ನವದೆಹಲಿ, ಏ. ೬: ಮಾಜಿ ರಾಷ್ಟಿçÃಯ ಚಾಂಪಿಯನ್ ಕಲಿಯಂಡ ನಿಕಿ ಪೂಣಚ್ಚ ಅವರು ಐಟಿಎಫ್ ಪುರುಷರ ಟೆನಿಸ್ ಪಂದ್ಯಾವಳಿಯಲ್ಲಿ ಭಾನುವಾರ ೬-೩, ೭-೬ (೫) ಅಮೇರಿಕದ ನಾಲ್ಕನೇ ಶ್ರೇಯಾಂಕದ ಆಟಗಾರ ಆಲಿವರ್ ಕ್ರಾಫೋರ್ಡ್ ಅವರನ್ನು ೬-೩, ೭-೬ (೫) ಸೆಟ್ಗಳಿಂದ ಸೋಲಿಸಿ ಟ್ರೋಫಿ ಗೆದ್ದುಕೊಂಡರು. ಅಮೇರಿಕದ ಝೇನ್ ಖಾನ್ ಪ್ರಸ್ತುತ ಟೂರ್ನಮೆಂಟ್ನ ಮೊದಲ ಎರಡು ಪಂದ್ಯಾವಳಿಗಳನ್ನು ಗೆದ್ದ ನಂತರ, ಇಂದೋರ್ನಲ್ಲಿ ನಡೆದ ಫೈನಲ್ನಲ್ಲಿ ಅವರನ್ನು ಕ್ರಾಫೋರ್ಡ್ ಸೋಲಿಸಿದ್ದರು. ಸಿಂಗಲ್ಸ್ನಲ್ಲಿ ಭಾರತೀಯರೊಬ್ಬರು ಚಾಂಪಿಯನ್ ಆಗಿರುವುದು ದೇಶದ ಕ್ರೀಡಾಭಿಮಾನಿಗಳಿಗೆ ಹೆಮ್ಮೆಯ ಸಂಗತಿಯಾಗಿದೆ.
ಕಳೆದ ಮೂರು ವಾರಗಳಿಂದ ಈಜಿಪ್ಟ್, ಲಕ್ನೋ, ಇಂದೋರ್ ಮತ್ತು ಪುಣೆಯಲ್ಲಿ ನಡೆದ ನಾಲ್ಕು ಪಂದ್ಯಗಳನ್ನು ಗೆಲ್ಲುವಲ್ಲಿ ನಿಕಿ ವಿಫಲರಾಗಿದ್ದರು. ಅವರು ಅಂರ್ರಾಷ್ಟಿçÃಯ ಆಟಗಾರರಾದ ನಿಶಾಂತ್ ದಬಾಸ್, ಸ್ವೀಡನ್ನ ಫಿಲಿಪ್ ಬರ್ಗೆವಿ ಮತ್ತು ಇಟಲಿಯ ಲೊರೆಂಜೊ ಬೊಚಿ ಅವರನ್ನು ಹಿಂದಿನ ಪಂದ್ಯಾಟಗಳಲ್ಲಿ ಸೋಲಿಸಿದ್ದರು. ಸೆಮಿ ಫೈನಲ್ನಲ್ಲಿ ಅವರ ಎದುರಾಳಿ ಜೆಕ್ ಗಣರಾಜ್ಯದ ಡಾಲಿಬೋರ್ ಸ್ವರ್ಸಿನಾ ಅವರು ವೈದ್ಯಕೀಯ ಕಾರಣದಿಂದ ಆಡಲು ಸಾಧ್ಯವಾಗದಿದ್ದಾಗ ವಾಕ್ಓವರ್ ಪಡೆದರು.
ಗೆಲುವಿನ ನಂತರ ಈ ವರದಿಗಾರನೊಂದಿಗೆ ಮಾತನಾಡಿದ ನಿಕಿ ಅವರು ‘ಈ ಟ್ರೋಫಿಯಿಂದ ನನಗೆ ತುಂಬಾ ಸಂತೋಷವಾಗಿದೆ. ಟೂರ್ನಮೆಂಟ್ನಲ್ಲಿ ನಾನು ಭಾಗವಹಿಸುವ ಯಾವುದೇ ನಿರೀಕ್ಷೆಗಳಿರಲಿಲ್ಲ. ಪುಣೆಯಲ್ಲಿ ನಡೆದ ಕೊನೆಯ ಪಂದ್ಯಾವಳಿಯಲ್ಲಿ ಮಣಿಕಟ್ಟಿನ ಗಾಯದಿಂದ ನಿವೃತ್ತಿ ಹೊಂದಿದ್ದೆ. ಮೊದಲು ನೋವಿನಿಂದ ಗುಣಮುಖನಾಗುವುದು ನನ್ನ ಆದ್ಯತೆ ಆಗಿತ್ತು ಎಂದು ತಿಳಿಸಿದರು. ಕೊಡಗು ಜಿಲ್ಲೆಯ ಮೂಲದ ೨೫ ವರ್ಷದ ಕಲಿಯಂಡ ನಿಕಿ ಪೂಣಚ್ಚ ಅವರ ವೃತ್ತಿಪರ ಜೀವನದಲ್ಲಿ ಇದು ಎರಡನೇ ವಿಜಯ ಆಗಿದೆ. ಅವರು ೨೦೧೮ರಲ್ಲಿ ಇಂಡೋನೇಷ್ಯಾದಲ್ಲಿ ಕ್ವಾಲಿಫೈಯರ್ ಆಗಿ ತನ್ನ ಮೊದಲ ಪ್ರಶಸ್ತಿಯನ್ನು ಗೆದ್ದಿದ್ದರು. ಅವರು ೨೦೧೯ರಲ್ಲಿ ರಾಷ್ಟಿçÃಯ ಚಾಂಪಿಯನ್ಶಿಪ್ ಗೆದ್ದರು. ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಅವರು ಅರ್ಹತೆ ಗಳಿಸಿಕೊಳ್ಳಲು ಬೆಂಗಳೂರಿನ ರೋಹನ್ ಬೋಪಣ್ಣ ಟೆನಿಸ್ ಅಕಾಡೆಮಿಯಲ್ಲಿ ತರಬೇತಿ ಪಡೆದರು.
ಮುಂದಿನ ಮೇ ತಿಂಗಳ ಮೊದಲ ವಾರದಲ್ಲಿ ಆಫ್ರಿಕಾದಲ್ಲಿ ನಡೆಯಲಿರುವ ಟೆನ್ನಿಸ್ ಟೂರ್ನಮೆಂಟ್ನಲ್ಲಿ ಭಾಗವಹಿಸಲಿರುವುದಾಗಿ ಹೇಳಿದ ಅವರು ಅದಕ್ಕಾಗಿ ತರಬೇತಿ ಪಡೆಯುತಿದ್ದೇನೆ ಎಂದರು. ಈ ಟೂರ್ನಮೆಂಟ್ನ ಒಟ್ಟು ಬಹುಮಾನ ಮೊತ್ತವು ೧೫ ಸಾವಿರ. ಅಮೆರಿಕನ್ ಡಾಲರ್ ಅಂದರೆ ಸುಮಾರು ೧.೧೦ ಕೋಟಿ ರೂಪಾಯಿಗಳಾಗಿದ್ದರೂ ಇಲ್ಲಿ ಆಡಿದ ಆಟಗಾರರಿಗೆ ಬಹುಮಾನದ ಹಣವನ್ನು ವಿಭಜಿಸಿ ಹಂಚಲಾಗುತ್ತದೆ. ನಿಕಿ ಅವರು ಟ್ರೋಫಿ ಗೆದ್ದುಕೊಂಡಿದ್ದರೂ ಪಡೆಯುವ ಬಹುಮಾನದ ಮೊತ್ತ ಸುಮಾರು ೧.೨ ಲಕ್ಷ ರೂಪಾಯಿಗಳು ಮಾತ್ರ. ನಿಕಿ ಅವರ ತಂದೆ ಪೂಣಚ್ಚ ಆಂಧ್ರಪ್ರದೇಶದ ಅನಂತಪುರದಲ್ಲಿ ನೆಲೆಸಿದ್ದು ಅಲ್ಲಿ ಟೆನ್ನಿಸ್ ಕೋಚ್ ಆಗಿದ್ದಾರೆ. ನಿಕಿ ಅವರು ಕನಕಪುರದಲ್ಲಿರುವ ರೋಹನ್ ಬೋಪಣ್ಣ ಟೆನ್ನಿಸ್ ಅಕಾಡೆಮಿ ಸಮೀಪದಲ್ಲಿ ನೆಲೆಸಿದ್ದಾರೆ.
-ಕೋವರ್ ಕೊಲ್ಲಿ ಇಂದ್ರೇಶ್