ಸೋಮವಾರಪೇಟೆ, ಏ. ೩: ಇಲ್ಲಿನ ಕುರುಹಿನ ಶೆಟ್ಟಿ ಸಮಾಜದ ಸೀತಾ ಬಳಗದಿಂದ ಸ್ಥಳೀಯ ರಾಮಮಂದಿರದಲ್ಲಿ ವಾರ್ಷಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು.

ದೇವಾಲಯದ ಅರ್ಚಕ ಮೋಹನ್‌ಮೂರ್ತಿ ಶಾಸ್ತಿç ಅವರ ಪೌರೋಹಿತ್ವದಲ್ಲಿ ಸತ್ಯನಾರಾಯಣ ಸತ್ಯನಾರಾಯಣ ಪೂಜೆ ನಡೆಯಿತು.

ದೇವಾಲಯದ ಅರ್ಚಕ ಮೋಹನ್‌ಮೂರ್ತಿ ಶಾಸ್ತಿç ಅವರ ಪೌರೋಹಿತ್ವದಲ್ಲಿ ಸತ್ಯನಾರಾಯಣ ಪೂಜೆ ಸೇರಿದಂತೆ ಇನ್ನಿತರ ಧಾರ್ಮಿಕ ಕೈಂಕರ್ಯಗಳು ನೆರವೇರಿದವು. ಇಸ್ಕಾನ್ ದೇವಾಲಯ ಸಮಿತಿಯವರಿಂದ ಧಾರ್ಮಿಕ ಪ್ರವಚನ ನಡೆಯಿತು. ಪೂಜೋತ್ಸವದ ನಂತರ ಮಹಾಮಂಗಳಾರತಿ, ಅನ್ನಸಂತರ್ಪಣೆ ನೆರವೇರಿತು.

ಕಾರ್ಯಕ್ರಮದಲ್ಲಿ ಸೀತಾ ಬಳಗದ ಅಧ್ಯಕ್ಷೆ ಲೀಲಾ ನಿರ್ವಾಣಿ, ಉಪಾಧ್ಯಕ್ಷೆ ಪಂಕಜ ಪ್ರಭಾಕರ್, ಕಾರ್ಯದರ್ಶಿ ಸುನಯನ ಸಚಿನ್ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು, ಸಾರ್ವಜನಿಕರು ಭಾಗವಹಿಸಿದ್ದರು.