ನಾಪೋಕ್ಲು, ಏ. ೪: ಜರಿ ಸೀರೆ, ತಲೆಗೆ ವಸ್ತçಕಟ್ಟಿ ಸಂಭ್ರಮದಿAದ ಬೀಗುತ್ತಿರುವ ಹೆಂಗಳೆಯರು. ನಾವೇನೂ ಇವರಿಗಿಂತ ಕಡಿಮೆಯಿಲ್ಲ ಎಂಬAತೆ ಕುಪ್ಯಚಾಲೆ, ಕೈಯ್ಯಲ್ಲಿ ಕೋಲು, ಕೋವಿ, ಕತ್ತಿ ಹಿಡಿದು ನಿಂತಿರುವ ಪುರುಷರು. ಸಂಭ್ರಮದಿAದ ತಮ್ಮನ್ನು ತಾವು ಮರೆತಂತೆ ಅತ್ತಿಂದಿತ್ತ ಓಡಾಡುತ್ತಿರುವ ಪುಟಾಣಿಗಳು. ಅಲ್ಲಲ್ಲಿ ಕೊಡವಪಾಟ್, ಬಾಳೋಪಾಟ್, ತಾಲಿಪಾಟ್, ಸಂಬAಧ ಅಡುಕುವೊ, ಕಪ್ಪೆಯಾಟ್, ಉಮ್ಮತ್ತಾಟ್, ಬೊಳಕಾಟ್, ಕೋಲಾಟ್, ಪರಿಯಕಳಿ, ವಾಲಗತ್ತಾಟ್ ನಡೆಯುತ್ತಿರುವ ದೃಶ್ಯ ನಾಪೋಕ್ಲು, ಏ. ೪: ಜರಿ ಸೀರೆ, ತಲೆಗೆ ವಸ್ತçಕಟ್ಟಿ ಸಂಭ್ರಮದಿAದ ಬೀಗುತ್ತಿರುವ ಹೆಂಗಳೆಯರು. ನಾವೇನೂ ಇವರಿಗಿಂತ ಕಡಿಮೆಯಿಲ್ಲ ಎಂಬAತೆ ಕುಪ್ಯಚಾಲೆ, ಕೈಯ್ಯಲ್ಲಿ ಕೋಲು, ಕೋವಿ, ಕತ್ತಿ ಹಿಡಿದು ನಿಂತಿರುವ ಪುರುಷರು. ಸಂಭ್ರಮದಿAದ ತಮ್ಮನ್ನು ತಾವು ಮರೆತಂತೆ ಅತ್ತಿಂದಿತ್ತ ಓಡಾಡುತ್ತಿರುವ ಪುಟಾಣಿಗಳು. ಅಲ್ಲಲ್ಲಿ ಕೊಡವಪಾಟ್, ಬಾಳೋಪಾಟ್, ತಾಲಿಪಾಟ್, ಸಂಬAಧ ಅಡುಕುವೊ, ಕಪ್ಪೆಯಾಟ್, ಉಮ್ಮತ್ತಾಟ್, ಬೊಳಕಾಟ್, ಕೋಲಾಟ್, ಪರಿಯಕಳಿ, ವಾಲಗತ್ತಾಟ್ ನಡೆಯುತ್ತಿರುವ ದೃಶ್ಯ ಕೌನ್ಸಿಲ್ ಅಧ್ಯಕ್ಷ ನಂದಿನೆರವAಡ ನಾಚಪ್ಪ, ಕೊಡವ ಸಮುದಾಯ ಉಳಿಯಬೇಕಾದರೆ, ಸಂವಿಧಾನದ ಹಕ್ಕನ್ನು ಪಡೆಯುವ ಅಗತ್ಯವಿದೆ. ಅದಕ್ಕಾಗಿ ಬುಡಕಟ್ಟು ಪಂಗಡದ ಪಟ್ಟಿಗೆ ಸೇರ್ಪಡೆಯಾಗಬೇಕು ಎಂದರು. ನಾವು ನಿಜವಾದ ಗಿರಿಜನರು, ರಾಜರ ಕಾಲದಲ್ಲಿ, ಬ್ರಿಟೀಷ್‌ರ ಕಾಲದಲ್ಲಿ ನಮ್ಮನ್ನು ಪರ್ವತ ವಾಸಿಗಳು ಎಂದು ಕರೆಯುತ್ತಿದ್ದರು. ಬುಡಕಟ್ಟು ಎಂದರೆ ನಮ್ಮ ಕುಟುಂಬ. ಬುಡಕಟ್ಟು ಸ್ಥಾನಮಾನ

(ಮೊದಲ ಪುಟದಿಂದ) ಪಡೆಯಲು ಯಾವದೇ ಕೀಳರಿಮೆ, ಹಿಂಜರಿಕೆ ಬೇಡ. ನಮ್ಮ ಸಮುದಾಯ ಏಳಿಗೆ ಹೊಂದಬೇಕಾದರೆ ಇದು ಅನಿವಾರ್ಯ ಎಂದರು.

ಕೊಡವ ಸಂಸ್ಕೃತಿ, ನೆಲ, ಜಲ ಗಟ್ಟಿಯಾಗಿ ನಿಲ್ಲಬೇಕಾದರೆ ಸಂವಿಧಾನದ ಭದ್ರತೆ ಅಗತ್ಯ. ನಮ್ಮ ಹಕ್ಕನ್ನು ನಾವು ಪಡೆದುಕೊಳ್ಳಬೇಕು. ಅದು ಸಿಗದಿದ್ದಾಗ ಹೋರಾಟ ಮಾಡಬೇಕಾದ ಪರಿಸ್ಥಿತಿ ಸಹಜ ಎಂದರು. ಬುಡಕಟ್ಟು ಪಂಗಡದ ಪಟ್ಟಿಗೆ ಸೇರಬೇಕು ಎನ್ನುವ ಹೋರಾಟಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಅದನ್ನು ಕೇಳಲು ಅವರಿಗೆ ಯಾವದೇ ಹಕ್ಕಿಲ್ಲ. ನಮ್ಮ ಹಕ್ಕನ್ನು ನಾವು ಕೇಳುತ್ತಿದ್ದೇವೆ. ಬೇರೆಯವರ ಹಕ್ಕಿನ ಬಗ್ಗೆ ಪ್ರಶ್ನೆ ಮಾಡುವವರು ದೇಶ ವಿರೋಧಿಗಳು ಎಂದರು. ಎಲ್ಲಾ ಕೊಡವರು ಸ್ಥಿತಿವಂತರಲ್ಲ. ನಾವು ಸಂವಿಧಾನದ ಒಂದು ಭಾಗವಾಗಬೇಕು. ಕೊಡಗು ಬೇರೆ, ಕೊಡವರ ಪರಿಸರವೇ ಬೇರೆ. ಕೊಡವರ ಮಂದ್, ಐನ್‌ಮನೆ, ದೈವನೆಲೆ, ಇದೆಲ್ಲವೂ ಕೊಡವ ಲ್ಯಾಂಡ್ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕೊಡವ ಸಮಾಜದಲ್ಲಿ ಕಟ್ಟಡ ನಿರ್ಮಿಸಲು ೭ ಲಕ್ಷ ರೂ. ದೇಣಿಗೆ ನೀಡಿದ ದಾನಿ ಕಾಫಿ ಬೆಳೆಗಾರ, ಉದ್ಯಮಿ ಯವಕಪಾಡಿ ಗ್ರಾಮದ ಅಪ್ಪಾರಂಡ ಸುರೇಶ್ ಚಂಗಪ್ಪ ಮಾತನಾಡಿದರು.

ಈ ಸಂದರ್ಭದಲ್ಲಿ ಹಾಡು ಕರ್ನಾಟಕ ಖ್ಯಾತಿಯ ಗಾಯಕ ಮಚ್ಚಂಡ ಶರಣ್ ಅಯ್ಯಪ್ಪ, ೧೦ನೇ ತರಗತಿಯಿಂದ ಸ್ನಾತಕೋತ್ತರ ಪದವಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿ ಗಳನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕಾಂಡAಡ ಉಷಾ ಜೋಯಪ್ಪ, ಅಪ್ಪಾರಂಡ ಸುಶೀಲಾ ಚಂಗಪ್ಪ, ಕೊಡವ ಸಮಾಜದ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಮೂವೆರ ರೇಖಾ ಪ್ರಕಾಶ್, ಎಲ್ಲಾ ನಿರ್ದೇಶಕರು ಇದ್ದರು. ಕಲಿಯಂಡ ಬೀನಾ ಅಯ್ಯಣ್ಣ ಪ್ರಾರ್ಥನೆ, ಮಾಳೆಯಂಡ ಅಯ್ಯಪ್ಪ ಸ್ವಾಗತ, ಬಾಳೆಯಡ ದಿವ್ಯಾ ಮಂದಪ್ಪ ನಿರೂಪಿಸಿ, ಕಾರ್ಯದರ್ಶಿ ಕುಲ್ಲೇಟಿರ ಅಜಿತ್ ನಾಣಯ್ಯ ವಂದಿಸಿದರು.

-ಪಿ.ವಿ.ಪ್ರಭಾಕರ್