ಸಿದ್ದಾಪುರ, ಏ ೬: ರಸ್ತೆ ವಿವಾದದ ಬಗ್ಗೆ ಕಲಹ ನಡೆದು ಉಭಯ ಕಡೆಯವರ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿದ್ದಾಪುರ ಸಮೀಪದ ಬಾಡಗ-ಬಾಣಂಗಾಲ ಗ್ರಾಮದ ಬಿ. ಕಾನನಕಾಡು ಕಾಫಿ ತೋಟದ ಮಾಲೀಕ ಸಿ.ಟಿ. ಪೊನ್ನಪ್ಪ ಹಾಗೂ ಅವರ ಸಂಬAಧಿಕರುಗಳಾದ ರೇಷ್ಮ ಚಂಗಪ್ಪ ಅವರ ನಡುವೆ ರಸ್ತೆಯಲ್ಲಿ ಅಡ್ಡಲಾಗಿ ಚರಂಡಿ ತೆಗೆದ ವಿಚಾರಕ್ಕೆ ಸಂಬAಧಿಸಿ ಪರಸ್ಪರ ಕಲಹ ನಡೆದು ಈ ಸಂಬAಧ ರೇಷ್ಮ ಚಂಗಪ್ಪ ಸಿ.ಟಿ. ಪೊನ್ನಪ್ಪ ವಿರುದ್ಧ ದೂರು ನೀಡಿದ್ದು, ದೂರಿನ ಮೇರೆಗೆ ಸಿ.ಟಿ. ಪೊನ್ನಪ್ಪ ಅವರ ವಿರುದ್ಧ ಕೊಲೆ ಯತ್ನ ಸೇರಿದಂತೆ ಇನ್ನಿತರ ಪ್ರಕರಣಗಳು ದಾಖಲಾಗಿತ್ತು. ಇದೇ ವಿಚಾರಕ್ಕೆ ಸಂಬAಧಿಸಿ ಸಿ.ಟಿ. ಪೊನ್ನಪ್ಪ ಅವರು ನೀಡಿರುವ ಪುಕಾರಿನ ಮೇರೆಗೆ ರೇಷ್ಮ ಚಂಗಪ್ಪ, ಅಶ್ವಿನ್ ಮುತ್ತಣ್ಣ, ದಿವಿನ್ ಮುತ್ತಣ್ಣ, ಪ್ರವೀಣ್ ಸೇರಿದಂತೆ ಇತರರ ವಿರುದ್ಧ ಕೊಲೆ ಬೆದರಿಕೆ ಸೇರಿದಂತೆ ಇನ್ನಿತರ ಪ್ರಕರಣಗಳು ಸಿದ್ದಾಪುರ ಠಾಣೆಯಲ್ಲಿ ದಾಖಲಾಗಿರುತ್ತದೆ. ರೇಷ್ಮ ಚಂಗಪ್ಪ ನೀಡಿರುವ ಪುಕಾರಿನ ಮೇರೆಗೆ ಪೊನ್ನಪ್ಪ ಅವರಿಗೆ ಸೇರಿದ ಬಂದೂಕನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮೊಕದ್ದಮೆಯನ್ನು ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.