ಸಿದ್ದಾಪುರ, ಏ. ೪: ಇತ್ತೀಚೆಗೆ ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟ ಕೂಡುಗದ್ದೆಯ ಕಾರ್ಮಿಕ ಸುಧಾಕರ ಅವರ ನಿವಾಸಕ್ಕೆ ಶಾಸಕ ಕೆ.ಜಿ. ಬೋಪಯ್ಯ ಭೇಟಿ ನೀಡಿ ಮೃತ ಕುಟುಂಬಕ್ಕೆ ಸಾಂತ್ವನ ಹೇಳಿದರು. ಅಲ್ಲದೇ ಸರ್ಕಾರದಿಂದ ಬರುವ ಪರಿಹಾರದ ಹಣದಲ್ಲಿ ಬಾಕಿ ಇರುವ ಹಣವನ್ನು ಕೂಡಲೇ ನೀಡುವಂತೆ ಅರಣ್ಯ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ಬಿಜೆಪಿ ಪಕ್ಷದ ಪ್ರಮುಖರಾದ ಬಿ.ಕೆ. ಅನಿಲ್ ಶೆಟ್ಟಿ, ಪ್ರವೀಣ್, ರೂಪೇಶ್, ಜೋಸೆಫ್, ಇನ್ನಿತರರು ಹಾಜರಿದ್ದರು.