ಮಡಿಕೇರಿ, ಏ. ೪: ನಗರದ ಅಶೋಕಪುರದ ಶ್ರೀ ವೀರಭದ್ರೇಶ್ವರ ಹಾಗೂ ಪಾಷಾಣಮೂರ್ತಿ ಸನ್ನಿದ್ಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯ ಹಾಗೂ ವಾರ್ಷಿಕ ಕೋಲ ಶ್ರದ್ಧಾಭಕ್ತಿಯಿಂದ ನೆರವೇರಿತು.
ರಾಮಕೃಷ್ಣ ಭಟ್ ಅವರ ನೇತೃತ್ವದಲ್ಲಿ ದೇವರಿಗೆ ಸಾನಿದ್ಯ ಹೋಮಗಳು, ನವಕಳಶ ಅಭಿಷೇಕ, ಮಹಾಪೂಜೆ ನಡೆಸಲಾಯಿತು. ರಾತ್ರಿ ಪಾಷಾಣಮೂರ್ತಿ, ಕಲ್ಕುಡ, ಚಾಮುಂಡಿ ಮತ್ತು ರಾಹುಗುಳಿಗ ದೈವಗಳ ಕೋಲ ನಡೆಯಿತು. ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.