ನಾಪೋಕ್ಲು, ಏ. ೪: ಸಮೀಪದ ಕೈಕಾಡು ಗ್ರಾಮದಲ್ಲಿ ಭಗವತಿ ದೇವರ ಉತ್ಸವ ವಿಜೃಂಭಣೆಯಿAದ ಜರುಗಿತು. ಉತ್ಸವದ ಅಂಗವಾಗಿ ವಿಷ್ಣುಮೂರ್ತಿ ಕೋಲ ಜರುಗಿತು. ವಿಷ್ಣುಮೂರ್ತಿ ಕೋಲ ಬೆಂಕಿಯ ಮೇಲೆ ಬೀಳುವ ದೃಶ್ಯವನ್ನು ಭಕ್ತರು ಕಣ್ತುಂಬಿಕೊAಡರು. ಉತ್ಸವದ ಅಂಗವಾಗಿ ದೇವಾಲಯದಲ್ಲಿ ವಿಶೇಷ ಪೂಜೆ ಅಲಂಕಾರ ಪೂಜೆ ಜರುಗಿತು ವಿವಿಧ ಗ್ರಾಮಗಳ ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು. ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಭಕ್ತರು ದೇವಾಲಯದಲ್ಲಿ ವಿವಿಧ ಹರಕೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾದರು.