ಕಣಿವೆ, ಏ. ೩ : ಇತ್ತೀಚಿನ ವರ್ಷಗಳಲ್ಲಿ ಟ್ಯಾಟು ಅಥವಾ ಹಚ್ಚೆಗಳು ಹುಡುಗರ ಪಾಲಿಗೆ ಫ್ಯಾಷನ್ ಆಗಿಬಿಟ್ಟಿದೆ. ಹಾಗಾಗಿ ಯಾರೋ ಒಬ್ಬ ಗೆಳೆಯ ತನ್ನ ಕೈ, ಕುತ್ತಿಗೆ ಅಥವಾ ಎದೆಯ ಭಾಗದಲ್ಲಿ ಹಚ್ಚೆಗಳನ್ನು ಹಾಕಿಸಿಕೊಂಡರೆ ಸಾಕು, ತಾವು ಕೂಡ ಮುಗಿಬಿದ್ದು ಆ ಹಚ್ಚೆಗಳನ್ನು ಎಲ್ಲೆಂದರಲ್ಲಿ ಹಾಕಿಸಿಕೊಳ್ಳಲು ಮುಂದಾಗುತ್ತಾರೆ. ಹೀಗೆ ಹಾಕಿಸಿಕೊಂಡಿದ್ದ ಹಚ್ಚೆಯಿಂದಾಗಿ ಕುಶಾಲನಗರದಲ್ಲಿ ಕಣಿವೆ, ಏ. ೩ : ಇತ್ತೀಚಿನ ವರ್ಷಗಳಲ್ಲಿ ಟ್ಯಾಟು ಅಥವಾ ಹಚ್ಚೆಗಳು ಹುಡುಗರ ಪಾಲಿಗೆ ಫ್ಯಾಷನ್ ಆಗಿಬಿಟ್ಟಿದೆ. ಹಾಗಾಗಿ ಯಾರೋ ಒಬ್ಬ ಗೆಳೆಯ ತನ್ನ ಕೈ, ಕುತ್ತಿಗೆ ಅಥವಾ ಎದೆಯ ಭಾಗದಲ್ಲಿ ಹಚ್ಚೆಗಳನ್ನು ಹಾಕಿಸಿಕೊಂಡರೆ ಸಾಕು, ತಾವು ಕೂಡ ಮುಗಿಬಿದ್ದು ಆ ಹಚ್ಚೆಗಳನ್ನು ಎಲ್ಲೆಂದರಲ್ಲಿ ಹಾಕಿಸಿಕೊಳ್ಳಲು ಮುಂದಾಗುತ್ತಾರೆ. ಹೀಗೆ ಹಾಕಿಸಿಕೊಂಡಿದ್ದ ಹಚ್ಚೆಯಿಂದಾಗಿ ಕುಶಾಲನಗರದಲ್ಲಿ ಮತ್ತೋರ್ವ ಯುವಕ ಬಟ್ಟೆ ಇಸ್ತ್ರಿ ಮಾಡುವ ಕಾದ ಐರನ್ ಬಾಕ್ಸ್ ಅನ್ನು ತನ್ನ ಕೈ ಮೇಲಿದ್ದ ಹಚ್ಚೆಯ ಮೇಲಿಟ್ಟು ಚರ್ಮ ಕಿತ್ತು ಬಂದ ಪರಿಣಾಮ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ಸೇನಾ ತರಬೇತಿದಾರ ಹವಾಲ್ದಾರ್ (ನಿವೃತ್ತ) ಜನಾರ್ಧನ್ ಹೇಳಿದರು.
ಅಲ್ಲದೇ ಮತ್ತೆ ಬಹುತೇಕ ವಿದ್ಯಾರ್ಥಿಗಳು ಹಾಗೂ ವಿದ್ಯಾವಂತ ನಿರುದ್ಯೋಗಿ ಯುವಕರು ಮೊಬೈಲ್‌ಗಳನ್ನು ನೋಡಿ ನೋಡಿ ಕಣ್ಣು ದೃಷ್ಟಿಗಳನ್ನು ತಮಗೆ ಅರಿವಿಲ್ಲದಂತೆಯೇ ಕಳೆದುಕೊಳ್ಳು ತ್ತಿದ್ದಾರೆ. ಹೆಚ್ಚಾಗಿ ಮೊಬೈಲ್‌ಗಳನ್ನು ಬಳಸುವ ಮತ್ತು ರಾತ್ರಿ ಹಗಲೆನ್ನದೇ ನೋಡುವ
(ಮೊದಲ ಪುಟದಿಂದ) ಕಣ್ಣುಗಳು ಅನಾರೋಗ್ಯಕ್ಕೆ ಸಿಲುಕುತ್ತಿರುವ ವಿಚಾರ ಯಾವುದಾದರೂ ನೇಮಕಾತಿಗಳಿಗೆ ಹೋದ ಸಂದರ್ಭ ಎದುರಾಗುವ ದೃಷ್ಟಿ ಪರೀಕ್ಷೆ ವೇಳೆ ತಿಳಿಯುತ್ತಿದೆ ಎಂದು ಜನಾರ್ಧನ್ ಹೇಳಿದ್ದು, ವಿದ್ಯಾರ್ಥಿಗಳು ಹಾಗೂ ವಿದ್ಯಾವಂತ ನಿರುದ್ಯೋಗಿ ಯುವಕರು ಹೆಚ್ಚು ಮೊಬೈಲ್ ಬಳಸದಂತೆ ಪ್ರತೀ ಪಾಲಕರು ನಿಗಾವಹಿಸುವಂತೆ ಕೋರಿದ್ದಾರೆ. ಆಧುನಿಕತೆ ಹಾಗೂ ತಂತ್ರಜ್ಞಾನ ಎಷ್ಟು ಪ್ರಯೋಜನವೋ ಅಷ್ಟೇ ಹಾನಿಯನ್ನು ಉಂಟು ಮಾಡುತ್ತಿರುವ ಸತ್ಯವನ್ನು ಪ್ರತಿಯೊಬ್ಬರು ಅರಿಯಬೇಕಿದೆ.