ಕುಶಾಲನಗರ, ಏ. ೬: ಶಾಸಕ ಎಂ.ಪಿ ಅಪ್ಪಚ್ಚುರಂಜನ್ ದಿಢೀರ್ ಕುಶಾಲನಗರ ಕಂದಾಯ ಇಲಾಖೆಯ ಕಚೇರಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಪರಿಶೀಲನೆ ನಡೆಸಿದರು.

ನಾಡಕಚೇರಿಗೆ ಭೇಟಿ ನೀಡಿದ ಶಾಸಕ ರಂಜನ್ ಕಚೇರಿ ಮುಂಭಾಗ ಸಾಲುನಿಂತಿದ್ದ ಮಹಿಳೆಯರು ಬಂದ ಕಾರಣ ತಿಳಿದು ಅಧಿಕಾರಿಗಳ ಬಳಿ ಸಾರ್ವಜನಿಕರ ಕೆಲಸ ತಕ್ಷಣ ಮಾಡಿಕೊಡುವಂತೆ ಸೂಚಿಸಿದರು. ಅನವಶ್ಯಕ ಅಲೆದಾಡುವ ಪರಿಸ್ಥಿತಿ ಉಂಟಾಗದAತೆ ಎಚ್ಚರ ವಹಿಸುವಂತೆ ತಿಳಿಸಿದರು.