬೆಕಲ್ಲು ನವೀನ್ ಕುಶಾಲಪ್ಪ ಅವರು ಸಾಮಾಜಿಕ ಕಳಕಳಿಯೊಂದಿಗೆ ಎಲ್ಲರ ಸಹಕಾರದಿಂದ ಟ್ರಸ್ಟ್ ಜನಪರ ಕಾರ್ಯ ನಿರ್ವಹಿಸಿದೆ; ಹಾಗಾಗಿ ಸುಸಜ್ಜಿತವಾದ ಸಭಾಂಗಣ ನಿರ್ಮಿಸಲು ಸಾಧ್ಯವಾಯಿತು ಎಂದರು. ಪ್ರಧಾನ ಕಾರ್ಯದರ್ಶಿ ಮಧುಕರ್ ಕೆ. ಮಾತನಾಡಿ ಟ್ರಸ್ಟ್ ನಡೆದು ಬಂದ ದಾರಿ ಹಾಗೂ ಕಳೆದ ಒಂದು ವರ್ಷದ ಅವಧಿಯಲ್ಲಿ ಸಂಸ್ಥೆ ಅಭಿವೃದ್ಧಿ ಸಾಧಿಸಿದ ಬಗ್ಗೆ ವಿವರಿಸಿದರು.
ಉಪಾಧ್ಯಕ್ಷ ನಿರಂಜನ್ ಎಂ.ಎ. ಮಾತನಾಡಿ, ನವೀನ್ ಕಳೆದ ಮೂರು ವರ್ಷಗಳಿಂದ ಈ ಟ್ರಸ್ಟ್ನ ಅಧ್ಯಕ್ಷರಾಗಿ ಉತ್ತಮ ಕಾರ್ಯವನ್ನು ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ತೆರವಾದ ಖಜಾಂಚಿ ಸ್ಥಾನಕ್ಕೆ ನೂತನವಾಗಿ ಸರ್ವಾನುಮತದಿಂದ ಆಯ್ಕೆಯಾದ ಮಧುಕರ್ ಶೇಟ್ ಡಿ. ಕಳೆದ ಸಾಲಿನ ಆಯ ವ್ಯಯವನ್ನು ಮಂಡಿಸಿದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ಏಳಿಗೆಯಲ್ಲಿ ಅವಿರತವಾಗಿ ಶ್ರಮಿಸಿದ ಸಂಸ್ಥೆಯ ಅಧ್ಯಕ್ಷ ಅಂಬೆಕಲ್ಲು ನವೀನ್ ಕುಶಾಲಪ್ಪ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಲಯನ್ಸ್ ಸಂಸ್ಥೆಯ ಅಧ್ಯಕ್ಷೆ ಅನಿತಾ ಸೋಮಣ್ಣ, ಕಾರ್ಯದರ್ಶಿ ಕವಿತಾ ಬೊಳ್ಳಪ್ಪ ಇದ್ದರು. ಸಭೆಯಲ್ಲಿ ಲಯನ್ಸ್ನ ಹಿರಿಯ ಸದಸ್ಯರುಗಳಾದ ಬೇಬಿ ಮ್ಯಾಥ್ಯೂ, ಸೋಮಣ್ಣ ಪಿ.ಪಿ., ಎಸ್.ಬಿ. ಮುರುಗೇಶ್, ದಾಮೋದರ್ ಕೆ., ಮೋಹನ್ ಕುಮಾರ್, ನಾಗೇಂದ್ರ ಎಂ.ಪಿ. ಫಾದರ್ ಇಗ್ನೇಷಿಯಸ್ ಮಸ್ಕರೇನಸ್, ಮೋಹನ್ ದಾಸ್, ಎನ್.ಬಿ. ರವಿ, ಡಿ.ಜಿ. ಕಿಶೋರ್, ನಟರಾಜ್ ಕಸ್ತೂರ್, ದಿನೇಶ್ ರಾವ್, ಬೊಳ್ಳಪ್ಪ, ತೇಜರಾಜ್ ಹಾಗೂ ಲಯನ್ಸ್ ಖಜಾಂಚಿಯಾದ ಕಮಲಾ ಮುರುಗೇಶ್ ಹಾಜರಿದ್ದರು.
ಸ್ನೇಹಾ ಮಧುಕರ್, ಸಪ್ನಾ ಮಧುಕರ್ ಹಾಗೂ ಸ್ಕಂದಾ ಮಧುಕರ್ ಪ್ರಾರ್ಥಿಸಿದರೆ, ಹಿರಿಯ ಸದಸ್ಯ ಮೋಹನ್ ದಾಸ್ರವರು ವಂದಿಸಿದರು. ಸಂಸ್ಥೆಯ ಸದಸ್ಯರಿಂದ ಮನೋರಂಜನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.