“ಬ್ರಹ್ಮಗಿರಿ ಬೆಟ್ಟದಲ್ಲಿ ‘ಕವೇರ’ನೆಂಬ ಮುನಿಯು ತನಗೆ ಸಂತತಿ ಇಲ್ಲದ ಕಾರಣ ಬ್ರಹ್ಮದೇವನನ್ನು ಕುರಿತು ತಪಸ್ಸು ಮಾಡುತ್ತಿದ್ದನು. ತಪಸ್ಸನ್ನು ಮೆಚ್ಚಿದ ಬ್ರಹ್ಮನು ಕವೇರನಿಗೆ ‘ನಿನ್ನ ಪೂರ್ವಜನ್ಮದ ಪಾಪದ ಫಲದಿಂದ ನಿನಗೆ ಪುತ್ರ ಸಂತತಿ ಇಲ್ಲ’ವೆಂದು ತಿಳಿಸಿ, ಈ ಜನ್ಮದಲ್ಲಿ ಮಕ್ಕಳಾಗದಿರುವ ಕಾರಣ ತನ್ನ ಮಾನಸ ಪುತ್ರಿಯಾದ ‘ಲೋಪಾಮುದ್ರೆ’ಯನ್ನು ದತ್ತು ಪುತ್ರಿಯಾಗಿ ಕವೇರನಿಗೆ ನೀಡಿದನು.

ಉತ್ತರ ಭಾರತದಿಂದ ದಕ್ಷಿಣಕ್ಕೆ ಬಂದ ಅಗಸ್ತö್ಯ ಮುನಿಗಳು ತಪೋವನವಾದ ಬ್ರಹ್ಮಗಿರಿಯಲ್ಲಿ ಕವೇರ ಮುನಿಗಳಿಂದ ಆತಿಥ್ಯ ಸ್ವೀಕರಿಸಿ, ದಿವ್ಯಕಾಂತಿಯಿAದಲೂ, ತೇಜಸ್ಸಿನಿಂದಲೂ ಕೂಡಿರುವ ಕಾವೇರಿಯನ್ನು ಕಂಡು ವಿವಾಹವಾಗುವ ತಮ್ಮ ಬಯಕೆಯನ್ನು ವ್ಯಕ್ತಪಡಿಸುತ್ತಾನೆ. ಇದಕ್ಕೆ ಒಪ್ಪಿದ ಕಾವೇರಿಯು “ತನ್ನನ್ನು ಯಾವ ಕಾಲಕ್ಕೂ ಉಪೇಕ್ಷಿಸಿ ಹೊರಟು ಹೋಗಬಾರದು, ಒಂದುವೇಳೆ ಹೋದರೆ ನಾನು ಆ ಕ್ಷಣದಿಂದ ನದಿಯಾಗಿ ಹರಿದು ಸಮುದ್ರ ಸೇರುತ್ತೇನೆ” ಎಂದು ಅಗಸ್ತö್ಯ ಮುನಿಗಳಿಂದ ವಚನ ಪಡೆಯುತ್ತಾಳೆ.

ಅಗಸ್ತö್ಯ ಕಾವೇರಿಯ ವಿವಾಹದ ಗೃಹಸ್ಥ ಜೀವನದ ಕೆಲವು ದಿನಗಳ ಆನಂತರ ಅಗಸ್ತö್ಯರು ಬ್ರಹ್ಮಗಿರಿಯ ಉತ್ತರದಲ್ಲಿ ಉದ್ಭವಿಸುವ ಕನ್ನಿಕಾ ನದಿಯಲ್ಲಿ ಸ್ನಾನ ಮಾಡಿ ತೆರಳುವ ಮುನ್ನ ಶಿಷ್ಯರಿಗೆಲ್ಲಾ ಜಾಗೃತೆಯಿಂದ ಕಾಯ್ದುಕೊಳ್ಳುವಂತೆ ಹೇಳಿ ಹೊರಡುತ್ತಾರೆ. ಲೋಕಪಾವನಿಯಾಗಿ ಹರಿದು ಲೋಕ ಉದ್ಧಾರ ಮಾಡಲು ಭೂಮಿಗೆ ಬಂದ ಕಾವೇರಿ ಇದೇ ಶುಭ ಸಂದರ್ಭವನ್ನು ನಿರೀಕ್ಷಿಸುತ್ತಿದ್ದರಿಂದ ಹಾಗೂ ಪತಿಯು ವಿವಾಹದ ಮುನ್ನ ನೀಡಿದ್ದ ವಚನವನ್ನು ಉಲ್ಲಂಘಿಸಿದ್ದರಿAದ, ಬ್ರಾಹ್ಮಿ ಮುಹೂರ್ತದಲ್ಲಿ ಕಮಂಡಲದಿAದ ಹೊರಬಂದ ಕಾವೇರಿ ಬ್ರಹ್ಮಕುಂಡಿಕೆಯಲ್ಲಿ ಜಲರೂಪ ತಾಳಿ ನದಿಯಾಗಿ ಹರಿದು ಹೋಗುತ್ತಾಳೆ.

“ಕಾವೇರಿಯನ್ನು ತಡೆಯಲು ಶಿಷ್ಯರು ಪ್ರಯತ್ನಪಟ್ಟರೂ ನಿಲ್ಲದೆ ಗುಪ್ತಗಾಮಿನಿಯಾಗಿ ಹರಿಯುತ್ತಾಳೆ. ಸ್ನಾನಕ್ಕೆಂದು ಹೊರಟು ಹಿಂದಿರುಗಿದ ಋಷಿಗಳು ವಿಷಯ ತಿಳಿದು ಕಾವೇರಿಯನ್ನು ಹಿಂದಿರುಗಲು ಕೇಳಿಕೊಂಡಾಗ ‘‘ನಾನು ಲೋಕ ಕಲ್ಯಾಣಕ್ಕಾಗಿ ನದಿರೂಪ ತಳೆದು ಹೊರಟಿರುವೆ’’ನೆಂದು ಹೇಳುತ್ತಾಳೆ. ಅಗಸ್ತö್ಯರು ತಮ್ಮ ಶಿಷ್ಯರೊಂದಿಗೆ ಕಾವೇರಿ ಹರಿಯುವುದನ್ನು ಹಿಂಬಾಲಿಸುತ್ತಾರೆ. ನಾಗಲೋಕದವರು ಕಾವೇರಿಯನ್ನು ಸುತ್ತಿ ನದಿಯಾಗಿ ಹರಿದು ಹೋಗುವುದನ್ನು ತಡೆಯುತ್ತಾರೆ. ಅವಳನ್ನು ಸುತ್ತಿ ಹರಿಯುವ ಕ್ಷೇತ್ರವನ್ನು ‘ನಾಗತೀರ್ಥ’ ಎಂದು ಕರೆಯುತ್ತಾರೆ”

ಭಾಗಮಂಡಲದಲ್ಲಿ ಪೂರ್ವಕ್ಕೆ ಹರಿಯುವ ಮತ್ತೊಂದು ನದಿ ಕನ್ನಿಕ ಮತ್ತು ಅಂತರ್ಗಾಮಿನಿ ಸುಜ್ಯೋತಿಯೊಡನೆ, ಕಾವೇರಿ ಸೇರಿ ತ್ರಿವೇಣಿ ಸಂಗಮವನ್ನು ನಿರ್ಮಿಸುತ್ತಾಳೆ. ಅಲ್ಲಿಂದ ಪೂರ್ವಾಭಿಮುಖವಾಗಿ ಹರಿದು ‘ಹರಿಶ್ಚಂದ್ರ’, ‘ಪಾಲೂರು’ಗಳನ್ನು ದಾಟಿ ‘ಬಲಮುರಿ’ಯಲ್ಲಿ ಹರಿಯುವಾಗ ಕೊಡವರು ಅಲ್ಲಿರುತ್ತಾರೆ. ನದಿಯ ನೀರು ರಭಸದಿಂದ ಹರಿಯುವಾಗ ಅಲ್ಲಿ ನೆರೆದಿದ್ದ ಕೊಡವ ಸ್ತಿçÃಯರ ಸೀರೆ ನೆರಿಗೆಗಳು ಹಿಂದಕ್ಕೆ ಸರಿಯುತ್ತವೆ.

ಶ್ರೀಮಾತೆ ಕಾವೇರಿಯು ಅಲ್ಲಿದ್ದವರನ್ನು ಹರಸಿ ತಾನು ನದಿಯಾಗಿ ಹರಿದುದರ ಸ್ಮರಣಾರ್ಥ ಕೊಡವ ಮಹಿಳೆಯರಿಗೆ ಸೀರೆ ನೆರಿಗೆಗಳನ್ನು ಅದೇ ರೀತಿ ಹಿಂಭಾಗದಲ್ಲಿಯೇ ಇಳಿಬಿಟ್ಟು ಸದಾ ಧರಿಸುವಂತಾಗಲಿ ಎಂದು ಹರಸಿ, ಅಲ್ಲಿಗೆ ಬಂದ ದೇವಕಾಂತ ಮಹಾರಾಜ ಮತ್ತು ಪ್ರಜೆಗಳಿಗೆ ದಿವ್ಯದರ್ಶನ ನೀಡಿದ ಕಾವೇರಿಯನ್ನು ಪೂಜಿಸಿ ‘ನನ್ನ ವಂಶ ಬೆಳೆಯಬೇಕು, ಸಕಲ ಪ್ರಜೆಗಳು ನನ್ನ ರಾಜ್ಯದಲ್ಲಿ ಸುಖ ಶಾಂತಿಯಿAದ ಇರಬೇಕು’ ಎಂದು ಕಾವೇರಿಯನ್ನು ಕೇಳಿಕೊಂಡರು. ಆಗ ಕಾವೇರಿಯು ರಾಜನಿಗೆ ವರವನ್ನು ನೀಡಿ ಮುಂದೆ ಸಾಗುತ್ತಾಳೆ.

ನಿಶ್ಶಬ್ಧಗೊಂಡ ಅಶ್ವತ್ಥ : ತಲಕಾವೇರಿಯಿಂದ ಕಾವೇರಿಯನ್ನು ಹಿಂಬಾಲಿಸಿದ ಅಗಸ್ತö್ಯರು ಭಾಗಮಂಡಲ, ಪಾಲೂರು, ಹರಿಶ್ಚಂದ್ರ, ಬಲಮುರಿಗಳಲ್ಲಿ ಶಿವಲಿಂಗಗಳನ್ನು ಪ್ರತಿಷ್ಠಾಪನೆ ಮಾಡುತ್ತಾ ಹಿಂಬಾಲಿಸುತ್ತಾರೆ. ಅಗಸ್ತö್ಯರ ಸಮ್ಮುಖದಲ್ಲಿ ಮುನಿಗಳೆಲ್ಲ ಕಾವೇರಿಯನ್ನು ತಡೆಯಲು ‘ಗುಹ್ಯ’ದಲ್ಲಿರುವ ದೊಡ್ಡ ಅಶ್ವತ್ಥ ವೃಕ್ಷದ ಕೆಳಗೆ ಸಮಾಲೋಚಿಸುವಾಗ ಗಾಳಿಯ ರಭಸದಿಂದ ಭೋರ್ಗರೆಯುವ ವೃಕ್ಷವು ಅವರ ಸಮಾಲೋಚನೆಗೆ ಅಡಚಣೆ ಮಾಡುತ್ತಿದ್ದುದರಿಂದ ಅಗಸ್ತö್ಯ ಮುನಿಯು ವೃಕ್ಷದ ಕಡೆ ಮುಖ ಮಾಡಿ, ‘ನಿಶ್ಶಬ್ಧ ! ಎಂದು ಕೂಗುತ್ತಾರೆ. ಅಂದಿನಿAದ ಈ ಕ್ಷೇತ್ರವು ನಿಶ್ಶಬ್ಧ ವಾಗಿರುತ್ತದೆ ಎಂಬ ಪ್ರತೀತಿ ಇದೆ.

ಕಾವೇರಿ ತನ್ನ ಮೂಲಸ್ಥಾನ ದಿಂದ ಅಂತ್ಯದವರೆಗೆ ಸುಮಾರು ಎಂಟುನೂರ ಐದು (೮೦೫) ಕಿಲೋಮೀಟರ್ ಉದ್ದಗಲಕ್ಕೂ ವಿವಿಧ ಪಾತ್ರಗಳಲ್ಲಿ ಹರಿಯುತ್ತಾ ಕೋಟ್ಯಂತರ ಜೀವರಾಶಿಗಳ ಜೀವಧಾರೆಯಾಗಿ ತನ್ನದೇ ಆದ ವೈಭವಯುತ ಚರಿತ್ರೆಯನ್ನು ಜಗತ್ತಿಗೆ ಸಾರಿದ್ದಾಳೆ.

“ಕಾವೇರಿಯ ಬಗ್ಗೆ ಉಲ್ಲೇಖವಿರುವ ಮೊದಲನೇ ಗ್ರಂಥ ‘ಕವಿರಾಜಮಾರ್ಗ’. ಕಾವೇರಿ ಉದ್ಭವಿಸಿದ ಕೊಡಗಿನಲ್ಲಿ ವೈಭವದಿಂದ ಆಡಳಿತ ಮಾಡಿದ ಹಾಲೇರಿ ಒಡೆಯರ ವಂಶದ ಚರಿತ್ರೆ ಕ್ರಿ.ಶ. ೧೬೦೬ ರಿಂದ ಪ್ರಾರಂಭವಾಗಿ ೧೮೩೪ ರವರೆಗೆ ಮುಂದುವರೆಯುತ್ತದೆ. ಈ ವಂಶದ ದೊಡ್ಡವೀರರಾಜೇಂದ್ರನು ಕ್ರಿ.ಶ. ೧೭೮೧ರಿಂದ ೧೮೦೯ರವರೆಗೆ ಆಡಳಿತ ನಡೆಸಿದ್ದಾರೆ”. (ಕೊಡಗು ಜಿಲ್ಲಾ ಗ್ಯಾಸೆಟಿಯರ್, ೧೯೯೨ ಸೂರ್ಯನಾಥ್ ಯು. ಕಾಮತ್)

ಕಾವೇರಿ ಮಹಾತ್ಮೆ ಕೃತಿಯನ್ನು ಸಂಸ್ಕೃತದಿAದ ಕನ್ನಡಕ್ಕೆ ತಂದವರು ಮೈಸೂರು ಒಡೆಯರ ಕಾಲದ ಕವಿಗಳು. ೧೯ನೇ ಶತಮಾನದ ಆದಿಯಲ್ಲಿ ಸಿ. ಶಿವಶಂಕರಶಾಸ್ತಿç, ಚ. ರಾಮಚಂದ್ರಶಾಸ್ತಿç ಎಂಬುವವರು ‘ಕಾವೇರಿ ಮಹಾತ್ಮೆöÊ’ಯನ್ನು ನರಸಿಂಹಾಚಾರ್ಯರ ‘ಕಾವೇರಿ ಪುರಾಣ’, ನಡಿಕೇರಿಯಂಡ ಚಿಣ್ಣಪ್ಪನವರ ‘ಪಟ್ಟೋಲೆ ಪಳಮೆ’, ಭಾಗಮಂಡಲದ ಯದುರ್ಕಳ ಶಂಕರನಾರಾಯಣ ಭಟ್ ಅವರ ‘ಶ್ರೀ ಕಾವೇರಿ ವೈಭವ’, ವೈ. ಸಿ. ಭಾನುಮತಿಯವರು ಸಂಪಾದಿಸಿರುವ ‘ಸಹ್ಯಾದ್ರಿ ಖಂಡ’ದಲ್ಲಿಯೂ ಕಾವೇರಿಯನ್ನು ಕುರಿತ ಪೌರಾಣಿಕ ಕಥೆ ದೀರ್ಘವಾಗಿ ಬಂದಿದೆ. ಎಂ.ಪಿ. ಮಂಜಪ್ಪಶೆಟ್ಟಿ ಮಸಗಲಿ ಅವರು ಸಂಪಾದಿಸಿರುವ ‘ಕಾವೇರಿ ಮಹಾತ್ಮೆöÊ’ ಎಂಬ ಕಾವ್ಯದಲ್ಲಿ ಪ್ರಮುಖವಾಗಿ ಕಾವೇರಿಯ ಮಹತ್ವವನ್ನು ಉಲ್ಲೇಖಿಸಿರು ವುದು ಕಂಡು ಬರುತ್ತದೆ. ವಿ.ಎಸ್. ರಾಮಕೃಷ್ಣ ಅವರು ‘ಕಾವೇರಿ ಮಹಾತ್ಮೆöÊ’ ಎಂಬ ಕೊಡವ ಭಾಷಾ ಕೃತಿಯನ್ನು ಭಾಮಿನಿ ಷಟ್ಪದಿಯಲ್ಲಿ ರಚಿಸಿದ್ದಾರೆ.

ಕಲಿ ಕಲ್ಮಶ ನಾಶಿನಿ : ಕೃಷಿಗೆ ಅನುಕೂಲವಾಗಲು ಕಾವೇರಿ ನದಿಗೆ ಹಾಕಿರುವ ಅಣೆಕಟ್ಟುಗಳು ಇಂದಿಗೂ ಸಾಕ್ಷಿಯಾಗಿವೆ. ಶಿವನ ಸಮುದ್ರದಲ್ಲಿ ಕಾವೇರಿಯ ಜಲಪಾತದಿಂದ ಉತ್ಪನ್ನವಾಗುವ ವಿದ್ಯುತ್ ಬೃಹತ್ ನಗರಗಳನ್ನು ಬೆಳಗಿಸಿದೆ. ಈ ಎಲ್ಲ ಕಾರಣಗಳಿಗಾಗಿಯೇ ಈ ನದಿಗೆ “ಕಲಿ ಕಲ್ಮಶ ನಾಶಿನಿ” ಎಂಬ ಬಿರುದು ಬಂದಿರಬಹುದು. ಉತ್ತರದ ಜನರಿಗೆ ಗಂಗಾನದಿಯು ಪವಿತ್ರವಾಗಿರುವಂತೆ ದಕ್ಷಿಣ ಭಾಗದವರಿಗೆ ಕಾವೇರಿ ನದಿ ‘ದಕ್ಷಿಣ ಗಂಗೆ’ಯಾಗಿದೆ.

ಶ್ರೀ ಕಾವೇರಿಯು ಲೌಕಿಕ ದೃಷ್ಟಿಯಿಂದ ಸರ್ವೋಪಕಾರಿಣಿ, ದಾನಶೀಲೆ. ಅಧ್ಯಾತ್ಮಿಕ ದೃಷ್ಟಿಯಿಂದ ಭವತಾರಿಣಿ. ಕಾವೇರಿಯನ್ನು ಬಹು ಹಿಂದಿನ ಕಾಲದಿಂದಲೂ ಜನರು ಆರಾಧಿಸುತ್ತಿದ್ದಾರೆ. ಕಾರಣ ಕಾವೇರಿಯು ಕೊಡವರ ಕುಲದೇವತೆಯಾಗಿದ್ದು, ಕೊಡವರ ಬದುಕಿನಲ್ಲಿ ಪ್ರಭಾವ ಬೀರಿದ್ದಾಳೆ. ಹುಟ್ಟಿನಿಂದ ಸಾವಿನ ತನಕ ಇವರು ನಡೆಸುವ ವಿವಿಧ ಕ್ರಿಯೆಗಳ ಸಂಬAಧವಾಗಿ ಪೂಜಿಸುತ್ತಾರೆ. ಮುಖ್ಯವಾಗಿ ಮರಣೋತ್ತರ ಕ್ರಿಯೆಯಲ್ಲಿ ಕಾವೇರಿಯ ಪುಣ್ಯ ಜಲದಲ್ಲಿ ಸ್ನಾನ ಮಾಡಿ ಪಿತೃಗಳಿಗೆ ತೃಪ್ತಿಯನ್ನುಂಟು ಮಾಡುವ ಧಾರ್ಮಿಕ ವಿಧಿಕ್ರಿಯೆ ಗಳಿವೆ.

ಮಗುವು ಹುಟ್ಟಿ ಬೆಳೆದಂತೆ ಅದಕ್ಕೆ ಮೊದಲು ತಲೆಕೂದಲನ್ನು ಮುಡಿ ಕೊಡಲು, ಮಗುವಿನ ನಾಮಕರಣ ಮಾಡಲು, ವಿದ್ಯಾಭ್ಯಾಸ, ಉದ್ಯೋಗ ಪ್ರಾಪ್ತಿ, ವಿವಾಹ ಮುಂತಾದ ಕಾರ್ಯಗಳಲ್ಲೂ ಶ್ರೀ ಕಾವೇರಿ ಮಾತೆಯನ್ನು ಪ್ರಾರ್ಥಿಸುವುದು ರೂಢಿ. ಕೊಡವರಲ್ಲಿ ವಿವಾಹವಾದ ನಂತರ ಮದು ಮಕ್ಕಳು ಒಂದು ವರ್ಷದ ಒಳಗೆ ಕಾವೇರಿ ಕ್ಷೇತ್ರದ ತ್ರಿವೇಣಿ ಸಂಗಮ ಮತ್ತು ತಲಕಾವೇರಿಯ ಕುಂಡಿಕೆಗಳಲ್ಲಿ ತೀರ್ಥಸ್ನಾನ ಮಾಡಲೇಬೇಕೆಂಬ ನಿರ್ಬಂಧ ಮತ್ತು ಆಚರಣೆ ಇದೆ. ಹಾಗೆಯೇ ಕಾವೇರಿ ತೀರ್ಥೋದ್ಭವದ ಸಂದರ್ಭದಲ್ಲಿ ಪ್ರತಿ ವರ್ಷ ತೀರ್ಥಸ್ನಾನ ಮಾಡುವುದು, ಪವಿತ್ರ ಧಾರ್ಮಿಕ ಕಾರ್ಯವಾಗಿದೆ. ಕಾವೇರಿ ಜಾತ್ರೆಗೆ ಹೋಗಲು ತಪ್ಪಿದರೆ ತುಲಾ ಮಾಸದಲ್ಲಿ ಬಂದು ತೀರ್ಥಸ್ನಾನ ಮಾಡುವುದು, ಪವಿತ್ರ ಧಾರ್ಮಿಕ ಕಾರ್ಯವಾಗಿದೆ. ಕಾವೇರಿ ಜಾತ್ರೆಗೆ ಹೋಗಲು ತಪ್ಪಿದರೆ ತುಲಾ ಮಾಸದಲ್ಲಿ ಬಂದು ತೀರ್ಥಸ್ನಾನ ಮಾಡುತ್ತಾರೆ.

ಕೊಡವರು ಮರಣೋತ್ತರ ಕ್ರಿಯೆಗಳಲ್ಲಿ ಕಾವೇರಿ ಮಾತೆಗೆ ವಿಶೇಷ ಸ್ಥಾನ ಕೊಡುತ್ತಾರೆ. ತಮ್ಮವರು ಮೃತರಾದಾಗ ಉತ್ತರ ಕ್ರಿಯೆ ಮಾಡುವಾಗ, ಕಾವೇರಿ ಕ್ಷೇತ್ರಕ್ಕೆ ಬಂದು ಚಿತಾಭಸ್ಮವನ್ನು ಕಾವೇರಿ ನದಿಯಲ್ಲಿ ವಿಸರ್ಜಿಸಿ ಪಿಂಡತರ್ಪಣಗಳನ್ನು ಅರ್ಪಿಸುತ್ತಾರೆ. ನಂತರ ಭಾಗಮಂಡಲದಲ್ಲಿ ವೈಕುಂಠ ಸಮಾರಾಧನೆ ಮಾಡುತ್ತಾರೆ. ನದಿರೂಪ ತಳೆದ ಆದಿಸ್ಥಳವಾದ ತಲಕಾವೇರಿ ಕ್ಷೇತ್ರದಲ್ಲಿ ತುಲಾಸಂಕ್ರಮಣ ಜಾತ್ರೆಯಲ್ಲಿ ಹಲವಾರು ಭಕ್ತರು ತೀರ್ಥ ಸ್ನಾನ ಮಾಡಿ ಸಂತೃಪ್ತರಾಗುತ್ತಾರೆ. ಕಾವೇರಿ ಮಾತೆ ಸುಮಂಗಲೆಯರಿಗೆ ಸ್ಫೂರ್ತಿ ನೀಡುವ ಮಂಗಳಗೌರಿಯಾಗಿದ್ದಾಳೆ. ಮುತ್ತೆöÊದೆ ಕಾವೇರಿಗೆ ಮುತ್ತೆöÊದೆ ಭಾಗ್ಯ ಕರುಣಿಸಲು ಕುಂಕುಮಾರ್ಚನೆ ಮಾಡಿಸುತ್ತಾರೆ. ಕಾವೇರಿಯ ಪೂಜೆಗೆ ಬಳೆ, ಬಿಚ್ಚೋಲೆ, ಕರಿಮಣಿಯನ್ನು ಇಟ್ಟು ವಿಶೇಷ ಪೂಜೆ ಮಾಡಲಾಗುತ್ತದೆ. ಸಂತಾನಪ್ರಾಪ್ತಿಗಾಗಿ ಹರಕೆ ಹೊತ್ತವರು ತೀರ್ಥಸ್ನಾನ ಮಾಡಿ, ತಾವು ಹರಕೆ ಮಾಡಿಕೊಂಡ ಲೋಹದ ತೊಟ್ಟಿಲನ್ನು ಕೊಳದಲ್ಲಿ ಹಾಕುವ ಮೂಲಕ ಹರಕೆ ತೀರಿಸುತ್ತಾರೆ. ರೋಗಬಾಧೆ ನಿವಾರಣೆಗಾಗಿ ದೇಹದ ಅಂಗಾAಗಗಳ ರೂಪದಲ್ಲಿರುವ ಲೋಹದ ಪ್ರತಿರೂಪವನ್ನು ಕೊಳಕ್ಕೆ ಹಾಕುತ್ತಾರೆ. ತಲಕಾವೇರಿಯಲ್ಲಿ ಸ್ನಾನ ಮಾಡಿ ಅರಿಸಿನ ಕುಂಕುಮ, ಪುಷ್ಪಗಳನ್ನು ಅರ್ಪಿಸಿದರೆ ಭಕ್ತಿಯೋಗದ ಸಾಧನೆಯಾಗುತ್ತದೆ. ಕಾವೇರಿ ತೀರದಲ್ಲಿ ಅಧ್ಯಾತ್ಮಿಕ ಸಾಧನೆ ಮಾಡಿದರೆ ಸಿದ್ಧಿ ಲಭಿಸುತ್ತದೆ ಮುಂತಾದ ನಂಬಿಕೆ ಇವರಲ್ಲಿದೆ. ಕಾವೇರಿ ತೀರದಲ್ಲಿ ಒಂದು ಕ್ಷಣ ತಂಗಿದರೆ ಪಾಪಗಳು ಪರಿಹಾರವಾಗುವುದೆಂಬ ನಂಬಿಕೆಯಿದೆ. ಕಾವೇರಿ ನದಿ ತೀರದಲ್ಲಿ ಉಪನಯನ, ವಿವಾಹ ಮೊದಲಾದ ಸಂಸ್ಕಾರ ಕಾರ್ಯಗಳು ಆರಾಧನಾ ಕಾರ್ಯಗಳು ನಡೆಯುತ್ತಿರುತ್ತವೆ. ಕಾವೇರಿ ತೀರ್ಥೋದ್ಭವ ಸಂದರ್ಭದಲ್ಲಿ ನೆರೆದಂತಹ ಭಕ್ತರು ಕಾವೇರಿ ತೀರ್ಥಕೊಳದಲ್ಲಿ ತೀರ್ಥಸ್ನಾನ ಮಾಡಿ, ದೇವರಿಗೆ ಹಣ್ಣುಕಾಯಿ ಮಾಡಿಸಿ, ಬ್ರಹ್ಮಕುಂಡಿಕೆಯಿAದ ಪವಿತ್ರವಾದ ಕಾವೇರಿ ಜಲವನ್ನು ತೆಗೆದುಕೊಂಡು ಹೋಗುತ್ತಾರೆ. ಈ ತೀರ್ಥಕ್ಕೆ ಗಂಗಾಜಲದಷ್ಟೆ ಮಹತ್ವ ನೀಡಿ ಭಕ್ತಿಯಿಂದ ಪೂಜಿಸುತ್ತಾರೆ. ತೀರ್ಥವನ್ನು ಕುಡಿದ ನಂತರ ಅಡುಗೆಗೂ ಪ್ರೋಕ್ಷಿಸಿ ದೇವರಿಗೆ ನೈವೇದ್ಯವನ್ನಿಡುತ್ತಾರೆ.

ಗಂಗಾ, ಕಾವೇರಿ ಸಮ್ಮಿಲನದ ತೀರ್ಥವಾದ ಇದನ್ನು ಮರಣದ ಸಮಯದಲ್ಲಿ ಕುಡಿಸುತ್ತಾರೆ. ಕಾವೇರಿಯ ಪುಣ್ಯ ತೀರ್ಥವು ಸಮಸ್ತ ಪಾಪಗಳನ್ನು ನಿವಾರಣೆ ಮಾಡುತ್ತದೆಂದು ಸತ್ತ ಮೇಲೆ ಸ್ವರ್ಗ ಪ್ರಾಪ್ತಿಯಾಗುತ್ತ ದೆಂಬ ನಂಬಿಕೆ ಇದೆ. ಕೊಡಗಿನ ಜನರು ಕಾವೇರಿ ತೀರ್ಥವನ್ನು ವಿವಾಹ ಕರ್ಮಕಾರ್ಯ, ಹರಕೆ, ತೀರ್ಥಸ್ನಾನ ಮುಂತಾದ ಕಾರ್ಯದಲ್ಲಿ ಬಳಸುತ್ತಾರೆ. ಹೀಗೆ ದಿವ್ಯಾನುಗ್ರಹದ ಸಂಕೇತದ ಮೂಲಕ ನಿತ್ಯ ವೈಭವದಿಂದ ಕಾವೇರಿಯ ಹೆಸರು ಚಿರಸ್ಥಾಯಿಯಾಗಿದೆ.

ಕಾವೇರಿ ಜಾತ್ರೆ ಮತ್ತು ವಿಶೇಷ ಉತ್ಸವಗಳು

ಕಾವೇರಿ ಜಾತ್ರೆ ಪ್ರತಿ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಸೂರ್ಯನು ತುಲಾ ರಾಶಿಗೆ ಪ್ರವೇಶಿಸುವ ಪುಣ್ಯ ಮುಹೂರ್ತವೇ ಕಾವೇರಿ ಜಾತ್ರೆ. ಇದನ್ನು ತುಲಾ ಸಂಕ್ರಾAತಿ, ತುಲಾ ಸಂಕ್ರಮಣ, ಕಾವೇರಿ ಸಂಕ್ರಮಣ ಎಂದೂ ಕರೆಯುತ್ತಾರೆ. ಕಾವೇರಿ ಜಾತ್ರೆಗೆ ಸಹಸ್ರಾರು ಭಕ್ತರು ಆಗಮಿಸಿ ಪುಣ್ಯ ತೀರ್ಥದಲ್ಲಿ ಸ್ನಾನ ಮಾಡುತ್ತಾರೆ. ತಮಿಳುನಾಡಿನ ಜನರಿಗೆ ಕಾವೇರಿಯು ಬಂಗಾರ ಲಕ್ಷಿö್ಮಯಾಗಿರುವುದರಿಂದ ಅಲ್ಲಿಯ ಭಕ್ತಾದಿಗಳು ಜಾತ್ರೆಗೆ ಹೆಚ್ಚು ಬರುತ್ತಾರೆ. ಭಾಗಮಂಡಲ-ತಲಕಾವೇರಿ ಎರಡು ಸ್ಥಳಗಳಲ್ಲಿ ನಡೆಯುವ ಧಾರ್ಮಿಕ ಆಚರಣೆಯ ವಾರ್ಷಿಕೋತ್ಸವ ‘ಕಾವೇರಿ ಜಾತ್ರೆ’ ಎನಿಸಿದೆ. ತುಲಾಸಂಕ್ರಮಣದAದು ಜರುಗುವ ಜಾತ್ರೆಯನ್ನು “ದೊಡ್ಡ ಸಂಕ್ರಮಣ ಜಾತ್ರೆ”, ‘ದೊಡ್ಡ ಜಾತ್ರೆ’ ಎಂದೂ ‘ವೃಶ್ಚಿಕ ಸಂಕ್ರಮಣ’ದAದು ನಡೆಯುವ ಜಾತ್ರೆಯನ್ನು ‘ಕಿರು ಸಂಕ್ರಮಣ ಜಾತ್ರೆ’, ‘ಕಿರುಜಾತ್ರೆ’ ಎಂದೂ ಕರೆಯುತ್ತಾರೆ. ಭಾಗಮಂಡಲದಲ್ಲಿ ಇರುವ ತ್ರಿವೇಣಿ ಸಂಗಮ-ಪ್ರೇತಾರಣ್ಯ, ತಲಕಾವೇರಿ ಯಲ್ಲಿನ ಬ್ರಹ್ಮಕುಂಡಿಕೆ ಇವುಗಳಲ್ಲಿ ಪರಸ್ಪರ ಧಾರ್ಮಿಕವಾದ ಸಂಬAಧವಿದೆ. ತ್ರಿವೇಣಿ ಸಂಗಮದಲ್ಲಿ ಸ್ನಾನ, ಪ್ರೇತಾರಣ್ಯದಲ್ಲಿ ಪಿತೃಗಳಿಗೆ ಶ್ರಾದ್ಧ ತರ್ಪಣಾದಿ ಕ್ರಿಯೆ ನಡೆಸುವಿಕೆ, ನಂತರ ತಲಕಾವೇರಿಯಲ್ಲಿ ತೀರ್ಥಸ್ನಾನ ಮುಂತಾದ ಕರ್ಮ ಗಳನ್ನು ಭಕ್ತಾದಿಗಳು ಅನುಸರಿಸುತ್ತಾರೆ. (ಮುಂದುವರಿಯುವುದು)

-ಡಾ|| ಕಾವೇರಿ ಪ್ರಕಾಶ್, ನಾಪೋಕ್ಲು.