ಕುಶಾಲನಗರ, ಏ. ೬: ಕುಶಾಲನಗರದ ನುಸ್ರತುಲ್ ಇಸ್ಲಾಂ ಯೂತ್ ಅಸೋಸಿಯೇಷನ್ ವತಿಯಿಂದ ಬಡ ಮಕ್ಕಳಿಗೆ ಉಚಿತವಾಗಿ ಸುನ್ನತ್ ಕಾರ್ಯಕ್ರಮವನ್ನು ದಾರುಲ್ ಉಲೂಂ ಮದ್ರಸದಲ್ಲಿ ನಡೆಯಿತು.

ಸಂಘದ ವತಿಯಿಂದ ಸುನ್ನತ್ ಕಾರ್ಯಕ್ರಮ ನಡೆಸಲಾಗಿದ್ದು, ೭೯ ಬಡ ಮಕ್ಕಳಿಗೆ ಸುನ್ನತ್ ಕಾರ್ಯವನ್ನು ನೆರವೇರಿಸಲಾಯಿತು.

ಈ ಸಂದರ್ಭ ಮಾತನಾಡಿದ ಹಿಲಾಲ್ ಮಸೀದಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್, ಕುಶಾಲನಗರದ ನುಸ್ರತುಲ್ ಇಸ್ಲಾಂ ಯೂತ್ ಅಸೋಸಿಯೇಷನ್ ಹಲವು ವರ್ಷಗಳಿಂದ ಧಾರ್ಮಿಕ ಹಾಗೂ ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಬಡವರಿಗೆ ಅನುಕೂಲವಾಗುವ ಉದ್ದೇಶದಿಂದ ಉಚಿತ ಸುನ್ನತ್ ಕಾರ್ಯಕ್ರಮವನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದರು.

ಮುAದೆಯೂ ಹೆಚ್ಚು ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತಾಗಲಿ ಎಂದು ಶುಭಹಾರೈಸಿದರು.

ದಾರುಲ್ ಉಲೂಂ ಮದ್ರಸದ ಪ್ರಾಂಶುಪಾಲ ತಮ್ಲೀಕ್ ದಾರಿಮಿ ಮಾತನಾಡಿದರು. ಸುನ್ನತ್ ಕಾರ್ಯವನ್ನು ನೆರವೇರಿಸಲು ಆಗಮಿಸಿದ್ದ ಮೈಸೂರಿನ ಡಾ. ಸೈಯ್ಯದ್ ಮುದಸ್ಸಿರ್ ಅವರು, ಸುನ್ನತ್ ನ ನಂತರ ಪೋಷಕರು ಮಕ್ಕಳನ್ನು ಪರಿಪಾಲಿಸಬೇಕಾದ ವಿಧಾನವನ್ನು ವಿವರಿಸಿದರು.

ಅಧ್ಯಕ್ಷತೆಯನ್ನು ಹಿಲಾಲ್ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ ವಹಿಸಿದ್ದರು. ಖಜಾಂಜಿ ಲತೀಫ್, ಪ್ರಮುಖರಾದ ಹುಸೇನ್, ಶಫಿ, ಹುಸೇನ್, ನುಸ್ರತುಲ್ ಇಸ್ಲಾಂ ಯೂತ್ ಅಸೋಸಿಯೇಷನ್ ಅಧ್ಯಕ್ಷ ಫಾರೂಕ್, ಉಪಾಧ್ಯಕ್ಷ ಕಬೀರ್, ಕಾರ್ಯದರ್ಶಿ ನೂರುದ್ದೀನ್, ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಬಿ. ಶಂಶುದ್ಧೀನ್, ಅಸೋಸಿಯೇಷನ್ ಪದಾಧಿಕಾರಿಗಳಾದ ಕೈಸರ್, ಶಾಜಿಮೋನ್, ಹಮೀದ್ ಹಾಗೂ ಇನ್ನಿತರರು ಇದ್ದರು.