ಸುಂಟಿಕೊಪ್ಪ, ಏ. ೬: ಕೊಡಗು ಗೌಡ ನಿವೃತ್ತ ನೌಕರರ ಸಂಘದ ವತಿಯಿಂದÀ ಕೊಡಗು ಗೌಡ ವಿದ್ಯಾ ಸಂಘದ ಮಡಿಕೇರಿಯ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಅರೆಭಾಷಿಕ ವಧು- ವರರ ಸಂದರ್ಶನ ಕಾರ್ಯಕ್ರಮವನ್ನು ಟೆಲಿಕಾಂ ಇಲಾಖೆಯ ಉಪ ವಿಭಾಗದ ನಿವೃತ್ತ ವ್ಯವಸ್ಥಾಪಕಿ ಹೊಸೂರು ಗೀತಾ ರಮೇಶ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಅರೆಭಾಷಿಕ ವಧು ವರರ ಸಂದರ್ಶನ ಬಹಳ ಒಳ್ಳೆಯ ಕಾರ್ಯಕ್ರಮವಾಗಿದೆ. ವಧು ವರರ ಆಯ್ಕೆ ಸಂದÀರ್ಭ ಪೋಷಕರು ಒಳ್ಳೆಯ ನಿರ್ಣಯವನ್ನು ತೆಗೆದುಕೊಂಡು ಆಯ್ಕೆ ಮಾಡಿದ್ದಲ್ಲಿ ಜೋಡಿಯ ಮುಂದಿನ ಜೀವನ ಸುಖಮಯವಾಗಲಿದೆ. ವೈವಾಹಿಕ ಜೀವನದ ಕನಸು ನನಸಾಗಲು ಇಂತಹ ಕಾರ್ಯಕ್ರಮ ಸೂಕ್ತವಾಗಿದೆ ಎಂದರು.
ರಾಷ್ಟçಮಟ್ಟದ ವಿಜ್ಞಾನ ಸ್ನೇಹಿ ಪ್ರಶಸ್ತಿ ವಿಜೇತೆ ಶಿಕ್ಷಕಿ ಪುದಿಯನೆÀರವನ ರೇವತಿ ರಮೇಶ್ ಮಾತನಾಡಿ, ಸೂಕ್ತ ವಧು-ವರರ ಆಯ್ಕೆಗೆ ಕಾರ್ಯಕ್ರಮ ಉತ್ತಮ ವೇದಿಕೆ ಎಂದರು.
ಸAಘದ ಅಧ್ಯಕ್ಷ ಕೋರನ ಸಿ. ವಿಶ್ವನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ ಕಳೆದ ೧೫ ವರ್ಷಗಳಿಂದ ಕೊಡಗು ಗೌಡ ನಿವೃತ್ತ ನೌಕರರ
ಸಂಘದ ವತಿಯಿಂದÀ ಉಚಿತ ದಂತ ಚಿಕಿತ್ಸಾ ಶಿಬಿರ, ನೇತ್ರ ಚಿಕಿತ್ಸೆ,
ಕನ್ನಡಕ ವಿತರಣೆ, ಮುಂತಾದ ಜನೋಪಯೋಗಿ ಕಾರ್ಯಕ್ರಮವನ್ನು ನಡೆಸಲಾಗಿದೆ. ಗೌಡ ಸಂಘದ ಎಲ್ಲಾ ಸದಸ್ಯರ ಸಹಕಾರದಿಂದ ಇದು ಸಾಧ್ಯವಾಗಿದೆ. ಮುಂದೆಯೂ ಜನಾಂಗದ ಎಲ್ಲರೂ ಈ ಕಾರ್ಯಕ್ಕೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭ ಕೊಡಗು ಗೌಡ ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷ ಕುದುಪಜೆ ಬೋಜಪ್ಪ, ಕಾರ್ಯದರ್ಶಿ ಬೈತಡ್ಕ ಎ. ಬೆಳ್ಯಪ್ಪ, ಜಂಟಿ ಕಾರ್ಯದರ್ಶಿ ಕುದುಪಜೆ ಶಾರದ, ಖಜಾಂಚಿ ಪೊನ್ನಚ್ಚನ ಜಿ ಸೋಮಣ್ಣ, ನಿರ್ದೇಶಕರಾದ ದಂಬೆಕೋಡಿ ಎಸ್.ಆನಂದ, ಪಟ್ಟಡ ಸಿ.ದೇವಯ್ಯ, ಹೊಸೋಕ್ಲು ಟಿ. ಪೊನ್ನಪ್ಪ, ತಳೂರು ಕೆ. ಕಾಳಪ್ಪ, ಕುಯ್ಯಮುಡಿ ಕೆ.ವಸಂತ, ಕೂಡಕಂಡಿ ಉಮಾದೇವಿ, ಕರ್ಣಯ್ಯನ ನಾಗೇಶ, ಅತ್ತೇಡಿ ಕೃಷ್ಣಪ್ಪ, ಸೂದನ ಮೋಹಿನಿ ಉಪಸ್ಥಿತರಿದ್ದರು.