ಶನಿವಾರಸAತೆ, ಏ. ೩: ಚೈತ್ರ ಮಾಸ ಅಡಿಯಿಡುತ್ತಿರುವಂತೆ ಪ್ರಕೃತಿಯಲ್ಲಿ ಎಲ್ಲೆಡೆ ಗಾಳಿಯೊಂದಿಗೆ ಹಸಿರುಮೆಣಸಿನಕಾಯಿ ಘಾಟು ಬೆರೆತಿರುತ್ತದೆ. ಭತ್ತದ ವ್ಯವಸಾಯ ಮುಗಿಯುತ್ತಿದ್ದಂತೆಯೇ ರೈತರು ಬೇಸಿಗೆ ಬೆಳೆಯಾಗಿ ಮೆಣಸಿನಕಾಯಿ ವ್ಯವಸಾಯ ಆರಂಭಿಸುತ್ತಾರೆ. ಬರುವ ಆದಾಯ ಮಳೆಗಾಲದಲ್ಲಿ ಕುಟುಂಬ ನಿರ್ವಹಣೆಗೆ ಸಹಾಯಕವಾಗುತ್ತದೆ ಎಂಬ ಉದ್ದೇಶ ರೈತರದ್ದು.

ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಆರಂಭವಾದ ಮೆಣಸಿನಕಾಯಿ ಸಂತೆಯಲ್ಲಿ ದರ ಕಡಿಮೆಯಾಗಿದ್ದರೂ, ರೈತರು ಮುಂದೆ ಉತ್ತಮ ದರ ದೊರೆಯುವ ನಿರೀಕ್ಷೆಯಿಂದ ವ್ಯವಸಾಯದತ್ತ ಗಮನ ಹರಿಸಿದ್ದಾರೆ. ಆದರೆ, ಕಳೆದ ವರ್ಷ ರಾಜ್ಯಕ್ಕೆ ಅಪ್ಪಳಿಸಿದ ಕೋವಿಡ್ ಬಿರುಗಾಳಿಯಿಂದ ರೈತರು ತತ್ತರಿಸಿ

ಹೋಗಿದ್ದಾರೆ.

ಕೊರೊನಾ ದಾಳಿ ರೈತರ ಬದುಕಿನಲ್ಲಿ, ಹಸಿರುಮೆಣಸಿನಕಾಯಿ ಬೆಳೆಯ ಮೇಲೂ ಗಂಭೀರ ಪರಿಣಾಮ ಬೀರಿದೆ. ದರ ಗಣನೀಯವಾಗಿ ಕುಸಿದಿದೆ. ವಾರವಾರವೂ ಕುಯ್ಯುತ್ತಿರುವ ಮಾಲು ಸರಿಯಾಗಿ ರವಾನೆಯಾಗುತ್ತಿಲ್ಲ. ಗ್ರಾಮಾಂತರ ಪ್ರದೇಶದ ರೈತರು ಕಂಗಾಲಾಗಿದ್ದಾರೆ. ವ್ಯಾಪಾರಿಗಳು ಇದೀಗ ರೈತರ ಮನೆ ಬಾಗಿಲಿಗೆ, ಹೊಲ - ಗದ್ದೆಗಳಿಗೆ ಬರುತ್ತಿದ್ದಾರೆ. ತೀರಾ ಕಡಿಮೆ ದರಕ್ಕೆ ಅಂದರೆ, ಕಳೆದ ವಾರ ೧ ಕೆ.ಜಿ. ಮೆಣಸಿನಕಾಯಿ ರೂ.೧೬ಕ್ಕೆ ಖರೀದಿಸಿದರು. ಈ ವಾರ ಉಲ್ಕಾ ಮೆಣಸಿನಕಾಯಿ ಕೆ.ಜಿ.ಗೆ ರೂ. ೩೦, ಬಂಗಾರಮ್ಮ, ರಂಭಾ, ಪ್ರಿಯಾಂಕ, ರಜನಿ ಇತರ ಮೆಣಸಿನಕಾಯಿಗೆ ರೂ. ೨೬ ದರ ದೊರೆತಿದೆ. ನಿರಾಶೆಯಾದರೂ ಹಣ್ಣಾಗಿ ಕೊಳೆತು ಹೋಗುವ ಬದಲು ಸಿಕ್ಕಷ್ಟಾದರೂ ಸಿಗಲಿ ಎಂದು ಬಹಳಷ್ಟು ರೈತರು ಮಾರುತ್ತಿದ್ದಾರೆ.

ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ಈ ವರ್ಷ ೩೦೦-೪೦೦ ಎಕರೆಯಷ್ಟು ಹಸಿರು ಮೆಣಸಿನಕಾಯಿ ಬೆಳೆದಿದ್ದಾರೆ. ಇದು ೩ ತಿಂಗಳ ಬೆಳೆ ಬೆಳೆದ ತಿಂಗಳು ಸುರಿದ ಮಳೆಯಿಂದ ನೀರಿಗೆ ಕೊರತೆಯಾಗಿಲ್ಲ. ಹೊಳೆ, ಕೊಳವೆ ಬಾವಿಯಿಂದ ನೀರು ಹಾಯಿಸುತ್ತಿದ್ದಾರೆ. ಕೆಲ ರೈತರು ಹನಿ ನೀರಾವರಿ ಪದ್ಧತಿಯನ್ನೂ ಅನುಸರಿಸುತ್ತಿದ್ದಾರೆ. ಲಾಭವಾಗಲೀ, ನಷ್ಟವಾಗಲೀ ರೈತರು ವಾಡಿಕೆಯಂತೆ ಬೇಸಿಗೆ ಬೆಳೆ ಮೆಣಸಿನಕಾಯಿ ಬೆಳೆಯುತ್ತಾರೆ.

ಕೂಜಗೇರಿ ಗ್ರಾಮದ ರೈತ ದಂಪತಿ ಕೆ.ಟಿ. ಹರೀಶ್- ಮನು ೨ ಎಕರೆ ಜಮೀನಿನಲ್ಲಿ ಉಲ್ಕಾ ಮತ್ತು ಬಜ್ಜಿ ಮೆಣಸಿನಕಾಯಿ ಬೆಳೆದಿದ್ದಾರೆ. ವಾರ ವಾರ ಕೂಲಿ ಕಾರ್ಮಿಕರ ಜತೆ ನಾಲ್ಕೆöÊದು ಚೀಲ ಉಲ್ಕಾ ಮೆಣಸಿನಕಾಯಿ ಕೊಯ್ದು ಮಾರಾಟ ಮಾಡುತ್ತಿದ್ದಾರೆ. ಕೆ.ಜಿ. ಲೆಕ್ಕದಲ್ಲೇ ಮಾರುತ್ತಿದ್ದಾರೆ.